RCB vs RR: ರಿವ್ಯೂ ಅಲ್ಲಿ ಸತ್ಯಂಶ ಹೊರಬಂದರೂ, ಅಶ್ವಿನ್ ಬದಲಾಗಲಿಲ್ಲ. ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಹದ್ದು ಮೀರಿ ಮಾಡಿದ್ದೇನು ಗೊತ್ತೇ??

RCB vs RR: ಆರ್ಸಿಬಿ (RCB)ತಂಡದ ಪಂದ್ಯ ಎಂದರೆ ಅಭಿಮಾನಿಗಳಿಗೆ ಕುತೂಹಲ ಜಾಸ್ತಿ. ನಿನ್ನೆ ಆರ್ಸಿಬಿ ವರ್ಸಸ್ ಆರ್.ಆರ್ ತಂಡದ ನಡುವಿನ ಪಂದ್ಯ ನಡೆದಿದ್ದು, ಆರ್ಸಿಬಿ ತಂಡ ಇದರಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್.ಆರ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ಬ್ಯಾಟಿಂಗ್ ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಬೌಲಿಂಗ್ ಮಾಡುವಾಗ ನಡೆದ ಆ ಒಂದು ಘಟನೆ ಇಂದ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕೆಲ ನಿಮಿಷಗಳ ಗೊಂದಲ ಶುರುವಾಗಿತ್ತು.. ನಡೆದಿದ್ದೇನು ಎಂದರೆ..

RCB vs rr r ashwin not happy with decision of umpire RCB vs RR:
RCB vs RR: ರಿವ್ಯೂ ಅಲ್ಲಿ ಸತ್ಯಂಶ ಹೊರಬಂದರೂ, ಅಶ್ವಿನ್ ಬದಲಾಗಲಿಲ್ಲ. ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಹದ್ದು ಮೀರಿ ಮಾಡಿದ್ದೇನು ಗೊತ್ತೇ?? 2

ಮೊದಲಿಗೆ ಆರ್ಸಿಬಿ ತಂಡ ಬ್ಯಾಟಿಂಗ್ ಶುರು ಮಾಡಿದಾಗ, ವಿರಾಟ್ ಕೊಹ್ಲಿ (Virat Kohli) ಅವರನ್ನು ಟ್ರೆಂಟ್ ಅವರು ಮೊದಲ ಬಾಲ್ ನಲ್ಲೇ ಔಟ್ ಮಾಡಿದರು. ಆರಂಭದಲ್ಲಿ ಆರ್ಸಿಬಿ (RCB) ತಂಡವು ರನ್ಸ್ ಗಳಿಸಲು ಕಷ್ಟಪಟ್ಟಿತು, ನಂತರ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅತ್ಯುತ್ತಮ ಜೊತೆಯಾಟ ತೋರಿಸಿ, ಜೊತೆಯಾಗಿ 127 ರನ್ಸ್ ಗಳಿಸಿದರು. ಫಾಫ್ ಅವರು 39 ಎಸೆತಗಳಲ್ಲಿ 2 ಸಿಕ್ಸರ್, 8 ಬೌಂಡರಿ ಜೊತೆಗೆ 62 ರನ್ಸ್ ಗಳಿಸಿದರು, ಗ್ಲೆನ್ ಮ್ಯಾಕ್ಸ್ವೆಲ್ ಅವರು 44 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ನೆರವಿನಿಂದ 77 ರನ್ಸ್ ಭಾರಿಸಿದರು.

ಇದನ್ನು ಓದಿ: Arshdeep: ಅರ್ಷದೀಪ್ ಮುರಿದು ಹಾಕಿದ ಎರಡು ಸ್ಟಂಪ್ ಗಳ ಬೆಲೆ ಎಷ್ಟು ಗೊತ್ತೇ?? ಈ ಮೊತ್ತವನ್ನು ಯಾರು ಕಟ್ಟುತ್ತಾರೆ ಗೊತ್ತೇ?? ಯಪ್ಪಾ ಇಷ್ಟೊಂದಾ??

ಈ ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ಆರ್.ಆರ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ (Sanju Samson) ಅವರು ಆಫ್ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಅವರನ್ನು ಬೌಲಿಂಗೆ ಗೆ ಕರೆತಂದರು. ಆ ಓವರ್ ನ 3ನೇ ಎಸೆತದಲ್ಲಿ ಅಶ್ವಿನ್ ಅವರು ಬೌಲಿಂಗ್ ಮಾಡಿದಾಗ, ಅಂಪೈರ್ ವೈಡ್ ಬಾಲ್ ಎಂದು ಘೋಷಿಸಿದರು, ಅದರ ಜೊತೆಗೆ ಮ್ಯಾಕ್ಸ್ವೆಲ್ ಅವರು ಒಂದು ರನ್ ಓಡಿದರು. ಆಗ ಅಶ್ವಿನ್ ಅವರಿಗೆ ಅಸಮಾಧಾನವಾಗಿ ಅದು ವೈಡ್ ಬಾಲ್ ಅಲ್ಲ ಎಂದು ಅಂಪೈರ್ ಜೊತೆಗೆ ವಾದ ಮಾಡುವುದಕ್ಕೆ ಶುರು ಮಾಡಿದರು. ಹಾಗೆಯೇ, ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರಿಗೆ ರಿವ್ಯೂ ತೆಗೆದುಕೊಳ್ಳಲು ಹೇಳಿದರು.

ರಿವ್ಯೂ ತೆಗೆದುಕೊಳ್ಳುತ್ತಿದ್ದರು, ಅಂಪೈರ್ ಅವರ ಜೊತೆಗೆ ಮಾತನಾಡುತ್ತಲೇ ಇದ್ದರು. ಇದರಿಂದ ಸಮಯ ಕೂಡ ವ್ಯರ್ಥವಾಯಿತು. ಇತ್ತ ಥರ್ಡ್ ಅಂಪೈರ್ ಕೂಡ ಮ್ಯಾಕ್ಸ್ವೆಲ್ ಅವರಿಗೆ ಬಾಲ್ ಸೋಕಿಲ್ಲ ಎನ್ನುವ ಕಾರಣಕ್ಕೆ ವೈಡ್ ಬಾಲ್ ಎಂದು ಘೋಷಿಸಿದರು. ಇದರಿಂದ ಅಶ್ವಿನ್ ಅವರಿಗೆ ನಿರಾಸೆಯಾಯಿತು. ಈ ಘಟನೆ ಸ್ವಲ್ಪ ಸುದ್ದಿಯಾಗಿದೆ. ಹಾಗೆಯೇ, ಪಂದ್ಯದಲ್ಲಿ ಗೆದ್ದಿದ್ದು ಕೂಡ ಆರ್ಸಿಬಿ ತಂಡ ಆಗಿದ್ದು, ಅಭಿಮಾನಿಗಳಿಗೆ ಸಂತಸವಾಗಿದೆ.

ಇದನ್ನು ಓದಿ: Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.