King Charles: ಬ್ರಿಟನ್ ರಾಜನ ಪಟ್ಟಾಭಿಷೇಕಕ್ಕೆ ಖರ್ಚು ಮಾಡಿದ್ದು ಸಾವಿರಾರು ಕೋಟಿ, ಇದಕ್ಕೂ ಹಣ ಕೊಟ್ಟವರು ಯಾರು ಗೊತ್ತೇ? ಖರ್ಚು ಆಗಿದ್ದು ಎಷ್ಟು ಗೊತ್ತೆ?

King Charles: ಬ್ರಿಟನ್ ನ ರಾಜ 3ನೇ ರಾಜ ಚಾರ್ಲ್ಸ್ ಅವರ ಉತ್ತರಾಧಿಕಾರ ಅದ್ಧೂರಿಯಾಗಿ ನಡೆದಿದೆ. ಲಂಡನ್ ಅನ್ನು ಈ ಸಮಾರಂಭಕ್ಕಾಗಿ ಸಿಂಗಾರಗೊಳಿಸಲಾಗಿತ್ತು. ಇಂಗ್ಲೆಂಡ್ ನಲ್ಲಿರುವ ಕ್ಯಾಂಟರ್ ಬರಿ ಚರ್ಚ್ ನ ಆರ್ಚ್ ಬಿಶಪ್ ಜಸ್ಟಿನ್ ವೆಲ್ಲಿ ಅವರ ಮುಂದಾಳತ್ವದಲ್ಲಿ ಚಾರ್ಲ್ಸ್ ಅವರಿಗೆ ಕಿರೀಟ ಧಾರಣೆ ಮಾಡಿ ಪಟ್ಟಾಭಿಷೇಕವನ್ನು ನಡೆಸಲಾಗಿದೆ. ನಂತರ ಆರ್ಚ್ ಬಿಷಪ್ ಅವರು ರಾಜರಿಗೆ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು. ಈ ಸಮಾರಂಭಕ್ಕೆ ಒಟ್ಟು ₹1025 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಬ್ರಿಟನ್ ನಲ್ಲಿ ಈಗಾಗಲೇ ಹಣದುಬ್ಬರದ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಹೀಗಿದ್ದಾಗ ಇಷ್ಟು ಹಣ ಖರ್ಚು ಮಾಡಲು ಹೇಗೆ ಸಾಧ್ಯ? ಇಷ್ಟು ಕೋಟಿ ಎಲ್ಲಿಂದ ಬಂದಿದೆ ಎಂದು ಜನರಲ್ಲಿ ಪ್ರಶ್ನೆ ಶುರುವಾಗಿದೆ.. ಈ ಮೊದಲೆಲ್ಲಾ ಮಾಡುತ್ತಿದ್ದ ಹಾಗೆ ಬ್ರಿಟಿಷ್ ಸರ್ಕಾರವೇ ಈ ಪಟ್ಟಾಭಿಷೇಕದ ಖರ್ಚನ್ನು ಭರಿಸಿದೆ. 1953 ರಲ್ಲಿ ರಾಣಿ ಎಲಿಜಬೆತ್ 2 ಅವರ ಪಟ್ಟಾಭಿಶೇಕಕ್ಕೆ 15.42ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು ಸರ್ಕಾರ. ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ..

ಇದನ್ನು ಓದಿ: Railway Jobs: ಬಿಗ್ ನ್ಯೂಸ್: ಕಡಿಮೆ ಓದಿದ್ದರೂ ಪರೀಕ್ಷೆ ಇಲ್ಲದೆ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದೆ ಇಲಾಖೆ: 92 ಸಾವಿರ ಸಂಬಳ. ಈ ಕೂಡಲೇ ಅರ್ಜಿ ಹಾಕಿ. ಹೇಗೆ ಗೊತ್ತೇ??

ಜೂನ್ 2022 ರಲ್ಲಿ ಬ್ರಿಟನ್ ರಾಜಮನೆತನವು 10.24ಕೋಟಿ ಪೌಂಡ್ ಅಂದ್ರೆ ಸುಮಾರು 940 ಕೋಟಿ ರೂಪಾಯಿಗಳನ್ನು ನಾಗರೀಕರ ತೆರಿಗೆ ಹಣದಿಂದ ಖರ್ಚು ಮಾಡಿದೆ. ಆ ದೇಶದಲ್ಲಿ ರಾಜಮನೆತನದವರಿಗಾಗಿ ವೆಚ್ಚ ಮಾಡುವ ಹಣವನ್ನು ಸಾರ್ವಭೌಮ ಅನುದಾನ ಎನ್ನುತ್ತಾರೆ. ಬ್ರಿಟನ್ ನಲ್ಲಿ ಈಗಿರುವ ಜನಸಂಖ್ಯೆ 6 ಕೋಟಿ 73 ಲಕ್ಷ, ಇಷ್ಟು ಜನರಲ್ಲಿ ಪ್ರತಿಯೊಬ್ಬ ಪ್ರಜೆ ಕೂಡ ₹120 ರೂಪಾಯಿಗಳನ್ನು ಸಾರ್ವಭೌಮ ಸಬ್ಸಿಡಿಗೆ ನೀಡಬೇಕಾಗುತ್ತದೆ. ತೆರಿಗೆ ಕಟ್ಟುತ್ತಿರುವವರು ದೇಶದ ಜನರು ಆದರೆ ರಾಜಮನೆತನಕ್ಕೆ ವಿನಾಯಿತಿ ಸಿಗುತ್ತಿದೆ ಎಂದು ಜನರಿಗೆ ಕೂಡ ಅಸಮಾಧಾನ ಆಗಿದೆ.

3.25ಲಕ್ಷ ಪೌಂಡ್ ಗಿಂತ ಹೆಚ್ಚು ಆಸ್ತಿ ಇರುವ ಬ್ರಿಟಿಷ್ ಪ್ರಜೆಗಳು 40% ಪಿತ್ರಾರ್ಜಿತ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದು 30 ಕೋಟಿ ರೂಪಾಯಿ ಆಗುತ್ತದೆ, ರಾಣಿ ಎಲಿಜಬೆತ್ 2 ಇಂದ ಪಿತ್ರಾರ್ಜಿತವಾಗಿ ಬಂದ ಪ್ರಾಪರ್ಟಿ ಹಣದಲ್ಲಿ ಒಂದು ರೂಪಾಯಿ ಕೂಡ ಪಾವತಿ ಮಾಡಿಲ್ಲ..ಬ್ರಿಟನ್ ನಲ್ಲಿ 1993ರ ಪ್ರಧಾನಿ ಜಾನ್ ಮೇಯರ್ ಅವರು ರಾಜಮನೆತನದ ಜೊತೆಗೆ ಒಂದು ಒಪ್ಪಂದ ಮಾಡಿಕೊಂಡಿದ್ದರು, ಅದರ ಪ್ರಕಾರ ರಾಜ ತಮ್ಮ ಉತ್ತರಾಧಿಕಾರಿಗಳಿಗೆ ವರ್ಗಾವಣೆ ಮಾಡಿರುವ ಆಸ್ತಿ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಲಾಗುವುದಿಲ್ಲ, ಈ ವಿನಾಯಿತಿಯನ್ನು ಬೇಧ ಭಾವ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.

Best News in Kannadabritainkannada liveKannada NewsKannada Trending Newsking charles 3live newslive news kannadalive trending newsNews in Kannadatop news kannada