Priyank Kharge: ಗ್ಯಾರಂಟಿ ಯೋಜನೆಗಳ ಬಗ್ಗೆ ಉಲ್ಟಾ ಹೊಡೆದ ಪ್ರಿಯಾಂಕ್ ಖರ್ಗೆ- ಕೊನೆ ಕ್ಷಣದಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತೇ?

Priyank Kharge: ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಹೊರತರುವುದಾಗಿ ಹೇಳಿತ್ತು, ಜನರು ಕೂಡ ಆ ಮಾತನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇಂದು ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಉಚಿತ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಈಗ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಯೋಜನೆಗಳ ಬಗ್ಗೆ ಉಲ್ಟಾ ಹೊಡೆಯುವ ಮಾತನಾಡಿದ್ದಾರೆ..

priyank kharge about guarantees in karnataka Priyank Kharge:
Priyank Kharge: ಗ್ಯಾರಂಟಿ ಯೋಜನೆಗಳ ಬಗ್ಗೆ ಉಲ್ಟಾ ಹೊಡೆದ ಪ್ರಿಯಾಂಕ್ ಖರ್ಗೆ- ಕೊನೆ ಕ್ಷಣದಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತೇ? 2

“ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಉಚಿತವಾಗಿ ಸಿಗುತ್ತದೆ ಎಂದು ಸರ್ಕಾರ ಹೇಳಿಲ್ಲ.. ಸರ್ಕಾರ ತರುವ ಯಾವುದೇ ಯೋಜನೆ ಎಲ್ಲರಿಗೂ ಪುಕ್ಸಟ್ಟೆಯಾಗಿ ಸಿಗೋದಿಲ್ಲ.. ಅವುಗಳಿಗೆ ಕೆಲವು ಮಾನದಂಡ ಇರುತ್ತದೆ. ಗ್ಯಾರಂಟಿ ಯೋಜನೆಗಳು ಸಿಗಬೇಕಿರುವುದು ಯಾರಿಗೆ ಎಂದು ಒಂದು ಬ್ಲೂ ಪ್ರಿಂಟ್ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆ ಆಗಲಿ ಉಚಿತವಾಗಿ ಸಿಗುವುದಿಲ್ಲ. ಅದನ್ನು ಪಡೆಯಲು ಕೆಲವು ಮಾನದಂಡಗಳು ಇರುತ್ತದೆ. ಇದನ್ನು ಓದಿ..Karnataka: ಬಿಜೆಪಿ ಗೆ ಮತ್ತೊಂದು ಶಾಕ್ ಕೊಡಲು ತಯಾರಿ ನಡೆಸುತ್ತಿರುವ ಶಾಕ್- ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಫುಲ್ ಕುಶ್. ಯಾಕೆ ಗೊತ್ತೆ?

ಶುಕ್ರವಾರ ಕ್ಯಾಬಿನೆಟ್ ಸಭೆ ನಡೆಯುತ್ತದೆ, ಅದರಲ್ಲಿ ಈ ಎಲ್ಲದರ ಬಗ್ಗೆಯೂ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಿಎಂ ಸಿದ್ದರಾಮಯ್ಯನವರು ಯಾವ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಎಂದು ತಿಳಿಸುತ್ತಾರೆ. ಜನರಿಗೆ ಆರ್ಥಿಕವಾಗಿ ಸ್ಥಿರತೆ ಕೊಟ್ಟು, ಸ್ವಾಭಿಮಾನದಿಂದ ಅವರು ಬದುಕು ಕಟ್ಟಿಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ.. ಬಡತನದ ರೇಖೆಗಿಂತ ಕೆಳಗಿರುವ ಬಡವರಿಗೆ ಜನರಿಗೆ ಆರ್ಥಿಕವಾಗಿ ಸ್ಥಿರತೆ ಕೊಡಬೇಕು ಎಂದು ಈ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ..

ಎಲೆಕ್ಷನ್ ನಲ್ಲಿ ಸೋತ ಬಿಜೆಪಿ ಮನೆಯಲ್ಲಿ ಕುಳಿತಿರುವುದರಿಂದ ಈ ರೀತಿ ಪ್ರಚೋದನೆಗಳನ್ನು ಕೊಡುತ್ತಿದೆ. ನಾಲ್ಕು ವರ್ಷ ಇದ್ದ ಅವರು ಏನು ಮಾಡಿದ್ದಾರೆ? 600 ಭರವಸೆಗಳನ್ನು ಕೊಟ್ಟು ಈಗ ಎಷ್ಟನ್ನು ಈಡೇರಿಸಿದ್ದಾರೆ? ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು, ಅದು ಆಗಿದ್ಯಾ? ಎಲ್ಲರ ಅಕೌಂಟ್ ಗೆ 15 ಲಕ್ಷ ಬರುತ್ತದೆ ಎಂದಿದ್ದರು, ಅದು ಬಂದಿದ್ಯಾ?” ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ..Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.

Comments are closed.