Health Tips: ಹೃದಯಾಗಾತ ಆಗುವ ಮುನ್ನವೇ ಈ ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳು ಕಂಡು ಬಂದರೆ, ಆಸ್ಪತ್ರೆಗೆ ಹೋಗಿ ಜೀವ ಉಳಿಸಿಕೊಳ್ಳಿ. ಏನು ಗೊತ್ತೇ??
Health Tips: ಈಗ ಹೃದಯಾಘಾತ (Heart Attack) ಎನ್ನುವುದು ವಯಸ್ಸಿನ ವ್ಯತ್ಯಾಸ ಇಲ್ಲದೆ ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ. ಅನೇಕ ಜನರು ಇದಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತ ಇದ್ದಕ್ಕಿದ್ದ ಹಾಗೆ ಬರುತ್ತದೆ, ಆದರೆ ಬರುವುದಕ್ಕಿಂತ ಮೊದಲೇ, ಕೆಲವು ಸೂಚನೆಗಳನ್ನು ನೀಡುತ್ತದೆ. ಅವುಗಳು ಸಾಮಾನ್ಯ ಲಕ್ಷಣಗಳಾಗಿರಬಹುದು ಅಥವಾ ಬೇರೆ ರೀತಿಯಲ್ಲೂ ಇರಬಹುದು. ಎದೆನೋವು, ಭುಜ ನೋವು, ಸುಸ್ತು, ನಿದ್ದೆಯ ಸಮಸ್ಯೆ, ಹೃದಯ ಬಡಿತದಲ್ಲಿ ವ್ಯತ್ಯಾಸ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅವುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನಮ್ಮ ದೇಶದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಜಾಸ್ತಿಯಾಗುತ್ತಿದೆ.

ಇದೊಂದು ಸೈಲೆಂಟ್ ಕಿಲ್ಲರ್ ಸಮಸ್ಯೆ ಆಗಿದೆ ಎಂದರೆ ತಪ್ಪಲ್ಲ. ಇದರ ವೇಗ ಹೆಚ್ಚಾಗುತ್ತಲೇ ಇದೆ. ಈಗಿನ ಕಾಲದಲ್ಲಿ ಬಿಡುವೆ ಇಲ್ಲದ ಸ್ಟ್ರೆಸ್ ಫುಲ್ ಜೀವನ, ಕಂಟ್ರೋಲ್ ಇಲ್ಲದ ಆಹಾರ ಪದ್ಧತಿ, ಜಂಕ್ ಫುಡ್ (Junk Food), ಧೂಮಪಾನ, ಮದ್ಯಪಾನ ಇದೆಲ್ಲದಿಂದ ಯುವಜನತೆಯಲ್ಲಿ ಹೃದಯಾಘಾತ ಅಪಾಯ ಜಾಸ್ತಿಯಾಗುತ್ತಿದೆ. ಕೊಲೆಸ್ಟ್ರಾಲ್, ಡೈಯಾಬಿಟಿಸ್ (Diabetes), ಹೈ ಬ್ಲಡ್ ಪ್ರೆಶರ್ (High Blood Pressure), ಫ್ಯಾಟ್ ಇಂಥ ಸಮಸ್ಯೆಗಳು ಜಾಸ್ತಿಯಾಗುತ್ತಿದೆ. ಹೃದಯಾಘಾತ ಆಗುವುದನ್ನು ತಪ್ಪಿಸಬೇಕು ಎಂಸರೆ, ಅದರ ಸೂಚನೆಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಜಾನ್ ಮೇರಿ ಬ್ರೌನ್ ಎನ್ನುವವರಿಗೆ ಈಗ 65 ವರ್ಷ, ಅವರು ಆರೋಗ್ಯವಾಗಿದ್ದಾರೆ. ಆದರೆ ಅವರಿಗೆ 47ನೇ ವಯಸ್ಸಿನಲ್ಲಿ ಹೃದಯಾಘಾತ ಆಗಿಯ್ತು. ಆಕೆಗೆ ಕೊಲೆಸ್ಟ್ರಾಲ್ ಜಾಸ್ತಿಯಾಗಿತ್ತು. ಇದರ ಬಗ್ಗೆ ಆಕೆ ಮಾತನಾಡಿ, “ಒಂದು ದಿನ ನಾನು ಬೆಳಗ್ಗೆ ಎದ್ದಾಗ ನನಗೆ ಎದೆ ಉರಿ ಶುರುವಾಯಿತು, ಅದು ಸಾಮಾನ್ಯ ಎಂದು ನಾನು ಭಾವಿಸಿದೆ, ಕಾರಣ ಏನು ಎಂದು ಅರ್ಥ ಆಗಿರಲಿಲ್ಲ. ಈ ನೋವು ನನಗೆ ಫುಡ್ ಪೈಪ್ ನಲ್ಲಿ ಕಾಣಿಸಿಕೊಂಡಿತು.
ಕೋಕ್ ಬಾಟಲ್ ಅನ್ನು ನನ್ನ ಗಂಟಲಿಗೆ ಹಾಕುತ್ತಿದ್ದಾರೆ ಅನ್ನಿಸಿತ್ತು..” ಎಂದಿದ್ದಾರೆ. ಬಳಿಕ ನಾನು ಒಂದು ಸಾರಿ ಲ್ಯಾಬ್ ನಲ್ಲಿ ಬ್ಲಡ್ ಟೆಸ್ಟ್ ಮಾಡಿಸಿಜ್ ರಿಪೋರ್ಟ್ ಗಾಗಿ ಕಾಯುತ್ತಿದ್ದೆ. ಇದ್ದಕ್ಕಿದ್ದ ನಾನು ಬೆವರಲು ಶುರುವಾದೆ, ಕಾರ್ ಇಂದ ಇಳಿಯುವಾಗ ಬೆಳಜಿಗುಣ ಗಾಳಿಯಲ್ಲಿ ನಾನು ರೆಸ್ಟ್ ಮಾಡಬಹುದು ಎಂದುಕೊಂಡೆ. ಆದರೆ ಎದ್ದು ನಿಂತಾಗ ತುಂಬಾ ವೀಕ್ ಆಗಿದ್ದೇನೆ ಅನ್ನಿಸಿತು. ಕೆಲ ನಿಮಿಷ ಉಸಿರಡುವುದಕ್ಕೂ ಕಷ್ಟವಾಯಿತು. ಆಗ ನನಗೆ ಹೃದಯಾಘಾತ ಆಗುತ್ತಿರಬಹುದು ಎಂದು ಅನ್ನಿಸಿತು. ಹೊಟ್ಟೆ ನೋವು ಅಥವಾ ಗ್ಯಾಸ್ಟ್ರಿಕ್ ನೋವನ್ನು ನಿರ್ಲಕ್ಷ್ಯ ಮಾಡಬೇಡಿ.. ಎಂದು ಆಕೆ ಹೇಳಿದ್ದಾರೆ.
Comments are closed.