Easy Money: ಮದುವೆ ಆಗುವಾಗ ಈ ನಿಯಮ ಫಾಲೋ ಮಾಡಿದ್ರೆ, ಸರ್ಕಾರ ನೀಡುತ್ತೆ 51 ಸಾವಿರ. ಇದಪ್ಪ ಅದೃಷ್ಟ ಅಂದ್ರೆ. ಎಲ್ಲಿ ಗೊತ್ತೇ? ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Easy Money: ರಾಜ್ಯ ಸರ್ಕಾರಗಳು ಜನರ ಹಿತದೃಷ್ಟಿಯಿಂದ ಜನರಿಗೆ ಒಳ್ಳೆಯದಾಗಲಿ ಎಂದು ಅನೇಕ ಯೋಜನಗೆಳನ್ನು ತರುವ ಮೂಲಕ ಜನರಿಗೆ ಒತ್ತಾಸೆಯಾಗಿ ನಿಂತಿದೆ. ಹೊಸ ಕ್ರಮಗಳನ್ನು ಜಾರಿಗೆ ತಂದು, ಜನರಿಗೆ ಸಹಾಯ ಮಾಡುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಜನರಿಗಾಗಿ ಹೊಸ ನಿಯಮವನ್ನು ತಂದಿದೆ, ಇದು ಮದುವೆ ವಿಷಯವಾಗಿ ತಂದಿರುವ ನಿಯಮ ಆಗಿದ್ದು, ಇದನ್ನು ಫಾಲೋ ಮಾಡಿದರೆ ನಿಮಗೆ ಸರ್ಕಾರದ ಕಡೆಯಿಂದ ₹51,000 ರೂಪಾಯಿ ಸಿಗುತ್ತದೆ. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

2017ರಿಂದ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ತಂದು, ಬೇರೆ ಬೇರೆ ಧರ್ಮ, ವರ್ಗ ಇವುಗಳ ಜನರಿಗೆ ಸಾಮೂಹಿಕ ವಿವಾಹದ ಮೂಲಕ ಮದುವೆ ಮಾಡಲಾಗುತ್ತಿದೆ. ಈ ಯೋಜನೆಯ ಮೂಲಕ ಮದುವೆ ಇಂದ ಆಗುವ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು ಎನ್ನುವುದು ಸರ್ಕಾರದ ಪ್ಲಾನ್ ಆಗಿದೆ..ಈ ಯೋಜನೆಯ ಪ್ರಯೋಜನ ಪಡೆಯುವುದಕ್ಕೆ ಕೆಲವು ನಿಯಮಗಳು ಕೂಡ ಇದೆ.
ಈ ಯೋಜನೆಗೆ ಅರ್ಜಿ ಹಾಕಿ ಮದುವೆಯಾಗಲು, ಅವರ ಕುಟುಂಬದ ವಾರ್ಷಿಕ ಆದಾಯದ ಮಿತಿ, 2 ಲಕ್ಷಕ್ಕಿಂತ ಕಡಿಮೆ ಇರಬೇಕು. ಈ ಯೋಜನೆಯ ಅಡಿಯಲ್ಲಿ ವಿಧವೆ, ಪರಿತ್ಯಕ್ತ, ವಿಚ್ಛೇದಿತ ಮಹಿಳೆಯರು ಕೂಡ ಮದುವೆ ಮಾಡಿಕೊಳ್ಳಬಹುದು. ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಮದುವೆಗೆ ಬೇಕಾದ ಶಾಸ್ತ್ರ ಸಂಪ್ರದಾಯ ಅನುಸರಿಸಲು, ಬಟ್ಟೆಬರೆ ಹಾಗು ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರವು ₹35,000 ರೂಪಾಯಿಯನ್ನು ವಧುವಿನ ಬ್ಯಾಂಕ್ ಖಾತೆಗೆ ಹಾಕುತ್ತದೆ. ಹಾಗೆಯೇ ಮದುವೆ ನಡೆಯುವ ದಿನ ₹10,000 ರೂಪಾಯಿಯವನ್ನು ವಧುವರರಿಗೆ ನೀಡಲಾಗುತ್ತದೆ.
ಇದರ ಜೊತೆಗೆ ಎಲ್ಲಾ ಜೋಡಿಗಳಿಗೂ ₹6000 ರೂಪಾಯಿಯನ್ನು ಮದುವೆಯ ಖರ್ಚು ಎಂದು ನೀಡಲಾಗುತ್ತಿದೆ. ಹೀಗೆ, ಈ ಯೋಜನೆಯಿಂದ ಜೋಡಿಗಳ ಮದುವೆಗೆ ಸರ್ಕಾರದ ಕಡೆಯಿಂದ ಒಟ್ಟಾರೆಯಾಗಿ ₹51,000 ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ನೀವು ಪಡೆಯಬೇಕು ಎಂದರೆ, ನಿಮ್ಮ ಹತ್ತಿರದ ನಗರ ಪಾಲಿಕೆ, ಕ್ಷೇತ್ರ ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ನಲ್ಲಿ ಅರ್ಜಿ ಹಾಕಬೇಕು. ಕನಿಷ್ಠ 10 ಜೋಡಿಗಳಿಗೆ ಸಾಮೂಹಿಕ ವಿವಾಹದ ವ್ಯವಸ್ಥೆ ಮಾಡಲಾಗುತ್ತದೆ.
Comments are closed.