JIO Air Fiber: ಏರ್ಟೆಲ್, ಆಕ್ಟ್ ಗಳಿಗೆ ಶಾಕ್ ಕೊಡಲು ಮುಂದೆ ಬಂದ ಜಿಯೋ: ಕೆಲವೇ ದಿನಗಳಲ್ಲಿ ಬರುತ್ತಿದೆ ಇಂಟರ್ನೆಟ್ ಗಾಗಿ ವಿಶೇಷ ಸಾಧನ. ಏನೆಲ್ಲಾ ಮಾಡುತ್ತೆ ಗೊತ್ತೇ??
JIO Air Fiber: ಜಿಯೋ ಸಂಸ್ಥೆ ಒಂದಲ್ಲ ಒಂದು ಹೊಸತನದಿಂದ ತನ್ನ ಗ್ರಾಹಕಾರನ್ನು ಸೆಳೆಯುತ್ತಿದೆ. ಇದೀಗ ಜಿಯೋ ಸಂಸ್ಥೆಯು ಹೊಸದಾಗಿ ಜಿಯೋ ಏರ್ ಫೈಬರ್ ಪರಿಚಯಿಸುವುದಕ್ಕೆ ಕಾದಿದೆ. ಜಿಯೋ ಏರ್ ಫೈಬರ್ ಬಗ್ಗೆ ಕಳೆದ ವರ್ಷ ತಮ್ಮ 45 ನೇ ಕಾನ್ಫರೆನ್ಸ್ ನಲ್ಲಿ ತಿಳಿಸಿತ್ತು. ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಇನ್ನು ಕೆಲವೇ ತಿಂಗಳುಗಳಲ್ಲಿ ಜಿಯೋ ಏರ್ ಫೈಬರ್ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.

ಜಿಯೋ ಏರ್ ಫೈಬರ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಮನೆಯಲ್ಲಿ ಹಾಗಿ ಆಫೀಸ್ ಗಳಲ್ಲಿ ಅಳವಡಿಸಿ, ಅತಿವೇಗವಾಗಿ, ಗಿಗಾಬೈಟ್ಸ್ ಸ್ಪೀಡ್ ನಲ್ಲಿ ಇಂಟರ್ನೆಟ್ ಸೌಲಭ್ಯ ಪಡೆಯಬಹುದು. ಅನಿಯಮಿತ 5ಜಿ ಡೇಟಾ ಸಿಗುವಂಥ ಪ್ಲಾನ್ ಗಳನ್ನು ಜಿಯೋ ಏರ್ ಫೈಬರ್ ಗಾಗಿ ಪರಿಚಯ ಮಾಡಲಿದೆ. ಇದರ ಬೆಲೆ ಹಾಗೂ ಪ್ಲಾನ್ ದರಗಳು ಏರ್ಟೆಲ್ ಹಾಗೂ ಬಿ.ಎಸ್.ಎನ್.ಎಲ್ ನ ಆಸುಪಾಸಿನಲ್ಲಿ ಇರಲಿದೆ.
ಆದರೆ ಅವುಗಳಿಗಿಂತ ಸುಲಭವಾಗಿ ಬಳಸಬಹುದಾಗಿದೆ. ಜಿಯೋ ಫೈಬರ್ ಬಹಳ ಕಡಿಮೆ ವೈರ್ ಗಳಿಂದ ಮಾಡಲಾಗಿರುತ್ತದೆ, ಇದನ್ನು ಇನ್ಸ್ಟಾಲ್ ಮಾಡಲು ಮತ್ತೊಬ್ಬರ ಸಹಾಯ ಬೇಕಿಲ್ಲ, ಮನೆಯಲ್ಲೇ ಮಾಡಿಕೊಳ್ಳಬಹುದು. ಹಾಗೆಯೇ ಒಂದು ಆಪ್ ಇಂದ ಇದನ್ನು ಕಂಟ್ರೋಲ್ ಕೂಡ ಮಾಡಬಹುದು. ಮನೆಯಲ್ಲಿ ಅಳವಡಿಸುತ್ತಿದ್ದರೆ ಪೇರೆಂಟಲ್ ಕಂಟ್ರೋಲ್ ಆಯ್ಕೆ ಇದರಲ್ಲಿ ಸಿಗುತ್ತದೆ. ಹಾಗೆಯೇ ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬಹುದು.
ನೀವು ಕೆಲವು ವೆಬ್ಸೈಟ್ ಗಳನ್ನು ಅಥವಾ ಡಿವೈಸ್ ಗಳನ್ನು ಸಹ ಜಿಯೋ ಏರ್ ಫೈಬರ್ ನಲ್ಲಿ ಬ್ಲಾಕ್ ಮಾಡಬಹುದು. ಇದನ್ನು ಬಳಸುವುದಕ್ಕೆ ಬಹಳ ಸುಲಭ ಆಗಿರುತ್ತದೆ. ಇದು ಮಾಡರ್ನ್ ಮೆಶ್ ಹಾಗೆ ಇರಲಿದೆ, ಒಂದು ಬಟನ್ ಆನ್ ಮಾಡುವ ಮೂಲಕ ಬಳಸುವುದಕ್ಕೆ ಶುರು ಮಾಡಬಹುದು. ಇದೊಂದು ವೈರ್ಲೆಸ್ ಸೊಲ್ಯೂಷನ್ ಆಗಿರುತ್ತದೆ ಎಂದರೆ ತಪ್ಪಲ್ಲ. 1.4GBPS ಸ್ಪೀಡ್ ನಲ್ಲಿ ಇಂಟರ್ನೆಟ್ ಸೌಲಭ್ಯ ಇರುತ್ತದೆ.
Comments are closed.