Divorce Law: ಹೆಂಡತಿ/ಗಂಡನ ಕಾಟ ಸಾಕಾಗಿದ್ಯಾ. ವಿಚ್ಚೇದನ ಕೊಡುವ ಆಲೋಚನೆಯಲ್ಲಿ ಇರುವವರಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ. ಏನು ಗೊತ್ತೇ?
Divorce Law: ಈಗಿನ ಕಾಲದಲ್ಲಿ ಮದುವೆ ಎನ್ನುವುದು ಮೊದಲಿನ ಹಾಗೆ ಹೆಚ್ಚು ಸಮಯ ಉಳಿಯುವುದಿಲ್ಲ. ಹುಡುಗ ಹುಡುಗಿ ಇಡೀ ಜೀವನ ಜೊತೆಯಲ್ಲಿ ಇರುತ್ತೇವೆ ಎಂದು ಹೇಳಿ, ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಹಿರಿಯರು ಕೂಡ ದಂಪತಿಗಳಿಗೆ ಆಶೀರ್ವಾದ ಮಾಡುತ್ತಾರೆ. ಅದ್ಧೂರಿಯಾಗಿ ಮದುವೆಯನ್ನು ಮಾಡಿಕೊಡುತ್ತಾರೆ. ಆದರೆ ಎಲ್ಲಾ ದಾಂಪತ್ಯಗಳು ಸಂತೋಷವಾಗಿ ಉಳಿಯುವುದಿಲ್ಲ. ಗಂಡ ಹೆಂಡತಿಯ ನಡುವೆ ಹಲವು ವಿಚಾರಕ್ಕೆ ಜಗಳಗಳು ಶುರುವಾಗಬಹುದು. ಒಬ್ಬರನ್ನೊಬ್ಬರು ಬೈದುಕೊಂಡು ಇರುತ್ತಾರೆ.

ಈ ಜಗಳ ಕದನ ಇವುಗಳನ್ನು ಸಹಿಸಲಾಗದೆ ಕೆಲವು ಜೋಡಿ ವಿಚ್ಛೇದನ ಪಡೆಯುವುದಕ್ಕೆ ಸಿದ್ಧ ಆಗುತ್ತಾರೆ. ಇದಕ್ಕಾಗಿ ಕೋರ್ಟ್ ಮೊರೆ ಹೋಗುತ್ತಾರೆ. ಅಂಥವರು ಜೊತೆಯಾಗಿ ಇರುವುದಕ್ಕಿಂತ ಬೇರೆ ಇರುವುದೇ ಒಳ್ಳೆಯದು ಎಂದು ನಂಬಿರುತ್ತಾರೆ. ಅವರು ಕೋರ್ಟ್ ಗೆ ಹೋದಾಗ, ವಿಚ್ಛೇದನದ ಬಗ್ಗೆ ಮತ್ತೊಮ್ಮೆ ನಿರ್ಧಾರ ಮಾಡಲು ಕೋರ್ಟ್ ಸುಮಾರು 6 ತಿಂಗಳ ಸಮಯ ಕೊಡುತ್ತದೆ. ಆ ಸಮಯದಲ್ಲೂ ಯಾವುದು ಸರಿ ಹೋಗಲಿಲ್ಲ ಎಂದರೆ, ವಿಚ್ಛೇದನ ಕೊಡಲಾಗುತ್ತದೆ. ಈ ವಿಚಾರದ ಬಗ್ಗೆ ಈಗ ಸುಪ್ರೀಂ ಕೋರ್ಟ್ ಒಂದು ಮಹತ್ವದ ಕಾನೂನು ಮಾಡಿದೆ..
ವಿಚ್ಛೇದನಗಳ ವಿಚಾರಕ್ಕೆ ಸಂಬಂಧಿಸಿದ ಹಾಗೆ ದೇಶದ ಸುಪ್ರೀಂ ಕೋರ್ಟ್ ಒಂದು ಮಹತ್ವಡ್ಸ್ ನಿರ್ಧಾರ ತೆಗೆದುಕೊಂಡಿದ್ದು, ಆರು ತಿಂಗಳ ಸಮಯದಿಂದ ಈಗ ವಿನಾಯಿತಿ ನೀಡಲಿದೆ. ಜಸ್ಟಿಸ್ ಸಂಜಯ್, ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಂ ನಾಥ್ ಹಾಗೂ ಜೆಕೆ ಮಹೇಶ್ವರಿ ಇವರು ಇದ್ದ ಪೀಠದಲ್ಲಿ ವಿಚ್ಛೇದನದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಜೊತೆಗಿರಲು ಇಷ್ಟವಾಗದೆ, ಅಂತಹ ಕಠಿಣ ಕಾರಣ ಇದ್ದರೆ, ತಕ್ಷಣವೇ ವಿಚ್ಚೇದನ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಇಲ್ಲಿ ಸಂದರ್ಭದ ನಿರ್ವಹಣೆ, ಜೀವನಾಂಶ, ಮಕ್ಕಳ ಕುರಿತು ಹಕ್ಕು, ಅದರ ಬಾಧ್ಯತೆ ಇದೆಲ್ಲವನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಈ ಪೀಠ ವಿವರಿಸಿದೆ.. ಕಾನೂನಿನ ಆರ್ಟಿಕಲ್ 142ರ ಪ್ರಕಾರ, ಇಬ್ಬರ ನಡುವೆ ದೊಡ್ಡ ಸಮಸ್ಯೆಗಳು ಹಾಗೂ ಭಿನ್ನಾಭಿಪ್ರಾಯ ಇದ್ದು, ಹೊಂದಾಣಿಕೆಯ ಜೊತೆಗೆ ಜೀವನ ನಡೆಸಲು ಆಗುತ್ತಿಲ್ಲ ಎನ್ನುವುದಾದರೆ, ಆರ್ಟಿಕಲ್ 142ರ ಪ್ರಕಾರ, ವಿಶಾಲ ಅಧಿಕಾರ ಬಳಸಿಕೊಂಡು, 6 ತಿಂಗಳು ಮತ್ತು 18 ತಿಂಗಳುಗಳ ಸಮಯ ಇಲ್ಲದೆ ವಿಚ್ಛೇದನ ಪಡೆಯಬಹುದು.
Comments are closed.