Sanjana Galrani: ಮುಸ್ಲಿಂ ನನ್ನ ಮದುವೆಯಾದರು ಬುರ್ಖಾ ಹಾಕದೆ, ಇದೀಗ ದಿಡೀರ್ ಎಂದು ಸಂಜನಾ ಬುರ್ಖಾದಲ್ಲಿ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?? ಕಾರಣ ಏನು ಗೊತ್ತೇ?
Sanjana Galrani: ಕನ್ನಡದ ನಟಿ ಸಂಜನಾ ಗಲ್ರಾನಿ (Sanjana Galrani) ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಮದುವೆ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಅಜೀಜ್ ಪಾಶ (Azeez Pasha) ಎನ್ನುವ ಡಾಕ್ಟರ್ ಜೊತೆಗೆ ಮದುವೆ ಆಗಿರುವ ಸಂಜನಾ ಅವರಿಗೆ ಅಲಾರಿಕ್ ಪಾಶ (Alarik Pasha) ಎನ್ನುವ ಮಗುವಿದೆ. ಸಂಜನಾ ಗಲ್ರಾನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಇಷ್ಟು ವರ್ಷಗಳಲ್ಲಿ ಇದೇ ಮೊದಲ ಸಾರಿ ಸಂಜನಾ ಅವರು ಬುರ್ಖಾ ಧರಿಸಿ ವಿಡಿಯೋ ಮಾಡಿದ್ದಾರೆ. ಅದಕ್ಕೆ ಕಾರಣ ಕೂಡ ತಿಳಿಸಿದ್ದಾರೆ. ತಾವು ತಮ್ಮ ಕುಟುಂಬದ ಜೊತೆಗೆ ಧಾರ್ಮಿಕ ಸ್ಥಳಕ್ಕೆ ಹೋಗುತ್ತಿರುವುದರಿಂದ ಬುರ್ಖಾ ಧರಿಸಿರುವುದಾಗಿ ಸಂಜನಾ ಹೇಳಿಕೊಂಡಿದ್ದಾರೆ. ತಾವು ಜಾತ್ಯತೀತ ವ್ಯಕ್ತಿಯಾಗಿದ್ದು, ಹಿಂದೂ ಕುಟುಂಬದಲ್ಲಿ ಹುಟ್ಟಿ, ಕ್ರಿಶ್ಚಿಯನ್ ಶಾಲೆಯಲ್ಲಿ ಕಲಿತು, ಈಗ ಮುಸ್ಲಿಂ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದು, ಆ ಧರ್ಮವನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.. ಇದನ್ನು ಓದಿ..Krithi shetty: ಬೆಣ್ಣೆಯಂತಹ ನಟಿ, ಬಂಗಾರದಂತಹ ಸಿನಿ ಜೀವನ- ಆದರೆ ಈಕೆಯ ಜೀವನವನ್ನು ನಾಶ ಮಾಡುತ್ತಿರುವುದು ಯಾರು ಗೊತ್ತೇ? ಟಾಪ್ ನಟಿಗೆ ಇದೇನಿದು ಕಂಟಕ
ಹಾಗೆಯೇ ಇದು ತಮ್ಮ ಆಯ್ಕೆ ಮತ್ತು ಇಚ್ಛೆ, ಯಾರು ಕೂಡ ಪ್ರಶ್ನೆ ಮಾಡುವ ಹಾಗಿಲ್ಲ, ಅದು ತಮ್ಮ ಸ್ವಾತಂತ್ರ್ಯ ಎಂದು ಸಹ ಹೇಳಿಕೊಂಡಿದ್ದಾರೆ. ಇದೇ ಮೊದಲ ಸಾರಿ ಮೆಕ್ಕ ಮತ್ತು ಮದಿನಾಗೆ ಹೋಗುತ್ತಿದ್ದು, ಮೂರು ವರ್ಷಗಳ ಹಿಂದೆ ಕಷ್ಟದಲ್ಲಿದ್ದಾಗ, ದೇವರ ಹತ್ತಿರ ಪ್ರಾರ್ಥನೆ ಮಾಡಿದ್ದು, ವಿದೇಶಕ್ಕೆ ಎಂದು ಹೋದರೆ ಅದು ನಿನ್ನ ಸನ್ನಿಧಿಗೆ ಎಂದು ಬೇಡಿಕೊಂಡಿದ್ದರಂತೆ. ಅದರಿಂದ ಈಗ ಹೋಗುತ್ತಿರುವುದಾಗಿ ಹೇಳಿದ್ದಾರೆ. ಈಗ ಸಂಜನಾ ಅವರು ಮಗುವಿನ ತಾಯಿ. ಇನ್ಸ್ಟಾಗ್ರಾಮ್ (Instagram) ಜೊತೆಗೆ ಯೂಟ್ಯೂಬ್ (YouTube) ಚಾನೆಲ್ ಹೊಂದಿರುವ ಸಂಜನಾ ಅವರು..
ಯೂಟ್ಯೂಬ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಎರಡು ವಾರಗಳ ಕಾಲ ಮೆಕ್ಕಾ ಮದಿನಾಗೆ ಹೋಗಲಿದ್ದು, ತಮ್ಮ ಪ್ರಯಾಣವನ್ನು travel vlog ಮಾಡಿ ಹಾಕಲಿದ್ದು, ಅದಕ್ಕೆ ಎಲ್ಲರೂ ಪ್ರೋತ್ಸಾಹಿಸಿ ಎಂದಿದ್ದಾರೆ. ಹಾಗೆಯೇ ತಾವು ಸೆನ್ಸಿಟಿವ್ ಎಂದು ಹೇಳಿಕೊಂಡಿದ್ದಾರೆ ಸಂಜನಾ. ಇದೀಗ ಇವರ ಈ ವಿಡಿಯೋಗೆ ಬಹಳಷ್ಟು ಟೀಕೆಭರಿತ ಕಮೆಂಟ್ ಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Alekhya Reddy: ತಗೋಳಪ್ಪಾ, ಗಂಡ ತೀರಿಕೊಂಡ ಕೆಲವೇ ತಿಂಗಳಿನಲ್ಲಿ ಏನಾಗುತ್ತಿದೆ ಗೊತ್ತೇ?? ಖುಷಿಯಲ್ಲಿ ಕುಣಿದು ತೇಲಾಡುತ್ತಿರುವ ಅಭಿಮಾನಿಗಳು. ಏನಾಗಿದೆ ಗೊತ್ತೇ?
Comments are closed.