Gold Benefits: ಬಂಗಾರ ಮೈ ಮೇಲೆ ಹಾಕೊಂಡ್ರೆ, ಅಂದ ಅಷ್ಟೇ ಅಲ್ಲ, ಆರೋಗ್ಯ ಕೂಡ ಜಾಸ್ತಿ ಆಗುತ್ತೆ. ಏನೆಲ್ಲಾ ಲಾಭ ಗೊತ್ತೇ?? ಚಿನ್ನ ಹಾಕೊಂಡೆ ಇರ್ತೀರ.
Gold Benefits: ಚಿನ್ನದ ಆಭರಣಗಳನ್ನು ಇಷ್ಟಪಡದೆ ಇರುವ ಮಹಿಳೆಯರು ಇರುವುದಕ್ಕೆ ಸಾಧ್ಯವಿಲ್ಲ. ಚಿನ್ನ ಧರಿಸುವ ಸಂದರ್ಭ ಇದ್ದರು ಇಲ್ಲದೆ ಹೋದರು ಹೆಣ್ಣುಮಕ್ಕಳು ಆಭರಣಗಳನ್ನು ಧರಿಸಿ ಸಂತೋಷಪಡುತ್ತಾರೆ. ಚಿನ್ನದ ಆಭರಣಗಳು ಹೆಣ್ಣಿನ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ ಎನ್ನುವುದು ಕೂಡ ಸತ್ಯವಾದ ಮಾತು. ಚಿನ್ನದ ಆಭರಣ ಒಂದು ಹೆಣ್ಣಿನ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ಆಕೆಗೆ ಆರೋಗ್ಯವನ್ನು ಸಹ ನೀಡುತ್ತದೆ. ಚಿನ್ನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ವಿಷಯಗಳಿವೆ..

ಆಯುರ್ವೇದದಲ್ಲಿ ತಿಳಿಸಿರುವ ಹಾಗೆ ಚಿನ್ನದ ಆಭರಣಗಳನ್ನು ದೇಹಕ್ಕೆ ಹತ್ತಿರವಾಗಿ ಧರಿಸಬೇಕು, ಇದರಿಂದ ಔಷಧೀಯ ಪ್ರಯೋಜನಗಳಿವೆ. ಇದು ಇಮ್ಯುನಿಟಿ ಹೆಚ್ಚಿಸುತ್ತದೆ. ಕೆಲವು ಆಯುರ್ವೇದದ ಔಷಧಿಗಳಲ್ಲಿ ಚಿನ್ನವನ್ನು ನೇರವಾಗಿ ಬಳಸದೆ ಬೂದಿಯಾಗಿ ಮಾಡಿ ಬಳಸುತ್ತಾರೆ. ಈ ಬಂಗಾರದ ಭಸ್ಮ ನ್ಯಾನೋ,
ಕೊಲೊಯ್ಡಲ್ ಅಂಶ ಇರುವ ಟ್ರೇಡಿಷನಲ್ ಆಯುರ್ವೇದದ ಔಷಧಿ ಆಗಿದೆ. ಇದು ರುಮಟಾಯ್ಡ್, ಡೈಯಾಬಿಟಿಸ್, ನರ್ವ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ.
ಮನುಷ್ಯನ ಆಯುಷ್ಯ ಹೆಚ್ಚಿಸಲು ಕೂಡ ಚಿನ್ನ ಸಹಾಯಕ್ಕೆ ಬರುತ್ತದೆ, ಹಾಗೆಯೇ ಬೇರೆ ರೀತಿಯ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಚಿನ್ನವು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ತೋರು ಬೆರಳಿನಲ್ಲಿ ಚಿನ್ನದ ಉಂಗುರ ಧರಿಸಿದರೆ, ತಲೆನೋವು ಕಡಿಮೆ ಆಗುತ್ತದೆ. ಹಾಗಾಗಿ ತೋರು ಬೆರಳಿನಲ್ಲಿ ಚಿನ್ನದ ಉಂಗುರ ಧರಿಸಿದ್ದರೆ, ಅದರ ಒತ್ತಡದ ಬಿಂದುವನ್ನು ಪ್ರೆಸ್ ಮಾಡುವ ಮೂಲಕ ತಲೆನೋವು ಕಡಿಮೆ ಆಗುತ್ತದೆ.
ಚಿನ್ನದ ಆಭರಣಗಳು ದೇಹದಲ್ಲಿ ಹೀಟ್ ಕಡಿಮೆ ಮಾಡುತ್ತದೆ, ಈ ಸಾಮರ್ಥ್ಯ ಚಿನ್ನಕ್ಕೆ ಇದೆ ಎಂದು ಹಿರಿಯರು ತಿಳಿಸಿದ್ದಾರೆ. ಹಾಗೆಯೇ ದೇಹದಲ್ಲಿ ಹೀಟ್ ವೇರಿಯೇಷನ್ ಆದರೆ ಆಗ ವ್ಯಕ್ತಿಯನ್ನು ರಕ್ಷಣೆ ಮಾಡುತ್ತದೆ. ಹಾಗೆಯೇ ಇಮ್ಯುನಿಟಿ ಹೆಚ್ಚಿಸುತ್ತದೆ, ಚರ್ಮದ ಹೊಳಪು ಹೆಚ್ಚಿಸುತ್ತದೆ, ಮಾನಸಿಕವಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ಹಾಗೆಯೇ ರಕ್ತ ಪರಿಚಾಲನೆಯನ್ನು ಸುಧಾರಿಸುತ್ತದೆ.
Comments are closed.