Health Tips: ಬೇಸಿಗೆಯಲ್ಲಿ ಸುಲಭವಾಗಿ ತೂಕ ಇಳಿಸಬೇಕು ಎಂದರೇ, ಮನೆಯಲ್ಲಿ ಇದ್ದುಕೊಂಡೇ ಏನು ಮಾಡಬಹುದು ಗೊತ್ತೇ? ಇಷ್ಟು ಮಾಡಿ, ಕಡ್ಡಿ ಆಗ್ತೀರಾ.
Health Tips: ದಪ್ಪ ಇರುವವರು ದೇಹದ ತೂಕ ಇಳಿಸಿಕೊಳ್ಳಲು ಬೇಸಿಗೆ ಕಾಲ ಒಳ್ಳೆಯ ಸಮಯ ಎಂದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಕೆಲಸ ಮಾಡಿದರೆ ಹೆಚ್ಚು ಬೆವರು ಬರುತ್ತದೆ, ಹಾಗಾಗಿ ಇದು ಒಳ್ಳೆಯ ಸಮಯ ಎಂದುಕೊಳ್ಳುವರು ಎಲ್ಲರೂ. ಆದರೆ ಇದು ನಿಜವಲ್ಲ, ಬೆವರು ಬರುವುದು ನಮ್ಮ ದೇಹದಲ್ಲಿ ಹೆಚ್ಚಿರುವ ನೀರನ್ನು ಹೊರ ಹಾಕುವ ಕ್ರಿಯೆ, ಅದು ಊತ ಕಡಿಮೆ ಮಾಡುತ್ತದೆ ದೇಹದ ತೂಕವನ್ನಲ್ಲ. ಆದರೆ ಸಣ್ಣ ಆಗುವುದಕ್ಕೆ ಬೇಸಿಗೆ ಒಳ್ಳೆಯ ಸಮಯವೇ ಆಗಿದೆ. ತೂಕ ಹೇಗೆ ಕಡಿಮೆ ಮಾಡುವುದು ಎನ್ನುವುದಕ್ಕೆ ಇಂದು ನಿಮಗೆ ಕೆಲವು ಸಲಹೆ ಕೊಡುತ್ತೇವೆ.. ಮೊದಲಿಗೆ ನಿಮ್ಮ ಚಯಾಪಚಯ ಕ್ರಿಯೆ ಸರಿಯಾಗಿ ಆಗಬೇಲೂ, ಇದಕ್ಕೆ ಒಳ್ಳೆಯ ಆಹಾರ ಸೇವನೆ, ಒಳ್ಳೆಯ ನಿದ್ದೆ, ವ್ಯಾಯಾಮ, ಒತ್ತಡ ಕಡಿಮೆ ಮಾಡುವುದು ಎಲ್ಲವೂ ಮುಖ್ಯವಾಗುತ್ತದೆ. ಕಡಿಮೆ ಕ್ಯಾಲೋರಿ ಸೇವಿಸಬೇಕು. ಇದರಿಂದ ದೇಹ ರೀಬೂಟ್ ಆಗುತ್ತದೆ.

ಸೀಸನಲ್ ಫ್ರೂಟ್ಸ್ ತಿನ್ನಿ :- ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ತುಂಬಾ ಒಳ್ಳೆಯದು. ಆಹಾರದ ಜೊತೆಗೆ ಈ ಹಣ್ಣನ್ನು ಸೇವಿಸಿ ಇದು ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಏಕೆಂದರೆ ಇದರಲ್ಲಿ ಕ್ಯಾಲೋರಿ ಕಡಿಮೆ ಇಯುತ್ತದೆ. ಒಂದು ಬೌಲ್ ಹಣ್ಣಿನಲ್ಲಿ ನಿಮಗೆ 100 ಕ್ಯಾಲೋರಿಗಿಂತ ಹೆಚ್ಚು ಬರುವುದಿಲ್ಲ. ಹಲಸಿನ ಹಣ್ಣಿನಲ್ಲಿ ವಿಟಮಿನ್, ಮಿನಿರಲ್, ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುತ್ತದೆ. ಇದು ದೇಹದಿಂದ ಟಾಕ್ಸಿನ್ ಅಂಜು ಹೊರತೆಗೆದು, ತೂಕ ಕಡಿಮೆ ಮಾಡುತ್ತದೆ.
ಎಳನೀರು ಕುಡಿಯಿರಿ :- ಬೇಸಿಗೆ ಸಮಯದಲ್ಲಿ ಹೆಚ್ಚು ಬೆವರು ಬಂದಾಗ ನಿಮ್ಮ ದೇಹದಿಂದ ಎಲೆಕ್ಟ್ರೋಲೈಟ್ ಕಡಿಮೆ ಆಗುತ್ತದೆ. ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಜಾಸ್ತಿ ಇದ್ದು, ಸಿಹಿಯ ಬಯಕೆ ಕಡಿಮೆ ಮಾಡುತ್ತದೆ. ಹಾಗಾಗಿ ಒಂದು ಸಾರಿ ಎಳನೀರು ಕುಡಿದರೆ 60ಕ್ಕಿಂತ ಹೆಚ್ಚು ಕ್ಯಾಲೋರಿ ಬರುವುದಿಲ್ಲ. ಬೆಳಗ್ಗೆ ಎದ್ದ ಬಳಿಕ ಎಳನೀರು ಕುಡಿಯುವುದಕ್ಕೆ ಒಳ್ಳೆಯ ಸಮಯ ಆಗಿದೆ. ಹಾಗೆಯೇ ವ್ಯಾಯಾಮ ಮಾಡಿದ ನಂತರ ಕುಡಿಯುವುದು ಒಳ್ಳೆಯದು.
ಎಂದಿಗಿಂತ ಅರ್ಧ ಆಹಾರ ಸೇವಿಸಿ :- ಹೆಚ್ಚು ಬಿಸಿಲಿನಿಂದ ಜೀರ್ಣವಾಗುವುದು ನಿಧಾನ ಆಗುತ್ತದೆ. ನೀವು ಹೆವಿಯಾದ ಆಹಾರ ಸೇವಿಸಿದಾಗ, ಜೀರ್ಣಕ್ಕೆ ಸಮಸ್ಯೆಗಳು ಎದುರಾಗುತ್ತದೆ. ಹಸಿವಿನ ಆಧಾರದ ಮೇಲೆ ನೀವು ಎಷ್ಟು ಆಹಾರ ಸೇವನೆ ಮಾಡುತ್ತೀರಿ ಎನ್ನುವುದನ್ನು ನಿರ್ಧರಿಸಿ. ಎರಡು ಅಥವಾ ಮೂರು ಗಂಟೆಗೆ ಒಂದು ಸಾರಿ ಏನಾದರೂ ತಿನ್ನಲು ಅಭ್ಯಾಸ ಮಾಡಿಕೊಳ್ಳಿ.
ದೇಹದ ಮಾತು ಕೇಳಿ :- ಕೆಲವು ರೀತಿಯ ಆಹಾರ ತಿಂದ ನಂಟಿಕ್ರ ಹೊಟ್ಟೆ ಉಬ್ಬುತ್ತದೆ. ಆ ರೀತಿಯ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಊಟ ಲೈಟ್ ಆಗಿರಲಿ. ನಿಮ್ಮ ದೇಹಕ್ಕೆ ಹೊಟ್ಟೆಗೆ ಸರಿ ಹೊಂದುವಂಥ ಆಹಾರ ಸೇವಿಸಿ. ಹೊಸದಾಗಿ ಆಹಾರ ಪದ್ಧತಿ ಶುರು ಮಾಡುವುದಕ್ಕಿಂತ, ಈಗ ನಿಮಗೆ ಅಭ್ಯಾಸ ಇರುವ ಆಹಾರ ಸೇವಿಸುವುದು ಒಳ್ಳೆಯದು.
Comments are closed.