SBI Rules: ಕೊನೆಗೂ ಗ್ರಾಹಕರ ಕಷ್ಟ ಅರ್ಥ ಮಾಡಿಕೊಳ್ಳುತ್ತಿರುವ SBI: ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ನಲ್ಲಿ ಏನೆಲ್ಲಾ ಸಿಗಲಿದೆ ಗೊತ್ತೇ?
SBI Rules: ನಮ್ಮ ದೇಶದ ಅತಿ ದೊಡ್ಡ ಬ್ಯಾಂಕ್ ಎನ್ನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತಮ್ಮ ಬ್ಯಾಂಕ್ ನ ಗ್ರಾಹಕರಿಗಾಗಿ ಕೆಲವು ಹೊಸ ಯೋಜನೆಗಳನ್ನು ಹೊರತಂದಿದ್ದು, ಗ್ರಾಹಕರಿಗೆ ಇದರಿಂದ ಹೆಚ್ಚಿನ ಸೌಲಭ್ಯ ಸಿಗಲಿದೆ. SBI ನಲ್ಲಿ ಇನ್ನುಮುಂದೆ ಐರಿಷ್ ಸ್ಕ್ಯಾನ್ ಸೇವೆ ಸಿಗಬಹುದು ಎನ್ನಲಾಗುತ್ತಿದ್ದು, ಇದು ಹಿರಿಯ ನಾಗರೀಕರಿಗೆ ಬಹಳ ಒಳ್ಳೆಯ ಸೌಲಭ್ಯ ಹಾಗೂ ಪ್ರಯೋಜನಗಳನ್ನು ನೀಡಲಿದೆ. ನಮ್ಮಲ್ಲಿ ಕೆಲವು ಹಿರಿಯ ನಾಗರೀಕರು ಪೆನ್ಶನ್ ಪಡೆಯಲು ಕಷ್ಟಪಡುತ್ತಾರೆ, ಅವರ ಬೆರಳಚ್ಚು ಸರಿಯಾಗಿ ಸಿಗುವುದಿಲ್ಲ..

ಅದರಿಂದ ಪೆನ್ಶನ್ ಪಡೆಯುವುದಕ್ಕೆ ತೊಂದರೆ ಆಗುತ್ತದೆ, ಆ ಕಾರಣಕ್ಕೆ ಎಸ್.ಬಿ.ಐ ಈಗ ಐರಿಷ್ ಸ್ಕ್ಯಾನರ್ ಸೇವೆಯನ್ನು ಶುರು ಮಾಡಲಿದೆ. ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಇಲ್ಲದೆ ಹೋದರೆ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಐರಿಷ್ ಸ್ಕ್ಯಾನರ್ ಸೇವೆಗಳು ಶುರುವಾಗಬಹುದು ಎನ್ನಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಸೇವೆಯಿಂದ ವಯಸ್ಸಾದ ಗ್ರಾಹಕರು ಪೆನ್ಶನ್ ಪಡೆಯಲು ಬ್ಯಾಂಕ್ ಗೆ ಹೋಗುವ ಅಗತ್ಯವೇ ಬರುವುದಿಲ್ಲ.
ಅವರು ತಮಗೆ ಹತ್ತಿರ ಇರುವ ಬ್ಯಾಂಕಿಂಗ್ ಮಿತ್ರ ಚಾನೆಲ್ ಗೆ ಹೋಗಿ, ಪೆನ್ಶನ್ ಪಡೆದುಕೊಳ್ಳಬಹುದು. ಇದರಿಂದ ಅವರು ಕಷ್ಟವಾಗದ ಹಾಗೆ ಪೆನ್ಶನ್ ಪಡೆಯಬಹುದು. ಎಸ್.ಬಿ.ಐ ಈಗ ನೀಡಿರುವ ಮಾಹಿತಿ ಪ್ರಕಾರ, ಎಲ್ಲಾ ಗ್ರಾಹಕರಿಗೂ ಸುಲಭ ಆಗುವ ಹಾಗೆ, ಐರಿಷ್ ಸ್ಕ್ಯಾನರ್ ಸೇವೆಗಳನ್ನು BC ಅಥವಾ CSP ಇಂದ ನೀಡಲಾಗುತ್ತದೆ. ಹಿರಿಯರ ನಾಗರೀಕರ ಬೆರಳಚ್ಚು ಸರಿಯಾಗಿ ಸಿಗದೆ ಇದ್ದಾಗ, ಪೆನ್ಶನ್ ಪಡೆಯಲು ಸಾಧ್ಯವಾಗದೆ ಹಾಗೆ ಹೋಗಬೇಕಿತ್ತು..
ಇಂಥ ಒಂದು ಒಡಿಶಾದಲ್ಲಿ ನಡೆದಿತ್ತು, ಇದರಿಂದ ಬಹಳಷ್ಟು ಟ್ರೋಲ್ ಹಾಗೂ ಟೀಕೆಗಳನ್ನು ಎದುರಿಸುವ ಹಾಗೆ ಆಗಿತ್ತು. ಈ ಘಟನೆ ಬಗ್ಗೆ ಹಣಕಾಸು ಸಚಿವರು ಮಾನವೀಯತೆ ಇಂದ ವರ್ತಿಸಿ ಎಂದು ಸಲಹೆ ನೀಡಿದ್ದರು.. ಈ ಕಾರಣಕ್ಕೆ ಎಸ್.ಬಿ.ಐ ಅವರಿಗೆ ಸುಲಭ ಆಗುವ ಹಾಗೆ, ಮನೆಯಲ್ಲೇ ಪೆನ್ಶನ್ ಪಡೆಯುವ ಹಾಗೆ ಮಾಡುವುದಾಗಿ ಎಸ್.ಬಿ.ಐ ಭರವಸೆ ನೀಡಿತ್ತು..ಹಾಗಾಗಿ ಐರಿಷ್ ಸ್ಕ್ಯಾನರ್ ಸೇವೆ ಶುರುವಾಗುತ್ತಿದ್ದು, ಇದು ಶುರುವಾದರೆ, ಹೆಚ್ಚು ದೂರ ಹೋಗದೆ ಹತ್ತಿರದಲ್ಲೆ ಪೆನ್ಶನ್ ಪಡೆಯಬಹುದು.
Comments are closed.