Karnataka: ಬಿಜೆಪಿ ಗೆ ಮತ್ತೊಂದು ಶಾಕ್ ಕೊಡಲು ತಯಾರಿ ನಡೆಸುತ್ತಿರುವ ಶಾಕ್- ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಫುಲ್ ಕುಶ್. ಯಾಕೆ ಗೊತ್ತೆ?

Karnataka: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಬಿಜೆಪಿ ಪಕ್ಷದಿಂದ ಆಗಿರುವ ಎಲ್ಲಾ ಹಗರಣಗಳನ್ನು ಬೆಳಕಿಗೆ ತರುತ್ತೇವೆ, 40% ಕಮಿಷನ್ ತಿಂದಿರುವುದಕ್ಕೆ 100% ಕಕ್ಕಿಸುತ್ತೇವೆ..ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಹಾಗೆಯೇ ಡಿಕೆ ಶಿವಕುಮಾರ್ ಅವರು ಅಕ್ರಮ ನಡೆದಿರುವ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ ಕೊಡಬೇಕು ಎಂದು ಡಿಕೆ ಶಿವಕುಮಾರ್ ಅವರು ಸಹ ಸೂಚನೆ ನೀಡಿದ್ದಾರೆ. ಬಿಜೆಪಿಯವರು ಜೈಲು ಸೇರಲು ರೆಡಿಯಾಗಿರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ..

congress is filing case against 40 percent commission Karnataka:
Karnataka: ಬಿಜೆಪಿ ಗೆ ಮತ್ತೊಂದು ಶಾಕ್ ಕೊಡಲು ತಯಾರಿ ನಡೆಸುತ್ತಿರುವ ಶಾಕ್- ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಫುಲ್ ಕುಶ್. ಯಾಕೆ ಗೊತ್ತೆ? 2

“ಬಿಜೆಪಿ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ಹೊರಗೆಳೆಯುತ್ತೇವೆ, ತಿಂದಿರುವ 40% ಕಮಿಷನ್‌ನ್ನು 100% ವಾಪಸ್ ಕಕ್ಕಿಸುತ್ತೇವೆ. ಬಿಬಿಎಂಪಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ತನಿಖೆ ನಡೆಸಿ ದಾಖಲೆ ಸಲ್ಲಿಸಲು ಡಿಸಿಎಂ @DKShivakumar ಸೂಚಿಸಿದ್ದಾರೆ. ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ತೆರಳಲು ತಯಾರಾಗಿರಲಿ!..” ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದೆ.

ಚುನಾವಣೆ ನಡೆಸಲಾಗದ ಬಿಜೆಪಿ ಸರ್ಕಾರದಿಂದಾಗಿ ಚುನಾಯಿತ ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಗೆ ಚುರುಕು ಮುಟ್ಟಿಸಲಾಗಿದೆ. ಬಿಬಿಎಂಪಿಯಲ್ಲಿ ಜನಸ್ನೇಹಿ ಹಾಗೂ ಭ್ರಷ್ಟಾಚಾರ ಮುಕ್ತ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಡಿಸಿಎಂ @DKShivakumar ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೂ ನಡೆದ ಎಲ್ಲಾ ಅಕ್ರಮಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು.. ಎಂದು ಕಾಂಗ್ರೆಸ್ ಪಕ್ಷ ಮತ್ತೊಂದು ಟ್ವೀಟ್ ಮಾಡಿದೆ. ಬಿಬಿಎಂಪಿ ಹಗರಣಗಳು ಹಾಗೂ ಇನ್ನಿತರ ಎಲ್ಲಾ ಕಾಮಗಾರಿಗಳ ಬಗ್ಗೆ ರಿಪೋರ್ಟ್ ಕೊಡಲು ಡಿಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.

ಹಾಗೆಯೇ 10 ದಿನಗಳ ಸಮಯವನ್ನು ಕೂಡ ನೀಡಿದ್ದಾರೆ.. ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರದ ಈ ನಡೆ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಂತೋಷವಾಗಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಮಾಡುತ್ತಿದ್ದು, ತಪ್ಪು ಮಾಡಿದ್ದರೇ ನಾವು ಯಾರನ್ನು ಬೆಂಬಲಿಸುವುದಿಲ್ಲ, ಒಂದು ರೂಪಾಯಿ ಅಕ್ರಮ ನಡೆದಿದ್ದರೂ ಅವರನ್ನು ಒಳಗೆ ಹಾಕಿ, ನಮಗೆ ದೇಶ ಮುಖ್ಯ. ಯಾವುದೇ ನಾಯಕನಲ್ಲ. ಆದರೆ ತಪ್ಪು ಮಾಡದೇ ಇದ್ದರೇ ಇದರಿಂದ ಸತ್ಯ ಹೊರಬೀಳುತ್ತದೆ… ಎಂದು ಬರೆದುಕೊಂಡಿದ್ದಾರೆ.

Comments are closed.