Bank Jobs: ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾಲಿ ಇದೆ ಉದ್ಯೋಗ- ಲಕ್ಷ ಲಕ್ಷ ಸಂಬಳ ನೀಡುವ ಉದ್ಯೋಗಕ್ಕೆ ಅರ್ಜಿ ಆಹ್ವಾನ- ಇಂದೇ ಅರ್ಜಿ ಸಲ್ಲಿಸಿ.

Bank Jobs: ಬ್ಯಾಂಕ್ ನಲ್ಲಿ ಕೆಲಸ ಎಂದರೆ ಜೀವನ ಸೆಟ್ಲ್ ಆದ ಹಾಗೆ, ಒಂದು ವೇಳೆ ನೀವು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದಿಕೊಂಡಿದ್ದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಒಟ್ಟು 43 Information Technology Officers ಹುದ್ದೆಗಳು ಖಾಲಿ ಇದೆ. ನಿಮಗೆ ಅರ್ಹತೆ ಮತ್ತು ಆಸಕ್ತಿ ಇದ್ದರೆ ನೀವು ಕೂಡ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಕೆಲಸದ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಖಾಲಿ ಇರುವ ಹುದ್ದೆ information technology officers, ಒಟ್ಟು 43 ಹುದ್ದೆಗಳು ಖಾಲಿ ಇದೆ. ಹುದ್ದೆಗಳ ಬಗ್ಗೆ ಪೂರ್ತಿ ಮಾಹಿತಿ, ಎಕ್ಸಿಕ್ಯೂಟಿವ್ (ಅಸೋಸಿಯೇಟ್ ಕನ್ಸಲ್ಟೆಂಟ್ ಐಟಿ) ಒಟ್ಟು 30 ಹುದ್ದೆಗಳು, ಎಕ್ಸಿಕ್ಯೂಟಿವ್ (ಕನ್ಸಲ್ಟೆಂಟ್ ಐಟಿ) ಒಟ್ಟು 10 ಹುದ್ದೆಗಳು, ಎಕ್ಸಿಕ್ಯೂಟಿವ್ (ಸೀನಿಯರ್ ಕನ್ಸಲ್ಟೆಂಟ್ ಐಟಿ) ಒಟ್ಟು 3 ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ ಬಗ್ಗೆ ನೋಡುವುದಾದರೆ, ಮಾನ್ಯತೆ ಪಡೆದಿರುವ ಸಂಸ್ಥೆಯಿಂದ. ಕಂಪ್ಯೂಟರ್ ಸೈನ್ಸ್​ ಅಥವಾ ಇನ್ಫರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಅಥವಾ ಎಂಸಿಎ ಪೂರ್ತಿ ಮಾಡಿರಬೇಕು. ಇದನ್ನು ಓದಿ..Jobs: ನೀವು SSLC, ಅಥವಾ PUC ಪಾಸ್ ಆಗಿದ್ದೀರಾ?? ಹಾಗಿದ್ದರೆ ಈ ಕೂಡಲೇ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ- ಉದ್ಯೋಗ ಪಡೆಯಿರಿ.

ಈ ಕೆಲಸಗಳ ವಯೋಮಿತಿ.. ಎಕ್ಸಿಕ್ಯೂಟಿವ್ (ಅಸೋಸಿಯೇಟ್ ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ 24 ರಿಂದ 40 ವರ್ಷದ ಒಳಗಿರಬೇಕು. ಎಕ್ಸಿಕ್ಯೂಟಿವ್ (ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ 30 ರಿಂದ 40 ವರ್ಷದ ಒಳಗಿರಬೇಕು. ಎಕ್ಸಿಕ್ಯೂಟಿವ್ (ಸೀನಿಯರ್ ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ 35 ರಿಂದ 45 ವರ್ಷದ ಒಳಗಿರಬೇಕು. ಕೆಲಸದ ವಯೋಮಿತಿ ಹೀಗಿದೆ.. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ, PWD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PWD (OBC/NCL) ಅಭ್ಯರ್ಥಿಗಳಿಗೆ 13 ವರ್ಷ, PWD (SC/ST) ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ಇರುತ್ತದೆ.

ಕೆಲಸಕ್ಕೆ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ, ಆಸೆಸ್ಮೆಂಟ್, ಗ್ರೂಪ್ ಡಿಸ್ಕಶನ್, ಆನ್ಲೈನ್ ಟೆಸ್ಟ್ ಹಾಗೂ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಸಂಬಳ ಎಷ್ಟಿರುತ್ತದೆ ಎಂದರೆ, ಎಕ್ಸಿಕ್ಯೂಟಿವ್ (ಅಸೋಸಿಯೇಟ್ ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ ವಾರ್ಷಿಕ ಸಂಬಳ 10 ಲಕ್ಷ, ಎಕ್ಸಿಕ್ಯೂಟಿವ್ (ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ ವಾರ್ಷಿಕ ಸಂಬಳ 15 ಲಕ್ಷ ಇರುತ್ತದೆ, ಎಕ್ಸಿಕ್ಯೂಟಿವ್ (ಸೀನಿಯರ್ ಕನ್ಸಲ್ಟೆಂಟ್ ಐಟಿ) ಕೆಲಸಕ್ಕೆ ವಾರ್ಷಿಕ ಸಂಬಳ 25 ಲಕ್ಷ ಆಗಿರುತ್ತದೆ. ಕೆಲಸ ಸಿಗುವುದು ಚೆನ್ನೈ ಮತ್ತು ನವದೆಹಲಿಯಲ್ಲಿ. ಅರ್ಜಿ ಸಲ್ಲಿಸುವ ಸಮಯ ಆರಂಭ ಆಗಿರುವುದು 2023ರ ಜೂನ್ 13ರಿಂದ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಜುಲೈ 3. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

Best News in Kannadajob newskannada liveKannada NewsKannada Trending Newslive newslive news kannadalive trending newsNews in Kannadatop news kannada