Anupama Parameswaran: ಚಿಕ್ಕ ವಯಸ್ಸು ಸಾಧಿಸುವುದು ತುಂಬಾ ಇದ್ದರೂ ಅವಕಾಶಕ್ಕಾಗಿ ಕೆಟ್ಟ ನಿರ್ಧಾರ ತೆಗೆದುಕೊಂಡ ಖ್ಯಾತ ನಟಿ; ಇವೆಲ್ಲ ಈ ವಯಸ್ಸಿಗೆ ಬೇಕಿತ್ತಾ ಎಂದ ಫ್ಯಾನ್ಸ್.
Anupama Parameswaran: ನಟಿ ಅನುಪಮಾ ಪರಮೇಶ್ವರನ್ ಇಂದು ದಕ್ಷಿಣ ಭಾರತ ಚಿತ್ರರಂಗ ಇಷ್ಟಪಡುವ ಸ್ಟಾರ್ ಕಲಾವಿದೆಯರಲ್ಲಿ ಇವರು ಕೂಡ ಒಬ್ಬರು. ಮೂಲತಃ ಮಲಯಾಳಂನವರಾದ ಅನುಪಮಾ ಅವರು ಮೊದಲು ನಟಿಸಿದ್ದು ಪ್ರೇಮಂ (Premam) ಸಿನಿಮಾದಲ್ಲಿ. ಆ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದ ಹಾಗೆ ಅನುಪಮಾ ಅವರಿಗೆ ಬೇರೆ ಭಾಷೆಗಳಿಂದ ಕೂಡ ಒಳ್ಳೆಯ ಅವಕಾಶಗಳು ಬರುವುದಕ್ಕೆ ಶುರುವಾದವು. ಮಲಯಾಳಂ ಹಾಗೂ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಇವರು ನಟಿಸಿದ ಕಾರ್ತಿಕೇಯ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಕನ್ನಡದಲ್ಲಿ ಪವರ್ ಸ್ಟಾರ್ Puneeth Rajkumar ಅವರೊಡನೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿ, ಕನ್ನಡಿಗರಿಗೂ ಹತ್ತಿರವಾಗಿದ್ದರು. ಇತ್ತೀಚೆಗೆ ತೆಲುಗಿನ 18 ಪೇಜಸ್ (18 Pages) ಸಿನಿಮಾದಲ್ಲಿ ಸಹ ನಟಿಸಿ, ಅದು ಕೂಡ ಸಕ್ಸಸ್ ಆಯಿತು. ಹೀಗೆ ಇವರ ಎಲ್ಲಾ ಸಿನಿಮಾಗಳು ಸಕ್ಸಸ್ ಆಗುತ್ತಿರುವುದರಿಂಡ್ ಅವಕಾಶಗಳು ಕೂಡ ಹೆಚ್ಚಾಗಿಯೇ ಬರುತ್ತಿದೆ..
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅನುಪಮಾ ಅವರಿಗೆ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಇದೆ ಎಂದೇ ಹೇಳಬಹುದು. ಸಿನಿಮಾ, ಓಟಿಟಿ ಎಲ್ಲಾ ತರದಲ್ಲೂ ಕಾಣಿಸಿಕೊಳ್ಳುತ್ತಿರುವ ಅನುಪಮ ಅವರು ಓಟಿಟಿಗೆ ಸಂಬಂಧ ಪಟ್ಟ ಹಾಗೆ ಒಂದು ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಆ ನಿರ್ಧಾರಕ್ಕೆ ಕಾರಣ ಏನು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ ಅನು.. “ಮೊದಲೆಲ್ಲಾ ನನಗೆ ಯಾವುದಾದರು ಪಾತ್ರಕ್ಕೆ ಓಕೆ ಹೇಳುವ ಮೊದಲು, ಅಭಿಮಾನಿಗಳು ನನ್ನನ್ನು ಆ ಪಾತ್ರದಲ್ಲಿ ಸ್ವೀಕರಿಸುತ್ತಾರಾ ಎಂದು ಭಯವಿತ್ತು, ಪ್ರಶ್ನೆಗಳು ಇತ್ತು.
ಅಂಥ ಪ್ರಶೆಂಗಳು ಮನಸ್ಸು ಉಸಿರುಗಟ್ಟಿಸುತ್ತಿದ್ದವು. ಆದರೆ 2021ರಲ್ಲಿ ನಾನು ನಟಿಸಿದ ಫ್ರೀಡಂ ಮಿಡ್ ನೈಟ್ ಶಾರ್ಟ್ ಫಿಲ್ಮ್ ಗೆ ಅಭಿಮಾನಿಗಳಿಂದ ಬಂದ ಪ್ರತಿಕ್ರಿಯೆ ನೋಡಿ, ನನ್ನ ಆಲೋಚನೆ ಪೂರ್ತಿಯಾಗಿ ಬದಲಾಗಿದೆ. ಜನರಿಗೆ ಇಷ್ಟ ಅಗುವಂಥ ಪಾತ್ರ ಆಯ್ಕೆ ಮಾಡಿದರೆ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ನನಗೆ ನಂಬಿಕೆ ಇದೆ. ಆಗಿನಿಂದ ನನ್ನ ಕೆರಿಯರ್ ಪ್ರಯಾಣ ಹೊಸದಾಗಿ ಶುರು ಮಾಡಲು ಇಷ್ಟಪಟ್ಟಿದ್ದೇನೆ. ಹೊಸ ಸಿನಿಮಾ ಇಂದ ನನ್ನ ಹಿಂದಿನ ಸಿನಿಮಾಗಳ ನೆನಪನ್ನು ಅಳಿಸಿ ಹಾಕಲು ಇಷ್ಟಪಡುತ್ತೇನೆ.. ಹೊಸ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತೇನೆ..” ಎಂದು ಹೇಳಿದ್ದಾರೆ ನಟಿ ಅನುಪಮಾ..
Comments are closed.