Kannada News: ಒಂದು ಲೀಟರ್ ಗೆ ಮತ್ತಷ್ಟು ಕುಸಿದ ಎಣ್ಣೆ ಬೆಲೆ: ಎಷ್ಟಾಗಿದೆ ಗೊತ್ತೇ? ಎಷ್ಟು ಕಡಿಮೆ ಬೆಲೆ ಗೊತ್ತೇ?? ತಿಳಿದರೆ ಇಂದೇ ಖರೀದಿ ಮಾಡಿ ಸೇವಿಸುತ್ತೀರಿ.
Kannada News: ಪ್ರಪಂಚದಲ್ಲಿ ಈಗ ಹಣದುಬ್ಬರ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ರಾಷ್ಟ್ರದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮುಖ ಹಾಲು ಸರಬರಾಜು ಕಂಪನಿ ಆಗಿರುವ ಮದರ್ ಡೈರಿ ಹಣದುಬ್ಬರದ ಕಾರಣದಿಂದ ಈಗ ಸ್ವಲ್ಪ ಪರಿಹಾರ ನೀಡಿದೆ. ಮದರ್ ಡೈರಿಯ ಧಾರಾ ಬ್ರಾಂಡ್ ಇಂದ ಮಾರಾಟ ಆಗುವ ಎಣ್ಣೆಯ ಬೆಲೆಯಲ್ಲಿ MRP ಮೇಲೆ ಒಂದು ಲೀಟರ್ ಗೆ ₹15 ರಿಂದ ₹20 ರೂಪಾಯಿ ಕಡಿಮೆ ಮಾಡಿದೆ.

ಈ ನಿಯಮ ತಕ್ಷಣವೇ ಜಾರಿಗೆ ಬರಬೇಕು ಎಂದು ಆದೇಶ ನೀಡಿದೆ. ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಯ ಬೆಲೆ ಕುಸಿತ ಆಗಿರುವುದರಿಂದ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ..ಹೊಸ ಎಂ.ಆರ್.ಪಿ ಬೆಲೆಯೊಂದಿಗೆ ಧಾರಾ ಕಂಪನಿಯ ಅಡುಗೆ ಎಣ್ಣೆಯ ಪ್ಯಾಕೆಟ್ ಗಳು ಮುಂದಿನ ವಾರದಿಂದ ಮಾರುಕಟ್ಟೆಗೆ ಬರಬಹುದು ಎನ್ನಲಾಗಿದೆ. ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಲು ಆಹಾರ ಸಚಿವಾಲಯ ಅಡುಗೆ ಎಣ್ಣೆಯ ಖ್ಯಾತ ಉದ್ಯಮ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಆಸೋಸಿಯೇಶನ್ ಆಫ್ ಇಂಡಿಯಾಗೆ (ಎಸ್.ಇ.ಎ) ಗೆ ತಿಳಿಸಿತ್ತು.
ಧಾರಾ ಸಂಸ್ಥೆಯ ಅಡುಗೆ ಎಣ್ಣೆಯ ಬೆಲೆಯಲ್ಲಿ ಸೋಯಾಬೀನ್ ಎಣ್ಣೆ, ರೈಸ್ ಬ್ರಾನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ಕಡಲೆಕಾಯಿ ಎಣ್ಣೆ ಬೆಲೆಗಳಿಗೆ 15 ರಿಂದ 20 ರೂಪಾಯಿ ಪ್ರತಿ ಲೀಟರ್ ಗೆ ಕಡಿಮೆ ಆಗಿದೆ. ದರಗಳಲ್ಲಿ ಕಡಿಮೆ ಆದ ನಂತರ, ಒಂದು ಲೀಟರ್ ನ ಸೋಯಾಬೀನ್ ಎಣ್ಣೆಯ ಪ್ಯಾಕೆಟ್ ₹170 ರೂಪಾಯಿಯಿಂದ ₹150 ರೂಪಾಯಿಗೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಧಾರಾ ರಿಫೈನ್ಡ್ ರೈಸ್ ಬ್ರಾನ್ ನ ಬೆಲೆ ಒಂದು ಲೀಟರ್ ₹190 ರೂಪಾಯಿಯಿಂದ ₹170 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಧಾರಾ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಬೆಲೆ ಒಂದು ಲೀಟರ್ ಗೆ ₹175 ರೂಪಾಯಿಯಿಂದ ₹160 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಹಾಗೆಯೇ ಕಡಲೆಕಾಯಿ ಎಣ್ಣೆಯ ಬೆಲೆ ಒಂದು ಲೀಟರ್ ಗೆ ₹255 ರೂಪಾಯಿಯಿಂದ ₹240 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಈ ಬೆಲೆ ಇಳಿಕೆ ಜನರಿಗೆ ತುಸು ನೆಮ್ಮದಿ ನೀಡಿದೆ ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ.
Comments are closed.