TATA: ದೇಶವೇ ಮೆಚ್ಚಿರುವ ಟಾಟಾ ಕಂಪನಿ ಲೋಗೋ ಯಾಕೆ ನೀಲಿ ಬಣ್ಣದಲ್ಲಿ ಇದೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ?
TATA: ನಮ್ಮ ದೇಶದ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ಒಂದು ಟಾಟಾ ಕಂಪನಿ, ಇವರ ಕಂಪನಿಯ ಲೋಗೋ ಗಮನಿಸಿದ್ದೀರಾ? ಈ ಲೋಗೋ ನೀಲಿ ಬಣ್ಣದ ಲೋಗೋ ಆಗಿದೆ. ಇದೊಂದೇ ಅಲ್ಲ, ವಿಶ್ವದ ಬೇರೆ ದೊಡ್ಡ ದೊಡ್ಡ ಕಂಪೆನಿಗಳು ಫೋರ್ಡ್, BMW, Facebook ಈ ಎಲ್ಲಾ ಕಂಪೆನಿಗಳ ಲೋಗೋ ನೋಡಿದರೆ ಅದು ನೀಲಿ ಬಣ್ಣದ ಲೋಗೋ ಆಗಿರುತ್ತದೆ. ದೊಡ್ಡ ಕಂಪೆನಿಗಳು ನೀಲಿ ಬಣ್ಣಕ್ಕೆ ಪ್ರಾಮುಖ್ಯತೆ ಕೊಡುವುದು ಯಾಕೆ? ಇಂದು ತಿಳಿಸುತ್ತೇವೆ ನೋಡಿ..

ಕಂಪನಿಗಳು ನೀಲಿ ಬಣ್ಣವನ್ನು ಹೆಚ್ಚಾಗಿ ಆಯ್ಕೆ ಮಾಡುವುದು ಯಾಕೆ ಅಂದರೆ, ಮನುಷ್ಯನ ಮನಸ್ಸಿನಲ್ಲಿ ಒಂದೊಂದು ಬಣ್ಣಕ್ಕೂ ಒಂದೊಂದು ಭಾವನೆ ಇರುತ್ತದೆ. ಉದಾಹರಣೆಗೆ ಕೆಂಪು ಬಣ್ಣವನ್ನು ತೆಗೆದುಕೊಂಡರೆ, ಕೆಂಪು ಬಣ್ಣ ಎಂದಾಕ್ಷಣ ಯುದ್ಧ, ರಕ್ತ, ಕೋಪ ಇದೆಲ್ಲವು ನೆನಪಾಗುತ್ತದೆ. ಆದರೆ ನೀಲಿ ಬಣ್ಣ ಶಾಂತಿ ಹಾಗೂ ಭದ್ರತೆಯ ಸಂಕೇತ ಆಗಿದೆ. ಜನರಿಗೆ ನೀಲಿ ಬಣ್ಣ ನೋಡಿದರೆ, ಭದ್ರತೆ ಇದೆ ಎನ್ನಿಸುತ್ತದೆ.. ಹೀಗಾಗಿ ನೀಲಿ ಬಣ್ಣವನ್ನು ಜನರಿಗೆ ಬಹಳ ಇಷ್ಟವಾಗುತ್ತದೆ.
ನೀಲಿ ಬಣ್ಣ ನೋಡುವುದರಿಂದ ಜನರಲ್ಲಿ ಬ್ಲಡ್ ಪ್ರೆಶರ್ ಕೂಡ ಕಡಿಮೆ ಆಗುತ್ತದೆ. ಈ ಎಲ್ಲಾ ವಿಷಯ ಸಂಶೋಧನೆಗಳಿಂದ ತಿಳಿದುಬಂದಿದ್ದು, ಹಾಗಾಗಿ ಈ ಬಣ್ಣ ನೋಡಿದರೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಹಾಗೆಯೇ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ ಎನ್ನುವುದು ಸಾಬೀತಾಗಿದೆ. ಇದೇ ಕಾರಣಕ್ಕೆ ಫ್ಲೈಟ್ ಗಳಲ್ಲಿ ಕೂಡ ಸೀಟ್ ಬಣ್ಣ ನೀಲಿ ಆಗಿರುತ್ತದೆ. ಈ ಬಣ್ಣ ನೋಡಿದ ತಕ್ಷಣ ಜನರಿಗೆ ಭದ್ರತೆಯ ಮನೋಭಾವ ಮೂಡಲಿ ಎಂದು ಈ ಬಣ್ಣವನ್ನು ಆಯ್ಕೆ ಮಾಡುತ್ತಾರೆ.
ಡುಲಕ್ಸ್ ಪೇಂಟ್ ನಡೆಸಿರುವ ಸಮೀಕ್ಷೆಯಲ್ಲಿ 42%ಗಂಡಸರು, 30% ಹೆಂಗಸರು ತಮಗೆ ನೀಲಿ ಬಣ್ಣ ಅಂದ್ರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ..ಈ ಎಲ್ಲಾ ಕಾರಣಗಳಿಂದ ನೀಲಿ ಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, ಈ ಬಣ್ಣ ಗಂಡು ಹೆಣ್ಣು ಎಂದು ಬೇಧವಿಲ್ಲದೆ, ಎಲ್ಲರನ್ನು ಒಂದೇ ರೀತಿ ಆಕರ್ಷಿಸುತ್ತದೆ. ಹಾಗಾಗಿ ದೊಡ್ಡ ದೊಡ್ಡ ಕಂಪನಿಗಳು ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತದೆ.
Comments are closed.