Vijayendra: ಮತ್ತೆ ಶುರು ಆಯಿತು ಸೋಮಣ್ಣ vs ವಿಜಯೇಂದ್ರ- ಬಹಿರಂಗವಾಗಿಯೇ ಸೋಮಣ್ಣ ಹೇಳಿದ್ದೇನು ಗೊತ್ತೇ?? ಬಿಜೆಪಿ ಪಕ್ಷಕ್ಕೆ ಮತ್ತೊಂದು ಶಾಕ್.

Vijayendra: ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷವನ್ನು ಸೋಲಿಸಿದೆ, ಇದೀಗ ಈ ವಿಚಾರವಾಗಿ ಹೊಸದೊಂದು ವಿವಾದ ಶುರುವಾಗಿದೆ. ಬಿಜೆಪಿ ಪಕ್ಷದ ಕಾರ್ಯಾಧ್ಯಕ್ಷ ವಿ.ಸೋಮಣ್ಣ ಅವರು ಬುಧವಾರ ಬಿಜೆಪಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹತ್ತಿರದವರೆ ತಾವು ಚಾಮರಾಜ ಕ್ಷೇತ್ರದಲ್ಲಿ ಸೋಲೊದಕ್ಕೆ ಕಾರಣ ಎಂದು ವಿಜಯೇಂದ್ರ ಅವರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ವಿರುದ್ಧ ಈ ರೀತಿ ಮಾಡಿದವರ ಹೆಸರನ್ನು ಹೇಳಿ, ಅವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಘಟಕಕ್ಕೆ ಮನವಿ ಮಾಡಿಕೊಂಡಿದ್ದಾರೆ.

somanna is unhappy about vijayendra followers Vijayendra:
Vijayendra: ಮತ್ತೆ ಶುರು ಆಯಿತು ಸೋಮಣ್ಣ vs ವಿಜಯೇಂದ್ರ- ಬಹಿರಂಗವಾಗಿಯೇ ಸೋಮಣ್ಣ ಹೇಳಿದ್ದೇನು ಗೊತ್ತೇ?? ಬಿಜೆಪಿ ಪಕ್ಷಕ್ಕೆ ಮತ್ತೊಂದು ಶಾಕ್. 2

ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸೋಮಣ್ಣ ಅವರು, ತಮ್ಮ ಜೊತೆಗಿದ್ದು ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಲಿಂಗಾಯತ ಸಮುದಾಯದ ಪ್ರಬಲ ವ್ಯಕ್ತಿಯೊಬ್ಬರು ಹಾಗು ಹತ್ತಿರದ ತಮ್ಮ ಪಕ್ಷದ ಕೆಲವು ವ್ಯಕ್ತಿಗಳೇ ನಮ್ಮ ವಿರುದ್ಧ ನಿಂತು ಸೋಲುವ ಹಾಗೆ ಮಾಡಿದ್ದಾರೆ ಎಂದು ಸೋಮಣ್ಣ ಅವರು ಕಿಡಿ ಕಾರಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಇಂದ ಸ್ಪರ್ಧಿಸಿದ ಸಿ.ಪುಟ್ಟರಂಗಶೆಟ್ಟಿ ಅವರು 7533 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇದನ್ನು ಓದಿ..Kannada News: ನಾನೇ ಎಲ್ಲಾ ನಂದೇ ಎಲ್ಲಾ ಎನ್ನುತ್ತಿದ್ದ ಮಮತಾಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ – ಕೇರಳ ಸ್ಟೋರಿ ನಿಷೇದ ಮಾಡಿದಕ್ಕೆ ಏನಾಗಿದೆ ಗೊತ್ತೇ??

ಇದಕ್ಕೆ ಕಾರಣ, ಲಿಂಗಾಯತ ಸಮುದಾಯದ ಕೆಲವು ಮುಖಂಡರು ತಮ್ಮ ಪರವಾಗಿ ಕೆಲಸ ಮಾಡದೆ ಇರುವುದು ಎಂದು ಸೋಮಣ್ಣ ಅವರು ಹೇಳಿದ್ದು, ಚಾಮರಾಜನಗರಕ್ಕೆ ಹೋಗಿಲ್ಲ ಪಕ್ಷದ ಹೈಕಮಾಂಡ್ ಹೇಳಿದ ಹಾಗೆ ಇದ್ದೇನೆ ಎಂದಿದ್ದಾರೆ. ನನ್ನ ಕ್ಷೇತ್ರ ಬೆಂಗಳೂರಿನ ಗೋವಿಂದರಾಜ ನಗರ, ಅಲ್ಲಿ ಎಲೆಕ್ಷನ್ ಗೆ ನಿಂತಿದ್ದರೆ ಗೆಲ್ಲುತ್ತಿದ್ದು, ಈಗ ಆ ಕ್ಷೇತ್ರವನ್ನು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾನು ಆಯ್ಕೆ ಮಾಡಿರಲಿಲ್ಲ. ಪಕ್ಷ ಹೇಳಿದ ಹಾಗೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು ಕೂಡ ತಾಳ್ಮೆಯಿಂದ ಇದ್ದು, ಪಕ್ಷಕ್ಕಾಗಿ ಇನ್ನು ಕಷ್ಟಪಟ್ಟು ಕೆಲಸ ಮಾಡಬೇಕು ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಈಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಓಡಿಸುತ್ತಿರುವ ಡಬಲ್ ಸ್ಟೀರಿಂಗ್ ಇರುವ ಬಸ್ ನ ಹಾಗೆ ಆಗಿದೆ, ಈ ಬಸ್ ಗೆ ಅಪಘಾತ ಆಗೋದು ಗ್ಯಾರಂಟಿ. ನನ್ನ ವಿರುದ್ಧವಾಗಿಯೇ ಕೆಲಸ ಮಾಡಿರುವ ಬಿಜೆಪಿ ನಾಯಕರ ಹೆಸರನ್ನು ನಾನು ಹೇಳಲು ಇಷ್ಟಪಡುವುದಿಲ್ಲ. ಸಮಯ ಕಳೆದ ಹಾಗೆ ಅದು ಹೊರಬರಲಿದೆ..” ಎಂದು ಸೋಮಣ್ಣ ಅವರು ಹೇಳಿದ್ದಾರೆ. ಇದನ್ನು ಓದಿ..Personal Loans: ಅತಿ ಕಡಿಮೆ ಬಡ್ಡಿ ದರದಲ್ಲಿ ಅತಿ ಕಡಿಮೆ ಸಮಯದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತೇ? ಕಷ್ಟ ಎಂದರೆ ಇಲ್ಲಿ ತೆಗೆದುಕೊಳ್ಳಿ.

Comments are closed.