M S Dhoni: ಧೋನಿ ಗಿಂತ ಬೆಸ್ಟ್ ಫಿನಿಶರ್ ಆರ್ಸಿಬಿಯಲ್ಲಿ ಇದ್ದರು. ಆತನೊಬ್ಬನೇ ಬೆಸ್ಟ್ ಫಿನಿಶರ್ ಎಂದ ಇಮ್ರಾನ್: ಮಾಜಿ ಚೆನ್ನೈ ಆಟಗಾರ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
M S Dhoni: ನಮಗೆಲ್ಲ ಗೊತ್ತಿರುವ ಹಾಗೆ ಐಪಿಎಲ್.ನಲ್ಲಿ (IPL) ಸಿ.ಎಸ್.ಕೆ (CSK) ತಂಡದ ಕ್ಯಾಪ್ಟನ್ ಎಂಎಸ್ ಧೋನಿ (M S Dhoni) ಅವರನ್ನು ಆಲ್ ಟೈಮ್ ಫಿನಿಷರ್ ಬೆಸ್ಟ್ ಫಿನಿಷರ್ ಎಂದೇ ಎಲ್ಲರು ಕರೆಯುತ್ತಾರೆ. ಈ ವರ್ಷ ಐಪಿಎಲ್ 16ನೇ ಸೀಸನ್ ನಲ್ಲಿ ಧೋನಿ ಅವರು ಸಿ.ಎಸ್.ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ಅವರನ್ನು ಎಲ್ಲರೂ ಬೆಸ್ಟ್ ಫಿನಿಷರ್ ಎನ್ನುವಾಗ, ಸೌತ್ ಆಫ್ರಿಕಾ ತಂಡದ ಮಾಜಿ ಸ್ಪಿನ್ನರ್ ಆರ್ಸಿಬಿ (RCB) ತಂಡದ ಮಾಜಿ ಆಟಗಾರನನ್ನು ಬೆಸ್ಟ್ ಫಿನಿಷರ್ ಎಂದು ಆಯ್ಕೆ ಮಾಡಿದ್ದಾರೆ.. ಆ ಆಟಗಾರ ಯಾರು ಗೊತ್ತಾ ?

ಎಂಎಸ್ ಧೋನಿ ಅವರು ಒಬ್ಬ ಬ್ಯಾಟ್ಸ್ಮನ್ ಆಗಿ ಮತ್ತು ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ಆಗಿ ಯಶಸ್ಸು ಪಡೆದಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡವು 2007ರಲ್ಲಿ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದಿದೆ. ಹಾಗೆಯೇ ಹಲವು ಟೂರ್ನಿಗಳನ್ನು ಗೆಲ್ಲಲು ಧೋನಿ ಅವರ ಕ್ಯಾಪ್ಟನ್ಸಿ ಮತ್ತು ಅವರ ಪಾತ್ರ ಮಹತ್ವದ್ದು. ಐಪಿಎಲ್ ನಲ್ಲಿ ಕೂಡ ಧೋನಿ ಅವರು 4 ಬಾರಿ ಸಿ.ಎಸ್.ಕೆ ತಂಡ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ..
ಸೌತ್ ಆಫ್ರಿಕಾದ ಸ್ಪಿನ್ನರ್ ಆಗಿರುವ ಇಮ್ರಾನ್ ತಾಹಿರ್ (Imran Tahir) ಅವರು ಸರ್ವಶ್ರೇಷ್ಠ ಫಿನಿಶರ್ ಅನ್ನು ಆಯ್ಕೆ ಮಾಡಬೇಕು ಎಂದಾಗ, ಅವರು ಆಯ್ಕೆ ಮಾಡಿರುವುದು ಧೋನಿ ಅವರನ್ನಲ್ಲ, ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ (AB de Villiers) ಅವರನ್ನು. ಎಬಿಡಿ (ABD) ಅವರು ಓಪನರ್ ಆಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸೂಪರ್ ಫಿನಿಷರ್ ಆಗಿ ಆರ್ಸಿಬಿ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಅಲ್ಲದೆ, ಸುಮಾರು 10 ವರ್ಷಗಳ ಕಾಲ ಎಬಿಡಿ ಅವರು ಆರ್ಸಿಬಿ ತಂಡಕ್ಕಾಗಿ ಆಡಿ, ಅತಿಹೆಚ್ಚು ರನ್ಸ್ ಗಳಿಸಿರುವವರ ಸಾಲಿನಲ್ಲಿದ್ದಾರೆ. ಇಮ್ರಾನ್ ತಾಹಿರ್ ಅವರು ಇವರನ್ನು ಆಯ್ಕೆ ಮಾಡಿದ್ದಾರೆ. ಈ ಪ್ರಶ್ನೆ ಕೇಳಿದಾಗ ಉತ್ತರ ಕೊಟ್ಟ ಇಮ್ರಾನ್ ತಾಹಿರ್ ಅವರು..
“ಈ ಪ್ರಶ್ನೆ ಉತ್ತರ ಕೊಡುವುದು ತುಂಬಾ ಕಷ್ಟ..ಆದರೆ ಎಬಿಡಿ ಅವರೇ ಸರ್ವಶ್ರೇಷ್ಠ ಫಿನಿಷರ್ ಎಂದು ಹೇಳುತ್ತೇನೆ..ಅವರಂಥ ಸ್ಫೋಟಕ ಆಟಗಾರನನ್ನು ನಾನು ಇದುವರೆಗೂ ನೋಡಿಲ್ಲ.. ಹಾಗಾಗಿ ನಾನು ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ.. ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮುಖ್ಯ ಕಾರಣ ಆಗುತ್ತಿದ್ದರು. ನನ್ನ ಇಷ್ಟು ವರ್ಷಗಳ ಕ್ರಿಕೆಟ್ ಕೆರಿಯರ್ ನಲ್ಲಿ ನಾನು ಕಂಡ ಬಹಳ ಸ್ಪೆಶಲ್ ಆದ ವ್ಯಕ್ತಿ ಎಬಿಡಿ ವಿಲಿಯರ್ಸ್..” ಎಂದು ಹೇಳಿದ್ದಾರೆ ಇಮ್ರಾನ್ ತಾಹಿರ್.
Comments are closed.