Best Scooter: ದೇಶ ಪೂರ್ತಿ ಬಾರಿ ಬೇಡಿಕೆ ಪಡೆಯುತ್ತಿರುವ ಸ್ಕೂಟಿಗಳು; ಇದರ ಬೆಲೆ ಹಾಗೂ ವೈಶಿಷ್ಟತೆ ಕೇಳಿದರೆ, ನೀವು ಖರೀದಿ ಮಾಡ್ತೀರಾ. ಎಷ್ಟು ಗೊತ್ತೇ?
Best Scooter: ಈಗಿನ ಕಾಲದಲ್ಲಿ ಸ್ಕೂಟರ್ ಗಳಿಗೆ ಹೆಚ್ಚು ಬೇಡಿಕೆ ಶುರುವಾಗಿದೆ. ಬೈಕ್ ಗಿಂತ ಹೆಚ್ಚಾಗಿ, ಸ್ಕೂಟರ್ ಗಳನ್ನೇ ಹೆಚ್ಚು ಖರೀದಿ ಮಾಡಲಾಗುತ್ತಿದೆ. ಬೈಕ್ ಗಳಿಗಿಂತ ಸ್ಕೂಟರ್ ನಲ್ಲೇ ಹೆಚ್ಚು ಪ್ರಯೋಜನ ಸಹ ಸಿಗುತ್ತಿದೆ. ಬೈಕ್ ಗಿಂತ ಸ್ಕೂಟರ್ ನಲ್ಲಿ ಸುಲಭವಾಗಿ ಓಡಾಡಬಹುದು. ಸ್ಕೂಟರ್ ನಲ್ಲಿ ಸ್ಟೋರೇಜ್ ಕೆಪಾಸಿಟಿ ಕೂಡ ಹೆಚ್ಚಾಗಿರುತ್ತದೆ. ಈಗಿನ ಸ್ಕೂಟರ್ ಗಳಲ್ಲಿ ಗೇರ್ ಬದಲಿಸಬೇಕು ಎನ್ನುವ ಗೋಜಲು ಕೂಡ ಇಲ್ಲ.

ಇದೀಗ ಆಟೋಮೊಬೈಲ್ಸ್ ಮಾರ್ಕೆಟ್ ಗೆ ಹೊಸದಾಗಿ ಒಂದು ಸ್ಕೂಟರ್ ಬಂದಿದ್ದು, ಈ ಸ್ಕೂಟರ್ ಮುಂದೆ ಬೈಕ್ ಗಳ ಬೆಲೆ ಕೂಡ ಕಡಿಮೆ ಆಗುತ್ತಿದೆ. ಬಜಾಜ್ ಪಲ್ಸರ್, ಹೀರೋ ಹೆಚ್.ಎಫ್ ಡಿಲಕ್ಸ್ ಈ ಬೈಕ್ ಗಳು ಕೂಡ ಸ್ಕೂಟಿ ಎದುರು ಡಲ್ ಹೊಡೆಯುತ್ತಿದೆ. ಈ ಸ್ಕೂಟರ್ ಅನ್ನು 1 ವರ್ಷದಲ್ಲಿ 21ಲಕ್ಷಕ್ಕಿಂತ ಯೂನಿಟ್ ಗಳನ್ನು ಖರೀದಿ ಮಾಡಬಹುದು. ಈ ವರ್ಷ 2023 ನಲ್ಲಿ ಹೆಚ್ಚು ಮಾರಾಟ ಆಗಿರುವ ಸ್ಕೂಟಿಗಳ ಬಗ್ಗೆ ಮಾಹಿತಿ ನೀಡುತ್ತೇವೆ..
ಹೋಂಡಾ ಆಕ್ಟಿವ :- ಈ ವರ್ಷ ಅತಿ ಹೆಚ್ಚು ಮಾರಾಟ ಆಗಿರುವ ಸ್ಕೂಟರ್ ಗಳಲ್ಲಿ ಇದು ಅತಿಹೆಚ್ಚು ಮಾರಾಟ ಆದ ಸ್ಕೂಟರ್ ಆಗಿದೆ. ವರ್ಷಕ್ಕೆ 21.49ಲಕ್ಷ ಯೂನಿಟ್ ಮಾರಾಟವಾಗಿದೆ. ಕಳೆದ ವರ್ಷ ಈ ಬೈಕ್ 18.08 ಲಕ್ಷ ಯೂನಿಟ್ ಮಾರಾಟವಾಗಿತ್ತು. ಈ ವರ್ಷ ಮಾರಾಟದಲ್ಲಿ 25% ಹೆಚ್ಚು ಮಾರಾಟವಾಗಿದೆ. ಈ ಸ್ಕೂಟಿ ಬೆಲೆ 75,000 ಇಂದ ಶುರುವಾಗುತ್ತದೆ.
ಟಿವಿಎಸ್ ಜುಪಿಟರ್ :- ಇದು ಅತಿಹೆಚ್ಚು ಮಾರಾಟ ಆಗಿರುವ ಎರಡನೇ ಸ್ಕೂಟಿ ಆಗಿದೆ. ಈ ಸ್ಕೂಟಿ ಕಳೆದ ವರ್ಷ 7.29ಲಕ್ಷ ಯೂನಿಟ್ ಮಾರಾಟ ಮಾಡಲಾಗಿದೆ. ಈಗ ಮಾರಾಟದಲ್ಲಿ 44% ಹೆಚ್ಚು ಮಾರಾಟ ಆಗಿದೆ .
ಸುಜುಕಿ ಆಕ್ಸೆಸ್ :- ಅತಿಹೆಚ್ಚು ಮಾರಾಟ ಆಗಿರುವ ಸ್ಕೂಟರ್ ಗಳ ಪೈಕಿ ಇದು 3ನೇ ಸ್ಥಾನದಲ್ಲಿದೆ. FY 2023 ನಲ್ಲಿ 4.98 ಲಕ್ಷ ಯೂನಿಟ್ ಮಾರಾಟ ಆಗಿದೆ. ಈ ವರ್ಷ 8.30% ಹೆಚ್ಚಿನ ಮಾರಾಟ ನಡೆದಿದೆ.
TVS NTorq :- ಅತಿಹೆಚ್ಚು ಮಾರಾಟ ಆಗಿರುವ ಬೈಕ್ ಗಳ ಪೈಕಿ ಇದು 4ನೇ ಸ್ಥಾನದಲ್ಲಿದೆ. ಈ ಸ್ಕೂಟರ್ ಕಳೆದ ವರ್ಷ 2.90ಲಕ್ಷ ಯೂನಿಟ್ ಗಳಷ್ಟು ಮಾರಾಟ ಮಾಡಿದೆ. 16% ಹೆಚ್ಚು ಬೆಳವಣಿಗೆ ಕಂಡಿದೆ.
ಹೋಂಡಾ ಡಿಯೋ :- ಈ ಸ್ಕೂಟರ್ ಅತಿಹೆಚ್ಚು ಮಾರಾಟ ಆಗಿರುವ ಸ್ಕೂಟರ್ ಗಳ ಪೈಕಿ ಐದನೇ ಸ್ಥಾನದಲ್ಲಿದೆ. ಇದು 2.35ಲಕ್ಷ ಯೂನಿಟ್ ಗಳಷ್ಟು ಮಾರಾಟವಾಗಿದೆ. ಈ ವರ್ಷ 13% ಹೆಚ್ಚು ಮಾರಾಟವಾಗಿದೆ.
Comments are closed.