Meta: ಹಣ ಉಳಿಸಲು 10000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಮೆಟಾ(ಫೇಸ್ಬುಕ್) ಕೇವಲ ಮಾರ್ಕ್ ವಿಮಾನಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
Meta: ಫೇಸ್ ಭೂಮ್ ಸಂಸ್ಥೆ ಈಗ ಸುಮಾರು 10,000 ಕೆಲಸಗಾರರನ್ನು ತೆಗೆದು ಹಾಕಿ, ಅವರನ್ನೆಲ್ಲ ಮನೆಗೆ ಕಳಿಸಿದೆ. ಇತ್ತೀಚೆಗೆ 11,000 ಕೆಲಸಗಾರರನ್ನು ತೆಗೆದುಹಾಕಲಾಗಿತ್ತು, ಇದೀಗ ಮತ್ತೆ 10,000 ಕೆಲಸಗಾರರನ್ನು ತೆಗೆದುಹಾಕಲಾಗಿದೆ. ಹಣಕಾಸು ನಿರ್ವಹಣೆ ಮಾಡಲು ಈ ರೀತಿ ಕೆಲಸಗಾರರನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ಸಿಕ್ಕಿತ್ತು. ಆದರೆ ಈಗ ಫೇಸ್ಬುಕ್ ಸಂಸ್ಥೆಯು ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರ ವಿಮಾನಕ್ಕೆ ಎಷ್ಟು ಖರ್ಚು ಮಾಡಿದೆ ಗೊತ್ತಾ?

2023ರ ಮೂರರಿಂದ ನಾಲ್ಕು ತಿಂಗಳಿನಲ್ಲೇ ಸುಮಾರು 2.3ಮಿಲಿಯನ್ ಡಾಲರ್ ಗಳನ್ನು ಮಾರ್ಕ್ ಅವರ ಪ್ರೈವೇಟ್ ಜೆಟ್ ಪ್ರಯಣಕ್ಕಾಗಿ ಖರ್ಚು ಮಾಡಲಾಗಿದೆ. ಈ ಹಿಂದಿನ ವರ್ಷಗಳಿಗಿಂತ ಈ ವರ್ಷ ಇವರ ಪ್ರೈವೇಟ್ ಜೆಟ್ ಗೆ ಅತಿಹೆಚ್ಚು ಹಣ ಖರ್ಚಾಗಿದೆ. ಹಾಗೆಯೇ 2022ರಲ್ಲಿ ಮಾರ್ಕ್ ಅವರ ಎಲ್ಲಾ ವೆಚ್ಚಗಳಿಗೆ ಸುಮಾರು 27.1 ಮಿಲಿಯನ್ ಯು.ಎಸ್ ಡಾಲರ್ಸ್ ಖರ್ಚು ಮಾಡಲಾಗಿದೆ. ಹಾಗೆಯೇ ಈ ವರ್ಷ ಮಾರ್ಕ್ ಅವರ ಸೆಕ್ಯೂರಿಟಿ ಖರ್ಚು 14ಮಿಲಿಯನ್ ಗೆ ಏರಿಕೆಯಾಗಿದೆ.
ಇದರ ಅರ್ಥ ಸಂಸ್ಥೆಯು ಮಾರ್ಕ್ ಅವರಿಗೆ 4ಮಿಲಿಯನ್ ಡಾಲರ್ ಅಂದ್ರೆ 33 ಕೋಟಿ ರೂಪಾಗಿ ಸೆಕ್ಯೂರಿಟಿ ಅಲಯನ್ಸ್ ಆಗಿ ಕೊಡುತ್ತಿತ್ತು. ಈಗ ಅದು 10 ಮಿಲಿಯನ್ ಡಾಲರ್ಸ್ ಗೆ ಏರಿಕೆಯಾಗಿದೆ.. ಭಾರತ ಕರೆನ್ಸಿಯಲ್ಲಿ ಈ ಎಲ್ಲಾ ಖರ್ಚನ್ನು ಲೆಕ್ಕ ಹಾಕಿ ನೋಡಿದರೆ, ಮಾರ್ಕ್ ಜುಕರ್ಬರ್ಗ್ ಅವರಿಗೆ ₹18,84,67,405 ರೂಪಾಯಿಗಳನ್ನು ಕೊಡಲಾಗುತ್ತಿದೆ. 2022ರ ಆಕ್ಟೊಬರ್ ನಲ್ಲಿ ಸುಮಾರು 2 ತಿಂಗಳ ಸಮಯದಲ್ಲಿ ಬರೋಬ್ಬರಿ 28 ಟ್ರಿಪ್ ಗಳು ಮಾರ್ಕ್ ಅವರ ಪ್ರೈವೇಟ್ ಜೆಟ್ ನಲ್ಲಿ ನಡೆದಿದೆ. 2020ರಲ್ಲಿ ಇವರ ಪ್ರೈವೇಟ್ ಜೆಟ್ ಖರ್ಚು 1.8ಮಿಲಿಯನ್ ಡಾಲರ್ಸ್, 2021ರಲ್ಲಿ 1.6 ಮಿಲಿಯನ್, 2022ರಲ್ಲಿ 2.3ಮಿಲಿಯನ್ ಆಗಿದೆ.
ಇದು ಎಷ್ಟು ದೊಡ್ಡ ಮೊತ್ತ ಎಂದು ಅರ್ಥಮಾಡಿಕೊಳ್ಳುವುದಕ್ಕೆ ಅಬ್ಬಾ ಎನ್ನಿಸುತ್ತದೆ. ಮಾರ್ಕ್ ಅವರಿಗೆ ಇಷ್ಟು ದೊಡ್ಡ ಮೊತ್ತ ಕೊಡಲಾಗುತ್ತಿದೆ, ಆದರೆ ಹಣಕಾಸಿನ ನಿರ್ವಹಣೆ ಆಗುತ್ತಿಲ್ಲ ಎನ್ನುವ ಕಾರಣ ನೀಡಿ, ಒಂದು ಸಾರಿ 11,000 ಕೆಲಸಗಾರರನ್ನು ತೆಗೆದುಹಾಕಿ, ಮತ್ತೊಂದು ಸಾರಿ 10,000 ಕೆಲಸಗಾರರನ್ನು ತೆಗೆದುಹಾಕಿರುವುದಕ್ಕೆ ಈಗ ನೆಟ್ಟಿಗರ ಪೈಕಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
Comments are closed.