Kannada News: ಮೊನ್ನೆ ಮೊನ್ನೆ ಬಂದರೂ, ಪ್ರತಾಪ್ ಸಿಂಹ ರವರಿಗೆ ಪ್ರದೀಪ್ ಈಶ್ವರ್ ನೇರವಾಗಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್.

Kannada News: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಪಕ್ಷದ ಮುಖಂಡ ಮೈಸೂರಿನ ಪ್ರತಾಪ್ ಸಿಂಹ ಅವರು ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದರು. ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿರುವುದು ಅಭ್ಯರ್ಥಿಗಳಿಂದ ಅಲ್ಲ ಅವರು ಕೊಟ್ಟಿರುವ ಭರವಸೆಯಿಂದ, ಜೂನ್ 1ರಿಂದಲೇ ಎಲ್ಲಾ ಭರವಸೆಗಳು ಜಾರಿಗೆ ಬರಬೇಕು. ಇಲ್ಲಡ್ಸ್ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಅವರು ಕಿಡಿಕಾರಿದ್ದರು.

pradeep eeshwar gives reply to pratap simha Kannada News:
Kannada News: ಮೊನ್ನೆ ಮೊನ್ನೆ ಬಂದರೂ, ಪ್ರತಾಪ್ ಸಿಂಹ ರವರಿಗೆ ಪ್ರದೀಪ್ ಈಶ್ವರ್ ನೇರವಾಗಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್. 2

ಪ್ರತಾಪ್ ಸಿಂಹ ಅವರ ಮಾತಿಗೆ ಈಗ ಯುವ ಶಾಸಕ ಪ್ರದೀಪ್ ಈಶ್ವರ್ ತಕ್ಕ ಉತ್ತರ ಕೊಟ್ಟಿದ್ದಾರೆ.. “ಮೈಸೂರಿನ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ತಮ್ಮ ಬಾಯಿ ಚಪಲವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ನಾಲ್ಕು ದಿನಗಳಲ್ಲಿ ದೊಡ್ಡ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಹೇಳುತ್ತಿದ್ದೀರಾ? ನಿಮಗೆ ಪರಿಜ್ಞಾನ ಇಲ್ಲವೇ..ಸರ್ಕಾರ ಅಧಿಕಾರಕ್ಕೆ ಬಂದು ಈಗಷ್ಟೇ ಸಂಪುಟ ಸಭೆಯ ರಚನೆ ಆಗುತ್ತಿದೆ. ಯೋಜನೆಗಳನ್ನು ಜಾರಿಗೆ ತರಲು ಸಂಪುಟದ ಅನುಮತಿ ಬೇಕು..ಸಿಎಂ ಡಿಸಿಎಂ ಜಾರಿಗೆ ತಂದೇ ತರುತ್ತಾರೆ.. ಇದನ್ನು ಓದಿ..Siddaramaiah: ಮತ್ತೊಂದು ಯು ಟರ್ನ್ ಹೊಡೆದ ಸಿದ್ದರಾಮಯ್ಯ- ಪ್ರವೀಣ್ ನೆಟ್ಟರ್ ಪತ್ನಿ ಕೇಸ್ ನಲ್ಲಿ ಟ್ವಿಸ್ಟ್ ಕೊಟ್ಟ ಸಿದ್ದು- ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್.

ಆದರೆ ಕೇವಲ ನಾಲ್ಕು ದಿನಗಳಲ್ಲಿ ಜಾರಿಗೆ ತರಬೇಕು ಎಂದು ಪ್ರತಾಪ್ ಸಿಂಹ ಅವರು ಕೇಳುತ್ತಿದ್ದಾರೆ, ಚುನಾಯಿತರಿಗೆ ಆ ಪರಿಜ್ಞಾನ ಇಲ್ಲವೇ..?” ಎಂದು ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ. “ಪ್ರತಾಪ್ ಸಿಂಹ ಅವರೇ ನಿಮ್ಮ ಬಾಯಿಯ ಚಪಲವನ್ನು ಕಡಿಮೆ ಮಾಡಿಕೊಳ್ಳಿ, ಎಲ್ಲದಕ್ಕೂ ಸ್ವಲ್ಪ ಸಮಯ ಬೇಕು.. ವಿರೋಧ ಪಕ್ಷದವರಾಗಿರುವ ನೀವು ಮಾತನಾಡಬೇಕು ಎನ್ನುವ ಸಲುವಾಗಿ ಮಾತನಾಡಬಾರದು. ಸಿದ್ದರಾಮಯ್ಯ ಅವರಿಗೆ ಬೈದುಕೊಂಡಿದ್ದರೆ ಇವರಿಗೆ ಜನಪ್ರಿಯತೆ ಸಿಗುತ್ತದೆ. ಇದನ್ನ ಬಿಟ್ಟು ಬೇರೆ ಯಾವುದೇ ಕೆಲಸ ಇವರಿಗೆ ಇಲ್ಲ..ಸಮಯ ಕೊಡದೆ ಬಾಯಿಗೆ ಬಂದ ಹಾಗೆ ಮಾತನಾಡೋದು ಎಷ್ಟು ಸರಿ?

ಚಿಕ್ಕ ಮಕ್ಕಳು ಕೇಳೋ ಚಾಕೊಲೇಟ್ ಅಲ್ಲ ಇದು..ಸಾವಿರಾರು ಕೋಟಿಯ್ ಗ್ಯಾರೆಂಟಿ ಯೋಜನೆಗಳು..ಇದನ್ನು ಜಾರಿಗೆ ತರೋದಿಲ್ಲ ಎಂದು ಯಾರು ಕೂಡ ಹೇಳುತ್ತಿಲ್ಲ, ಮುಂದಿನ ತಿಂಗಳಲ್ಲಿ ಜಾರಿಗೆ ತರಲಾಗುತ್ತೆ. ಬಾಯಿಗೆ ಬಂದ ಹಾಗೆ ಏನೇನೋ ಮಾತನಾಡಬಾರದು, ವಿಮರ್ಶೆಗಳು, ಟೀಕೆಗಳು ಎಲ್ಲವೂ ಒಂದು ಹಂತದಲ್ಲಿ ಇರಬೇಕು. ಸುಮ್ಮನೆ ಟೀಕೆ ಮಾಡಬಾರದು..” ಎಂದು ಪ್ರದೀಪ್ ಈಶ್ವರ್ ಪ್ರತಾಪ್ ಸಿಂಹ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ರಾಜಭವನದಲ್ಲಿ ನಡೆದ ರಾಜ್ಯ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕರಣೆ ಕಾರ್ಯಕ್ರಮಕ್ಕೆ ಪ್ರದೀಪ್ ಈಶ್ವರ್ ಬಂದಿದ್ದರು, ಆಗ ಮಾಧ್ಯಮದ ಎದುರು ಈ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ..Dk Shivakumar: ಜನರ ಪರವಾಗಿ ಧ್ವನಿ ಎತ್ತಿದ ಪ್ರತಾಪ್ ಸಿಂಹ ಗೆ ವ್ಯಂಗ್ಯವಾಡಿದ ಡಿಕೆಶಿ. ಹೇಳಿದ್ದೇನು ಗೊತ್ತೇ? DCM ಇವೆಲ್ಲ ಬೇಕಿತ್ತಾ ಎಂದ ನೆಟ್ಟಿಗರು.

Comments are closed.