RCB 2023: ಆರ್ಸಿಬಿ ತಂಡದಲ್ಲಿ ಟ್ವಿಸ್ಟ್?? ಡುಪ್ಲೆಸಿಸ್ ಸರಿ ಹೋದರೂ ವಿರಾಟ್ ನಾಯಕನಾಗಿರುವುದು ಯಾಕೆ ಗೊತ್ತೇ?? ಅದೇನ ಆಲೋಚನೆ??

RCB 2023: ನಿನ್ನೆ ಆರ್ಸಿಬಿ (RCB) ತಂಡದ ಆರನೇ ಪಂದ್ಯ ನಡೆಯಿತು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ಸಿಬಿ ವರ್ಸಸ್ ಆರ್.ಆರ್ (RCB vS RR) ನಡುವೆ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದು, ಫಾಫ್ ಡು ಪ್ಲೆಸಿಸ್ (Faf du Plessis) ಅವರಲ್ಲ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli). ಪಂಜಾಬ್ ವಿರುದ್ಧದ ಪಂದ್ಯದಲ್ಲೂ ವಿರಾಟ್ ಅವರೇ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಫಾಫ್ ಅವರು ಬ್ಯಾಟಿಂಗ್ ಮಾಡುತ್ತಿದ್ದರು ವಿರಾಟ್ ಅವರು ಕ್ಯಾಪ್ಟನ್ಸಿ ಮಾಡುತ್ತಿರುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಶುರುವಾಗಿದೆ..

why virat leading again rcb as a captain RCB 2023:
RCB 2023: ಆರ್ಸಿಬಿ ತಂಡದಲ್ಲಿ ಟ್ವಿಸ್ಟ್?? ಡುಪ್ಲೆಸಿಸ್ ಸರಿ ಹೋದರೂ ವಿರಾಟ್ ನಾಯಕನಾಗಿರುವುದು ಯಾಕೆ ಗೊತ್ತೇ?? ಅದೇನ ಆಲೋಚನೆ?? 2

ಇದಕ್ಕೆ ಉತ್ತರ ಕೂಡ ಸಿಕ್ಕಿದ್ದು, ವಿರಾಟ್ ಅವರು ಈ ಕ್ಯಾಪ್ಟನ್ಸಿ ವಹಿಸಿಕೊಂಡಿರುವುದಕ್ಕೆ ಮುಖ್ಯ ಕಾರಣ, ಫಾಫ್ ಡು ಪ್ಲೆಸಿಸ್ ಅವರ ಆರೋಗ್ಯ. ಸಿ.ಎಸ್.ಕೆ (CSK) ವಿರುದ್ಧದ ಪಂದ್ಯದಲ್ಲಿ ಫಾಫ್ ಅವರ ಪಕ್ಕೆಲುಬಿಗೆ ಗಾಯವಾಗಿತ್ತು, ಆದರ ನೋವು ಇನ್ನು ಕಡಿಮೆಯಾಗಿಲ್ಲ. ಹಾಗಾಗಿ ಫಾಫ್ ಅವರು ಕ್ಯಾಪ್ಟನ್ಸಿ ಇಂದ ದೂರ ಉಳಿದಿದ್ದು, ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಾಯಿಸಿಕೊಂಡು, ಕ್ಯಾಪ್ಟನ್ಸಿಯನ್ನು ವಿರಾಟ್ ಅವರಿಗೆ ಕೊಡಲಾಗಿದೆ.

ಇದನ್ನು ಓದಿ: RCB vs RR: ರಿವ್ಯೂ ಅಲ್ಲಿ ಸತ್ಯಂಶ ಹೊರಬಂದರೂ, ಅಶ್ವಿನ್ ಬದಲಾಗಲಿಲ್ಲ. ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಹದ್ದು ಮೀರಿ ಮಾಡಿದ್ದೇನು ಗೊತ್ತೇ??

ಒಂದು ವೇಳೆ ಫಾಫ್ ಅವರನ್ನು ತಂಡದಿಂದ ಹೊರಗಿಟ್ಟರೆ ಅಥವಾ ಬದಲಾವಣೆ ಮಾಡಿದರೆ, ಮತ್ತೊಬ್ಬ ಹೊಸ ಆಟಗಾರನನ್ನು ತಂಡಕ್ಕೆ ತರಬೇಕು. ಹಾಗೆಯೇ, ಹೊಸ ಕ್ಯಾಪ್ಟನ್ ಅನ್ನು ಸಹ ಆಯ್ಕೆ ಮಾಡಬೇಕು. ಹಾಗಾಗಿ ಆರ್ಸಿಬಿ ತಂಡ ಉತ್ತಮ ನಿರ್ಧಾರ ಮಾಡಿದ್ದು, ವಿರಾಟ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಜ್ ಅವರಿಗೆ ಜವಾಬ್ದಾರಿ ಕೊಟ್ಟು, ಫಾಫ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಫಾಫ್ ಅವರು ಬ್ಯಾಟಿಂಗ್ ಗೆ ಮಾತ್ರ ಬರುತ್ತಿದ್ದಾರೆ.

ಫೀಲ್ಡಿಂಗ್ ನಲ್ಲಿ ಫಾಫ್ ಅವರ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಎಂಟ್ರಿ ಕೊಡುತ್ತಿದ್ದಾರೆ. ಈ ರೀತಿಯಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಆಗದೆ ಹಾಗೆ ಫ್ರಾಂಚೈಸಿ ನಿರ್ಧಾರ ಮಾಡಿದ್ದು, ಫಾಫ್ ಡು ಪ್ಲೆಸಿಸ್ ಅವರು ಹುಷಾರಾಗುವ ವರೆಗು ವಿರಾಟ್ ಅವರು ಆರ್ಸಿಬಿ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಲಿದ್ದಾರೆ. ವಿರಾಟ್ ಅವರ ಕ್ಯಾಪ್ಟನ್ಸಿಯಲ್ಲಿ ಆರ್ಸಿಬಿ ತಂಡ ಎರಡು ಪಂದ್ಯಗಳನ್ನು ಗೆದ್ದಿದೆ.

ಇದನ್ನು ಓದಿ: Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?

Comments are closed.