Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?

Car: ಈಗ ನಮ್ಮ ದೇಶದಲ್ಲಿ ಅತಿಹೆಚ್ಚು ವಾಹನಗಳ ಬಳಕೆ ಹಾಗೂ ತಯಾರಿಕೆ ನಡೆಯುತ್ತಿದೆ. ನಮ್ಮ ದೇಶದ ಜನರು ಹೆಚ್ಚಾಗಿ Car ಮತ್ತು Bike ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳು ಚಾಲ್ತಿಯಲ್ಲಿದ್ದವು. ಈಗ ಹೊಸದಾಗಿ ಎಲೆಕ್ಟ್ರಿಕ್ ವಾಹನಗಳು ಬರುತ್ತಿದೆ. ಜನರು ಕೂಡ ಈಗ ಪೆಟ್ರೋಲ್ ವಾಹನಕ್ಕಿಂತ ಎಲೆಕ್ಟ್ರಿಕ್ ವಾಹನವನ್ನು ಇಷ್ಟಪಡುತ್ತಿದ್ದಾರೆ.

ಆದರೆ ಈಗ ಮತ್ತೊಂದು ಹೊಸ ರೀತಿಯ ವಾಹನವನ್ನು ನಮ್ಮ ದೇಶಕ್ಕೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಮಾಹಿತಿ ನೀಡಿದ್ದಾರೆ. ನಾಗ್ಪುರದಲ್ಲಿ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಎಥನಾಲ್ ಚಾಲಿತ ವಾಹನಗಳನ್ನು ಲಾಂಚ್ ಮಾಡುವುದಾಗಿ ಹೇಳಿದ್ದಾರೆ. 100% ಎಥನಾಲ್ ಇಂದ ಚಲಿಸುವ ವಾಹನಗಳನ್ನು ತಯಾರಿಸಲಾಗುತ್ತಿದೆ. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

ಶೀಘ್ರದಲ್ಲೇ ಆದಷ್ಟು ಬೇಗ ಎಥಾನಲ್ ಇಂದ ಚಲಿಸುವ Car ಗಳು ಭಾರತಕ್ಕೆ ಲಗ್ಗೆ ಇಡಲಿದೆ ಎಂದು ತಿಳಿಸಿ, ಟೊಯೊಟಾ ಕಂಪನಿ ಜೊತೆಗೆ ಈ ವಿಷಯವಾಗಿ ಒಪ್ಪಂದ ನಡೆದಿದೆ ಎಂದು ತಿಳಿಸಿದ್ದಾರೆ. ಟೊಯೊಟಾ (Toyota) ಸಂಸ್ಥೆಯು ಎಥನಾಲ್ ಚಾಲಿತ ವಾಹನವನ್ನು ತಯಾರಿಸಲಿದ್ದು, ಆಗಸ್ಟ್ ನಲ್ಲಿ ಅದು ಮಾರುಕಟ್ಟೆಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಈ ಎನರ್ಜಿಯನ್ನು ಬಳಸಿಕೊಂಡರೆ 40% ವಿದ್ಯುತ್ ಉತ್ಪಾದನೆ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.

ಕಾರ್ ಮಾತ್ರವಲ್ಲದೆ, ಬಜಾಜ್ (Bajaj), TVS ಹಾಗೂ ಹೀರೋ (Hero) ಕಂಪೆನಿಗಳು ಕೂಡ ಎಥನಾಲ್ ಚಾಲಿತ ವಾಹನಗಳನ್ನು ತಯಾರಿಸುವುದಕ್ಕೆ ಆಸಕ್ತಿ ತೋರಿಸಿದ್ದು, ಎಥನಾಲ್ ಚಾಲಿತ ದ್ವಿಚಕ್ರ ವಾಹನಗಳನ್ನು (Bike) ಸಹ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅವುಗಳು 100% ಎಥನಾಲ್ ಇಂದಲೇ ಚಲಿಸುತ್ತದೆ ಎಂದಿದ್ದಾರೆ ನಿತಿನ್ ಗಡ್ಕರಿ. ಹಾಗೆಯೇ, ಪೆಟ್ರೋಲ್ ಗೆ ಹೋಲಿಸಿದರೆ, ಒಂದು ಲೀಟರ್ ಎಥನಾಲ್ 15 ರೂಪಾಯಿ ಎಂದು ತಿಳಿಸಿದ್ದಾರೆ.. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

ಎಥನಾಲ್ (Ethanol) ಬೆಲೆ 60, ಪೆಟ್ರೋಲ್ ಬೆಲೆ ಒಂದು ಲೀಟರ್ ಗೆ 120. ಜೊತೆಗೆ ಅದರಲ್ಲಿ 40% ವಿದ್ಯುತ್ ಉತ್ಪಾದಿಸಬಹುದು. ಹಾಗಾಗಿ ಎಥನಾಲ್ ಬೆಲೆ ಒಂದು ಲೀಟರ್ ಗೆ 15 ರೂಪಾಯಿ ಬೀಳುತ್ತದೆ ಎಂದಿದ್ದಾರೆ. ಹಲವು ಪ್ರಯೋಜನಗಳು ಇರುವುದರಿಂದ ಎಥನಾಲ್ ಚಾಲಿತ Car ಪೆಟ್ರೋಲ್ Car ಗಿಂತ ಹೆಚ್ಚು ಉಪಯೋಗಶಾಲಿ ಆಗಿದ್ದು, ಈ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದನ್ನು ಓದಿ..Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

Best News in Kannadacarsethanol carskannada liveKannada NewsKannada Trending Newslive newslive news kannadalive trending newsNews in Kannadanitin gadkaritop news kannada