Kerala Story: ಕೇರಳ ಸ್ಟೋರಿ ಬ್ಯಾನ್ ಮಾಡಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರಿಗೆ ಕೋರ್ಟ್ ಕೊಟ್ಟ ತೀರ್ಪು ಏನು ಗೊತ್ತೇ?? ಏನಾಗಿದೆ ಗೊತ್ತೇ??
Kerala Story: ಬಾಲಿವುಡ್ (Bollywood) ನಲ್ಲಿ ತಯಾರಾಗಿರುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಕೇರಳದಲ್ಲಿ ನಡೆದ ಕೆಲವು ಸತ್ಯ ಘಟನೆಗಳ ಸುತ್ತ ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದು, ಅದಾ ಶರ್ಮ (Adah Sharma) ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಕೆಲವರು ವಿರೋಧ ಮಾಡಿ, ದಿ ಕೇರಳ ಸ್ಟೋರಿ ಸಿನಿಮಾಗೆ ಸ್ಟೇ ತರಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ತೀರ್ಪು ನೀಡಿದ್ದು, ಅರ್ಜಿ ಹಾಕಿದ್ದವರಿಗೆ ಬೇಸರವಾಗಿದೆ. ಜಡ್ಜ್ ಗಳಾದ ಕೆ.ಎಂ.ಜೋಸೆಫ್ (K M Joseph) ಹಾಗು ನಾಗರತ್ನ (Nagarathna) ಅವರ ನೇತೃತ್ವದ ಪೀಠಕ್ಕೆ ಲಾಯರ್ ಗಳಾದ ಕಪಿಲ್ ಸಿಬಾಲ್ (Kapil Cibal) ಹಾಗೂ ನಿಜಾಮ್ ಪಾಶ (Nizam Pasha) ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿ, ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ದ್ವೇಷ ಬಿತ್ತುವ ಸಂಭಾಷಣೆಗಳಿವೆ, ಎಂದು ಲಾಯರ್ ನಿಜಾಮ್ ವಾದ ಮಾಡಿದ್ದಾರೆ. ಅದಕ್ಕೆ ಕೋರ್ಟ್, “ಸಿನಿಮಾವನ್ನು ಸೆನ್ಸಾರ್ ಮಂಡಳಿ ಈಗಾಗಲೇ ವೀಕ್ಷಿಸಿ ಸರ್ಟಿಫಿಕೇಟ್ ಕೊಟ್ಟಿದೆ.
ದ್ವೇಷದ ಸಂಭಾಷಣೆಯಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಆ ರೀತಿ ಇದ್ದರೆ ನೀವು ಸಿನಿಮಾ ಬಿಡುಗಡೆಯನ್ನು ಚಾಲೆಂಜ್ ಮಾಡಬೇಕು ಎಂದರೆ ಸೆನ್ಸಾರ್ ಮಂಡಳಿಯನ್ನು ಪ್ರಶ್ನೆ ಮಾಡಬೇಕಾಗುತ್ತದೆ. ನೀವು ಹೈಕೋರ್ಟ್ ಗೆ ಅರ್ಜಿ ಹಾಕಬೇಕು ಎಂದು” ಎಂದಿದೆ ಕೋರ್ಟ್, ಜಡ್ಜ್ ನಾಗರತ್ನ ಅವರು ಈ ಮಾತುಗಳನ್ನು ಹೇಳಿದ್ದಾರೆ. ಅದಕ್ಕೆ ನಿಜಾಮ್ ಅವರು, ನಮಗೆ ಕಡಿಮೆ ಸಮಯ ಇದೆ, ಮೇ 5ರಂದು ಸಿನಿಮಾ ಬಿಡುಗಡೆ ಆಗಲಿದೆ.. ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ..
“ಈ ರೀತಿ ಇದ್ದರೆ ಮುಂಬರುವ ದಿನಗಳಲ್ಲಿ ಬೇರೆ ಎಲ್ಲರೂ ಸುಪ್ರೀಂ ಕೋರ್ಟ್ ಗೆ ಮೊದಲು ಬರುತ್ತಾರೆ..” ಎಂದು ನಾಗರತ್ನ ಅವರು ತಿಳಿಸಿದ್ದಾರೆ. ಈ ರೀತಿಯಾಗಿ ಅರ್ಜಿ ಹಾಕಿದವರಿಗೆ ನೆಗಟಿವ್ ಪ್ರತಿಕ್ರಿಯೆ ಸಿಕ್ಕಿದ್ದು, ಮೇ 5ರಂದು ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆ ಆಗಲಿದೆ. ಕಳೆದ ವರ್ಷ ಹೀಗೆ ಬಿಡುಗಡೆಯಾದ ನೈಜ ಘಟನೆ ಆಧಾರಿತ ಸಿನಿಮಾ ಕಾಶ್ಮೀರ ಫೈಲ್ಸ್ ಅನ್ನು ಜನರು ಮೆಚ್ಚಿಕೊಂಡಿದ್ದರು. ಇದೀಗ ದಿ ಕೇರಳ ಸ್ಟೋರಿ ಸಿನಿಮಾಗೆ ಅದೇ ರೀತಿ ಪ್ರತಿಕ್ರಿಯೆ ಸಿಗುತ್ತಾ ಎಂದು ಕಾದು ನೋಡಬೇಕಿದೆ.
Comments are closed.