Milk Rate: ರೈತರಿಗೆ ಸಹಾಯ ಎಂದು ಹಾಲಿನ ದರ ಏರಿಸಿರುವ ಸರ್ಕಾರ- ರೈತರಿಗೆ ಕೊಡುವುದು ಎಷ್ಟು ಗೊತ್ತೇ?? ಕೊನೆಗೂ ಬಯಲಾಯ್ತು.

Milk Rate: ಕರ್ನಾಟಕ ರಾಜ್ಯ ಸರ್ಕಾರವು ಹಾಲಿನ ದರಲ್ಲೊ 3 ರೂಪಾಯಿ ಹೆಚ್ಚಳ ಮಾಡಿದೆ, ಈ ದರ ಮಂಗಳವಾರದಿಂದ ಜಾರಿಗೆ ಬಂದಿದೆ. ಇದಾಗುತ್ತಿದ್ದ ಹಾಗೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟವು (ಕೋಚಿಮುಲ್) ಈ ಹಣವನ್ನು ರೈತರಿಗೆ ಕೊಡಬೇಕು ಎಂದು 3 ರೂಪಾಯಿಯನ್ನು ಹೆಚ್ಚಿಸಲಾಗಿದೆ (Milk Rate). ಆದರೆ ಈಗ ಎಲ್ಲಾ ಹೈನುಗಾರರಿಗೆ 0.50 ಪೈಸೆ ಮಾತ್ರ ಲಾಭವಾಗುತ್ತಿದೆ. ಈ ದರದಲ್ಲಿ ಹೆಚ್ಚಳ ಆಗುತ್ತದೆ ಎಂದು ಗೊತ್ತಿದ್ದ ಕಾರಣ, ಜುಲೈ 5ರಂದು ಸಭೆ ನಡೆಸಿತ್ತು.

ಅದರಲ್ಲಿ ರೈತರಿಗೆ ಕೊಡುತ್ತಿದ್ದ ಹಾಲಿನ ದರದಲ್ಲಿ 2.50 ರೂಪಾಯಿ ಕಡಿಮೆ ಮಾಡಿತ್ತು. ಈ ಕಡಿತದಿಂದ ರೈತರಿಗೆ ಸಿಗುತ್ತಿದ್ದದ್ದು 31.40 ರೂಪಾಯಿ ಮಾತ್ರ. ಮೊದಲಿಗೆ 33.90 ರೂಪಾಯಿ ಸಿಗುತ್ತಿತ್ತು. 3 ರೂಪಾಯಿ ಜಾಸ್ತಿ ಮಾಡಿರುವುದರಿಂದ 34.40 ರೂಪಾಯಿ ಸಿಗುತ್ತಿದೆ. ಇದರ ಪ್ರಕಾರ ರೈತರಿಗೆ ಲಾಭ ಸಿಗುವುದು 0.50 ಪೈಸೆ ಮಾತ್ರ. ಕೋಚಿಮುಲ್ ಅಧ್ಯಕ್ಷರಾದ ಕೆ.ವೈ ನಂಜೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಿಎಂ ನೀಡಿರುವ ಸೂಚನೆಯ ಹಾಗೆ ಹಾಲಿನ ದರದಲ್ಲಿ 3 ರೂಪಾಯಿ ಜಾಸ್ತಿ ಮಾಡಲಾಗಿದೆ (Milk Rate). ಇದನ್ನು ಓದಿ..ಮಾರುಕಟ್ಟೆಯಲ್ಲಿ ಸಿಗುತ್ತಿದೆ ಕಲಬೆರೆಕೆ ಗೋಧಿ ಹಿಟ್ಟು- ನೀವು ಖರೀದಿ ಮಾಡುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ?

ಹಾಲು ಉತ್ಪಾದನೆ ಮಾಡುವವರಿಗೆ 34.40 ರೂಪಾಯಿ, ಸಂಘಗಳಿಗೆ 35.85 ರೂಪಾಯಿ ನಿಗದಿ ಮಾಡಲಾಗಿದೆ ಎಂದು ನಂಜೇಗೌಡ ಅವರು ತಿಳಿಸಿದ್ದಾರೆ. ಕೋಚಿಮುಲ್ ಒಕ್ಕೂಟದ ಎಂವಿಕೆ ಗೋಲ್ಡನ್ ಡೈರಿಯ ನಿರ್ಮಾಣ ಆಗಿರುವುದು 185ಕೋಟಿ ವೆಚ್ಚದಲ್ಲಿ. ಪ್ರಸ್ತುತ 49 ಕೋಟಿ ಖರ್ಚಿನಲ್ಲಿ ಸಿವಿಲ್ ಕಾಮಗಾರಿಗಳನ್ನು ನಡೆಸುವುದಕ್ಕೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಟೆಂಡರ್ ನಡೆಸಿ, ಕಾಮಗಾರಿ ಕೆಲಸ ಶುರುಮಾಡಲಾಗುತ್ತದೆ (Milk Rate).

ಹಲವು ಯೋಜನೆಗಳ ಒಕ್ಕೊಟದ ನಿಧಿಯಲ್ಲಿ 200 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕಿಂತ ಮೊದಲು ಸರ್ಕಾರವು ದರದಲ್ಲಿ 2 ರೂಪಾಯಿ ಜಾಸ್ತಿ ಮಾಡಿದಾಗ, ರೈತರಿಗೆ ಒಳ್ಳೆಯದಾಗಬೇಕು ಎಂದು ಒಕ್ಕೂಟಕ್ಕೆ ಬರುತ್ತಿದ್ದ ಲಾಭದಲ್ಲಿ 2 ರೂಪಾಯಿಗಳನ್ನು ಸೇರಿಸಿ, 4 ರೂಪಾಯಿಗಳನ್ನು ರೈತರಿಗೆ ಕೊಡಲಾಗಿತ್ತು. ಮಾರ್ಚ್ 16 ರಿಂದ ಜುಲೈ 24ರ ವರೆಗು ನೀಡಲಾಗಿದೆ (Milk Rate). ಇದನ್ನು ಓದಿ..Sowjanya case: ಮತ್ತೆ ಕ್ಯಾಮೆರಾ ಮುಂದೆ ಬಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರು, ಸೌಜನ್ಯ ಕೇಸ್ ಬಗ್ಗೆ ಸರಿಯಾಗಿ ಹೇಳಿದ್ದೇನು ಗೊತ್ತೇ?

ಇಲ್ಲಿಯವರೆಗೂ ಸುಮಾರು 24ಕೋಟಿ ರೂಪಾಯಿ ಹಣಪಾವತಿ ಮಾಡಲಾಗಿದೆ. ಈ ರೀತಿಯಾಗಿ ಹಣಕಾಸಿನ ವಿಷಯದಲ್ಲಿ ಮುನ್ನಡೆಯುತ್ತಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಸಭೆಯ ನಂತರ ರೈತರಿಗೆ ಹೆಚ್ಚೇನೂ ಲಾಭ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ (Milk Rate). ಇದನ್ನು ಓದಿ..Business Idea: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.

Best News in Kannadakannada liveKannada NewsKannada Trending Newslive newslive news kannadalive trending newsmilk ratemilk rate increasedNews in Kannadatop news kannada