Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?

Garuda Purana: ಜೀವನದಲ್ಲಿ ಬಡತನ ಸಿರಿತನ ಎನ್ನುವುದು ಎಲ್ಲರ ಜೀವನದಲ್ಲೂ ಇದ್ದೇ ಇರುತ್ತದೆ. ನೀವು ಇದ್ದಕ್ಕಿದ್ದ ಹಾಗೆ ಬಡವರಾಗುವುದು ಅಥವಾ ಅಂಥ ಬದಲಾವಣೆ ಆಗುವುದು ನಡೆದರೆ, ಬಹುಶಃ ನಿಮ್ಮ ಕೆಲವು ಅಭ್ಯಾಸಗಳು ಸರಿಯಾಗಿ ಇರದ ಕಾರಣ ನೀವು ಬಡವರಾಗುತ್ತಿರಬಹುದು. ಇದಕ್ಕೆ ಗರುಡ ಪುರಾಣದಲ್ಲಿ ಉತ್ತರವಿದೆ. ಗರುಡ ಪುರಾಣದ ಪ್ರಕಾರ, ಈ ಕೆಲವು ಕೆಲಸಗಳನ್ನು ನೀವು ಮಾಡುತ್ತಿದ್ದರೆ ನೀವು ಬಡವರಾಗುತ್ತೀರಿ. ಮಾಡಬಾರದು ಎನ್ನುವ ಆ ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಮನಸ್ಸಿನಲ್ಲಿ ಹಣಕ್ಕಾಗಿ ದುರಾಸೆ ಇರಬಾರದು. ಹಣಕ್ಕಾಗಿ ದುರಾಸೆ ಪಡುವ ವ್ಯಕ್ತಿ ಹಣ ಸಂಪಾದನೆಗೆ ಕೆಟ್ಟ ದಾರಿಯಲ್ಲಿ ಹೋಗುವುದಕ್ಕೆ ಮುಂದಾಗುತ್ತಾನೆ. ಇಂಥ ದುರಾಸೆ ಇರುವ ವ್ಯಕ್ತಿಯ ಹತ್ತಿರ ಹಾಗೂ ತಪ್ಪು ದಾರಿಯಲ್ಲಿ ಹೋಗುವ ವ್ಯಕ್ತಿಯ ಹತ್ತಿರ ಲಕ್ಷ್ಮೀದೇವಿ ಇರುವುದಿಲ್ಲ. ಅಂಥವರ ಕೈಯಲ್ಲಿ ಹಣ ಉಳಿಯುವುದಿಲ್ಲ. ಇದನ್ನು ಓದಿ..Vastu Tips: ಸತ್ತು ಹೋಗಿರುವ ಹಿರಿಯರ ಫೋಟೋ ನಿಮ್ಮ ಮನೆಯಲ್ಲಿ ಇಟ್ಟಿಲ್ಲವೇ?? ಹೇಗೆ ಇಟ್ಟರೆ ಅದೃಷ್ಟ ಗೊತ್ತೇ?? ಹೀಗೆ ಇಟ್ಟು ನೋಡಿ, ನೀವೇ ಕಿಂಗ್.

*ಬದುಕಿನಲ್ಲಿ ನಮಗೆ ಸಿಗುವುದು ಮತ್ತು ನಮ್ಮ ಹತ್ತಿರ ಇರುವುದು ಎಲ್ಲವೂ ದೇವರ ಆಶೀರ್ವಾದದಿಂದ ನಮಗೆ ಸಿಕ್ಕಿದ್ದು, ಅದನ್ನು ಮನುಷ್ಯರು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ತನ್ನ ಹತ್ತಿರ ಇರುವ ವಸ್ತುಗಳ ಬಗ್ಗೆ ಅಹಂಕಾರದಲ್ಲಿ ವರ್ತನೆ ಮಾಡಬಾರದು. ಹೀಗೆ ಸಂಪತ್ತು, ಆಸ್ತಿ ವಿಷಯಕ್ಕೆ ಅಹಂಕಾರ ಪಡುವ ವ್ಯಕ್ತಿಯ ಜೀವನ್ ಅವನತಿಯ ಕಡೆಗೆ ಸಾಗುತ್ತದೆ.

*ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ ನಾವು ಎಷ್ಟೇ ಶಕ್ತಿಶಾಲಿ ಆಗಿದ್ದರು, ಕಷ್ಟದಲ್ಲಿ ಇರುವವರನ್ನು, ಬಲಹೀನರನ್ನು ಯಾವುದೇ ಕಾರಣಕ್ಕೂ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ಬಡವರು, ಗತಿ ಇಲ್ಲದವರಿಗೆ ಕಷ್ಟಕೊಟ್ಟು ಹಣ ಸಂಪಾದನೆ ಮಾಡಬಾರದು. ಈ ರೀತಿಯಲ್ಲಿ ಸಂಪಾದನೆ ಮಾಡುವ ಹಣ ಹೆಚ್ಚು ಸಮಯ ಉಳಿಯುವುದಿಲ್ಲ. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

*ಲಕ್ಷ್ಮೀದೇವಿಗೆ ಕೊಳಕು ಇಷ್ಟ ಆಗುವುದಿಲ್ಲ. ಗಲೀಜಾಗಿರುವ ಜಾಗದಲ್ಲಿ ಲಕ್ಷ್ಮೀದೇವಿ ಇರಲು ಇಷ್ಟಪಡುವುದಿಲ್ಲ. ಹಾಗಾಗಿ ನಿಮ್ಮ ಮನೆ ಮತ್ತು ಸುತ್ತ ಮುತ್ತ ಇರುವ ಜಾಗವನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ, ಬಡತನಕ್ಕೆ ಇದು ಕೂಡ ಒಂದು ಕಾರಣ ಆಗುತ್ತದೆ.

Best News in Kannadagaruda puranakannada liveKannada NewsKannada Trending Newslive newslive news kannadalive trending newsNews in Kannadatop news kannada