Kannada News: ಧರೋಡೆಕೋರ ಆತಿಕ್ ಅಹಮದ್ ಜೀವನದಲ್ಲಿ ಮತ್ತೊಬ್ಬರು ಮಹಿಳೆ ಯಾರು ಗೊತ್ತೇ?? ಯಾರು ಈ ಶಬಾನಾ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Kannada News: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹಾಗೂ ಅವನ ಸಹೋದರ ಅಶ್ರಫ್ ಅಹ್ಮದ್ ಅವರು ಕೆಲವು ಕಿಡಿಗೇಡಿಗಳು ಮುಗಿಸಿರುವ ವಿಷಯ ಗೊತ್ತೇ ಇದೆ. ಕೆಲ ದಿನಗಳ ಹಿಂದೆ ಅವರಿಬ್ಬರನ್ನು ಪರೀಕ್ಷೆ ಮಾಡಿಸಲು ಪ್ರಯಾಗ್ ರಾಜ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಮೂವರು ಕಿಡಿಗೇಡಿಗಳು ರೇಂಜ್ ಒಂದರಲ್ಲಿ ನಿಂತು ಅವರಿಬ್ಬರನ್ನು ಮುಗಿಸಿಬಿಟ್ಟರು. ಅವರಿಬ್ಬರು ಭ್ರಷ್ಟಾಚಾರ ಮಾಡಿರುವ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಶುರು ಮಾಡಿದ್ದಾರೆ. ಅನೇಕ ವಿಚಾರಗಳು ಇದರಿಂದ ಬೆಳಕಿಗೆ ಬರುತ್ತಿದೆ. ಇದೀಗ ತಿಳಿದುಬಂದಿರುವ ವಿಷಯ ಏನು ಅಂದ್ರೆ, ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತ ಪರ್ವಿನ್ ಎರಡು ತಿಂಗಳಿಂದ ನಾಪತ್ತೆಯಾಗಿದ್ದು, ಆಕೆ ಎಲ್ಲಿದ್ದಾರೆ ಎಂದು ಮಾಹಿತಿ ಸಿಕ್ಕಿಲ್ಲ.

ಆ ಸಮಯದಲ್ಲಿ ಅತೀಕ್ ಅಹ್ಮದ್ ಗೆ ಮತ್ತೊಬ್ಬ ಮಹಿಳೆಯ ಪರಿಚಯ ಆಗಿರುವ ವಿಷಯ ಗೊತ್ತಾಗಿದೆ. ಅತೀಕ್ ಅಹ್ಮದ್ ಗೆ ಶಬಾನ ಎನ್ನುವ ಮಹಿಳೆಯ ಜೊತೆಗೆ ಸಂಬಂಧ ಇತ್ತು ಎನ್ನಲಾಗುತ್ತಿದೆ. ಫೆಬ್ರವರಿ 24ರಂದು ಸಬರಮತಿ ಜೈಲಿನಲ್ಲಿ ಶಬಾನ ಅತೀಕ್ ಅವರನ್ನು ಭೇಟಿಯಾಗಿದ್ದಾಳೆ..ಅತೀಕ್ ಗೆ ಮಾಫಿಯಾ ವರ್ಲ್ಡ್ ನಲ್ಲಿದ್ದ ಸಂಬಂಧ, ಅದಕ್ಕೆ ಸಂಬಂಧಿಸಿದ ಮೀಟಿಂಗ್ ಅವನ ಪತ್ನಿ ಶೈಸ್ತ ಗೆ ಇಷ್ಟವಿರಲಿಲ್ಲ ಎಂದು ಪೊಲೀಸರಿಗೆ ಗೊತ್ತಾಗಿದೆ. ಇದು ಅತೀಕ್ ಆಪ್ತರಿಂದ ಗೊತ್ತಾಗಿದ್ದು, ಈಗ ಶೈಸ್ತ ಅವರನ್ನು ಕರೆಸಿ ವಿಚಾರಣೆ ಮಾಡಬೇಕು ಎಂದುಕೊಳ್ಳಲಾಗಿದೆ.

ಇದನ್ನು ಓದಿ: Jio cinema: ಜಿಯೋ ಸಿನಿಮಾ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಸಂಸ್ಥೆ: ಹಾಟ್ ಸ್ಟಾರ್ ಗೆ ಮತ್ತೊಂದು ಶಾಕ್. ಏನೆಲ್ಲಾ ಸಿಗಲಿದೆ ಗೊತ್ತೇ??

ಈಗ ಅತೀಕ್ ಅಹ್ಮದ್ ಪತ್ನಿ ಶೈಸ್ತ ಅವರಿಗಾಗಿ ಪೊಲೀಸರು ಹುಡುಕುತ್ತಿದ್ದು, ಯುಪಿಯ ಎಸ್.ಟಿ.ಎಫ್ ಹಾಗೂ ಕ್ರೈಮ್ ಬ್ರಾಂಚ್ ನ ಪೊಲೀಸರು ದೆಹಲಿ, ಲಕ್ನೌ ಮತ್ತು ಎಲ್ಲಾ ಕಡೆ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕರೋಲ್ ಬಾಗ್ ಜಾಮಿಯಾ ನಗರ, ಹಾಗೂ ಬೇರೆ ಕಡೆಗಳಲ್ಲಿ ಹುಡುಕಲಾಗುತ್ತಿದೆ. ಜನರನ್ನು ಸಹ ಆಕೆಯ ಬಗ್ಗೆ ಕೇಳಿದ್ದು, ಆಕೆಯನ್ನು ಹುಡುಕಿಕೊಟ್ಟವರಿಗೆ ₹50,000 ಬಹುಮಾನ ಕೂಡ ಇಡಲಾಗಿದೆ. ಅತೀಕ್ ಅವರ ಮಾಫಿಯಾ ವರ್ಲ್ಡ್ ನಲ್ಲಿ ಈಕೆಯದ್ದು ಪ್ರಮುಖ ಪಾತ್ರ ಎಂದು ಪೊಲೀಸರಿಗೆ ಅನುಮಾನ ಬಂದಿದೆ.
ಹಾಗೆಯೇ ಶಬಾನಾ ಬಗ್ಗೆ ವಿಚಾರಗಳು ಹೊರಬರುತ್ತಿದ್ದ ಹಾಗೆ, ಅತೀಕ್ ಮಾಫಿಯಾ ವರ್ಲ್ಡ್ ಬಗ್ಗೆ ಇನ್ನಷ್ಟು ವಿಚಾರಗಳು ಹೊರಬರಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಅತೀಕ್ ನಾಲ್ಕು ಸಾರಿ ಎಂಎಲ್ಎ ಆಗಿ ನಾಲ್ಕು ಸಾರಿ ಗೆದ್ದಿದ್ದು, ಒಂದು ಸರಿ ಸಮಾಜವಾದಿ ಪಕ್ಷದ ಮೂಲಕ ಎಂಪಿ ಆಗಿ ಗೆದ್ದಿದ್ದಾರೆ. 2005ರಲ್ಲಿ ತಮ್ಮ ಅಶ್ರಫ್ ಅವರನ್ನು ಸೋಲಿಸಿದ್ದ ಬಿ.ಎಸ್.ಪಿ ಅಭ್ಯರ್ಥಿ ರಾಜ್ ಪಾಲ್ ಅವರನ್ನು ಮುಗಿಸಿದ್ದರು. ಈ ಪ್ರಕರಣವನ್ನು ಕಂಡಿದ್ದ ಉಮೇಶ್ ಯಾದವ್ ಅವರನ್ನು ಸಹ ಅತೀಕ್ ಫೆಬ್ರವರಿ 24ರಂದು ಮುಗಿಸಿಬಿಟ್ಟಿದ್ದರು. ಅತೀಕ್ ಮಾಡಿದ ಆ ಕೆಲಸ ಅವನ ಮಾಫಿಯಾ ವರ್ಲ್ಡ್ ಗೆ ತೊಂದರೆ ಮಾಸಿತ್ತು. ಝಾನ್ಸಿಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಅತೀಕ್ ಫ್ರೆಂಡ್ ಅಸಾದ್ ಹಾಗೂ ಅವನ ಸ್ನೇಹಿತ ಗುಲಾಮ್ ಅವರನ್ನು ಪೊಲೀಸರು ಮುಗಿಸಿದರು. ಇದೀಗ ಅತೀಕ್ ಮತ್ತು ಅಶ್ರಫ್ ಅವರನ್ನು ಸಹ ಯಾರೋ ಮುಗಿಸಿದ್ದಾರೆ.

ಇದನ್ನು ಓದಿ: Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Best News in Kannadabest storiesbest stories in kannadacrime newscrime news kannadacrime stories in kannadakannada liveKannada NewsKannada storyKannada Trending Newslive newslive news kannadalive trending newsNews in Kannadastory in kannadastory kannadatop news kannada