Jio cinema: ಜಿಯೋ ಸಿನಿಮಾ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಸಂಸ್ಥೆ: ಹಾಟ್ ಸ್ಟಾರ್ ಗೆ ಮತ್ತೊಂದು ಶಾಕ್. ಏನೆಲ್ಲಾ ಸಿಗಲಿದೆ ಗೊತ್ತೇ??

Jio Cinema: ಜಿಯೋ ಸಂಸ್ಥೆಯು ತಮ್ಮ ಗ್ರಾಹಕರಿಗೆ ಒಂದಲ್ಲ ಒಂದು ಸಿಹಿ ಸುದ್ದಿಗಳನ್ನು ಕೊಡುತ್ತಲೇ ಇದೆ. ಇದೀಗ ಜಿಯೋ ಸಂಸ್ಥೆ ಹಾಟ್ ಸ್ಟಾರ್ ಗೆ ಶಾಕ್ ಕೊಟ್ಟು, ತಮ್ಮ ಗ್ರಾಹಕರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ, ಜಿಯೋ ಸಂಸ್ಥೆ ಈಗ ವಾರ್ನರ್ ಬ್ರದರ್ಸ್ ಹಾಗೂ ಹೆಚ್.ಬಿ.ಓ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇನ್ನುಮುಂದೆ ಜಿಯೋ ಸಿನಿಮಾ ಆಪ್ ನಲ್ಲಿ ಹಾಲಿವುಡ್ ವೆಬ್ ಸೀರೀಸ್ ಕೂಡ ಪ್ರಸಾರವಾಗಲಿದೆ..

amabni jio cinema started bidding for few more films Jio cinema:

ಮುಂದಿನ ತಿಂಗಳಿನಿಂದ ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ಗೇಮ್ ಆಫ್ ಥಾರ್ನ್ಸ್, ಹ್ಯಾರಿ ಪಾಟರ್, ಲಾರ್ಡ್ ಆಫ್ ದಿ ರಿಂಗ್ಸ್ ಸೇರಿದಂತೆ ಹೆಚ್.ಬಿ.ಓ ದ ಎಲ್ಲಾ ಶೋಗಳು, ಸೀರೀಸ್ ಗಳು ಜಿಯೋ ಸಿನಿಮಾದಲ್ಲಿ ಲಭ್ಯವಿರುತ್ತದೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಎಲ್ಲದಕ್ಕೂ ಕಾಂಪಿಟೇಶನ್ ಕೊಡಲಿದೆ ಜಿಯೋ. ವಯಾಕಾಮ್18 ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದೆ. ಇದರ ಬಗ್ಗೆ ರಾಯಿಟರ್ಸ್ ಸಂಸ್ಥೆ ಸುದ್ದಿಯನ್ನು ತಿಳಿಸಿದೆ.

ಇದನ್ನು ಓದಿ: LIC Policy: 87 ರೂಪಾಯಿ ಗಳಂತೆ ಕೂಡಿತ್ತು, ಹನ್ನೊಂದು ಲಕ್ಷ ರೂಪಾಯಿ ಸ್ವಂತ ಮಾಡಿಕೊಳ್ಳುವುದು ಹೇಗೆ ಗೊತ್ತೇ?? Best LIC Policy

ಎಷ್ಟು ಹಣಕ್ಕೆ ಒಪ್ಪಂದ ಆಗಿದೆ ಎಂದು ತಿಳಿದುಬಂದಿಲ್ಲ. ಆದರೆ ವಾರ್ನರ್ ಬ್ರದರ್ಸ್ ಸಂಸ್ಥೆಯ ಭಾರತ, ಈಸ್ಟ್ ಏಷ್ಯಾ ಮತ್ತು ಕೊರಿಯಾ ಭಾಗದ ಮುಖ್ಯಸ್ಥರಾದ ಕ್ಲೆಮೆಂಟ್ ಶ್ವೆಬಿಗ್ ಅವರು ತಿಳಿಸಿರುವ ಹಾಗೆ ಇದು ಏಷ್ಯಾ ಮಾರ್ಕೆಟ್ ನಲ್ಲಿ ತಮ್ಮ ಕಂಪನಿಯನ್ನು ಬಲ ಪಡಿಸುವ ಪ್ರಯತ್ನ ಎಂದಿದ್ದಾರೆ. ಜಿಯೋ ಸಂಸ್ಥೆ ಈ ಒಪ್ಪಂದದ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಇದೀಗ ವಾರ್ನರ್ಸ್ ಬ್ರದರ್ಸ್ ಸಂಸ್ಥೆ ಜೊತೆಗೆ ಹಾಟ್ ಸ್ಟಾರ್ ಒಪ್ಪಂದ ಮುಗಿದಿದೆ.

ಈಗ ವಯಾಕಾಮ್ 18 ಸಂಸ್ಥೆ ಹೊಸ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಫಿಫಾ ವರ್ಲ್ಡ್ ಕಪ್ ಅನ್ನು ಉಚಿತವಾಗಿ ಪ್ರಸಾರ ಮಾಡಿ ಜಿಯೋ ಸಂಸ್ಥೆ ದೊಡ್ಡ ಮಟ್ಟದಲ್ಲಿ ದಾಖಲೆ ಬರೆದಿತ್ತು. ಇದೀಗ ವಾರ್ನರ್ ಬ್ರೋ ಹಾಗೂ ಹೆಚ್.ಬಿ.ಓ ಜೊತೆಗಿನ ಒಪ್ಪಂದದಿಂದ ಮತ್ತೊಂದು ದೊಡ್ಡ ದಾಖಲೆ ಬರೆಯುವುದಕ್ಕೆ ಸಿದ್ಧವಾಗಿದೆ.

ಇದನ್ನು ಓದಿ: Business Idea: ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಹಿಳೆ: ನೀವು ಕೂಡ ಶುರು ಮಾಡಿ ದುಡ್ಡು ಗಳಿಸಿ. ಇದಕ್ಕಿಂತ ಉದಾಹರಣೆ ಬೇಕೇ??

Comments are closed.