Business Idea: ನಿಮ್ಮ ಗ್ರಾಮದಲ್ಲಿ ಖಾಲಿ ಇರುವ ಜಾಗದಲ್ಲಿ ನೀರಿಲ್ಲದೆ ಈ ಉದ್ಯಮ ಆರಂಭಿಸಿ: ಕೆಲಸ ಮಾಡುವುದೇ ಬೇಡ, ದುಡ್ಡು ಹುಡುಕಿಕೊಂಡು ಬರುತ್ತದೆ. ಏನು ಗೊತ್ತೇ?
Business Idea: ಜನರು ಈಗ ಉದ್ಯೋಗಕ್ಕಾಗಿ ಹಳ್ಳಿಗಳಿಂದ ಸಿಟಿಗೆ. ವಲಸೆ ಬರುತ್ತಿದ್ದಾರೆ. ಕಳೆದ ಒಂದು 10 ವರ್ಷಗಳಿಂದ ಇದು ಜಾಸ್ತಿ. ಅದೇಗುತ್ತಿದೆ. ಹಳ್ಳಿಯಲ್ಲಿ ವ್ಯವಸಾಯ ಮಾಡುವ ಭೂಮಿಯನ್ನು ಬಿಟ್ಟು ಜನರು ಸಿಟಿಗೆ ಬರುತಿದ್ದಾರೆ. ನಗರಕ್ಕೆ ಬಂದ ಮೇಲೆ ಆ ಭೂಮಿ ವ್ಯವಸಾಯ ನಡೆಯದೆ, ಮಾಲೀಕ ಇಲ್ಲದೆ ಕೃಷಿ ಭೂಮಿ ಕೊಟ್ಟಿಗೆ ಆಗುವ ಸ್ಥಿತಿಗೆ ತಲುಪುತ್ತಿದೆ. ಒಂದು ವೇಳೆ ನೀವು ನಿಮ್ಮ ಊರಿನಲ್ಲಿ ಇಂಥ ಪರಿಸ್ಥಿತಿ ಎದುರಿಸುತ್ತಿದ್ದರೆ ನಿಮಗೆ ಒಂದು ಒಳ್ಳೆಯ ಅವಕಾಶ ಇದೆ..

ಈ ಸುದ್ದಿಯನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಹತ್ತಿರ ಅಥವಾ ನಿಮ್ಮ ಗ್ರಾಮದಲ್ಲಿ ಹೀಗೆ ಖಾಲಿ ಭೂಮಿ ಇದ್ದರೆ, ನೀವು ಈ ಬ್ಯುಸಿನೆಸ್ ಶುರು ಮಾಡಿ, ಉತ್ತಮ ಆದಾಯ ಗಳಿಸಬಹುದು. ಈ ಬ್ಯುಸಿನೆಸ್ ಇಂದ ಹಳ್ಳಿಯಲ್ಲಿರುವ ನಿಮ್ಮ ಭೂಮಿಯಿಂದಲೇ ನೀವು ಸಿಕ್ಕಾಪಟ್ಟೆ ಹಣ ಗಳಿಸಬಹುದು. ಈ ಬ್ಯುಸಿನೆಸ್ ಯಾವುದು? ಇದರಿಂದ ಲಾಭ ಪಡೆಯುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..
ನಿಮ್ಮ ಹಳ್ಳಿಯಲ್ಲಿ ಖಾಲಿ ಇರುವ ಜಮೀನುಗಳಲ್ಲಿ ಮರವನ್ನು ನೆಡಬಹುದು, ಈಗ ಮರಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಶೀಶಮ್, ಸಾಂಗ್ವಾನ್, ಮಹನೀಮ್, ಚಂದನ, ಮಹೋಗನಿ ಇಂಥ ಮರಗಳನ್ನು ನಿಮ್ಮ ಜಮೀನಿನಲ್ಲಿ ನೆಡಬಹುದು. ಈ ಮರಗಳನ್ನು ಮಾರಾಟ ಮಾಡುವುದರಿಂದ ನಿಮಗೆ ಒಳ್ಳೆಯ ಆದಾಯ ಬರುತ್ತದೆ.
ಮುಂದಿನ ಸಮಯದಲ್ಲಿ ಸೋಲಾರ್ ಎನರ್ಜಿಯನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಶುರು ಮಾಡುವ ಸಮಯ ಹತ್ತಿರದಲ್ಲೇ ಇದೆ. ಹಾಗಾಗಿ ನಿಮ್ಮ ಹಳ್ಳಿಯ ಜಮೀನಿನಲ್ಲಿ ನೀವು ಸೌರ ಸ್ಥಾವರ ಅಥವಾ ವಿಂಡ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬಹುದು.
ಈ ಪ್ಲಾನ್ ಇಂದ ಉತ್ಪತ್ತಿ ಮಾಡಲಾಗುವ ವಿದ್ಯುತ್ ಅನ್ನು ಸರ್ಕಾರ ಅಥವಾ ಪ್ರೈವೇಟ್ ಕಂಪನಿಗಳಿಗೆ ಮಾರಾಟ ಮಾಡುವುದರಿಂದ ನೀವು ಭರ್ಜರಿಯಾಗಿ ಆದಾಯ ಗಳಿಸುತ್ತೀರಿ. ಹಾಗೆಯೇ ಸೋಲಾರ್ ಸ್ಥಾವರಗಳನ್ನು ಸ್ಥಾಪನೆ ಮಾಡಲು, ಪ್ರೈವೇಟ್ ಕಂಪನಿಗಳಿಗೆ ನಿಮ್ಮ ಭೂಮಿಯನ್ನು ಬಾಡಿಗೆಗೆ ಕೊಡಬಹುದು. ನಿಮ್ಮ ಭೂಮಿ ಹೈವೇ ಗೆ ಹತ್ತಿರದಲ್ಲಿದ್ದರೆ, ಅಲ್ಲಿ ನೀವು ಢಾಬಾ ಅಥವಾ ಹೋಮ್ ಸ್ಟೇ ಶುರು ಮಾಡಬಹುದು. ಆಗ ದಾರಿ ನಡುವೆ ಜನರಿತೆ ವಿಶ್ರಾಂತಿ ಪಡೆಯಲು, ಊಟ ಮಾಡಲು ಜಾಗ ಸಿಕ್ಕ ಹಾಗೆ ಆಗುತ್ತದೆ. ಇದಕ್ಕೆ ಸರ್ಕಾರದ ಅನುಮತಿ ಬೇಕಾಗುತ್ತದೆ.
Comments are closed.