Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

Business Idea: ಕೋವಿಡ್ ಸೋಂಕು ಬಂದ ನಂತರ ಜನರು ಯೋಚನೆ ಮಾಡುವ ಶೈಲಿ ಬದಲಾಗಿದೆ, ಕೆಲಸ ಮಾಡುವ ಬದಲಾಗಿ, ಸ್ವಂತವಾಗಿ ಬ್ಯುಸಿನೆಸ್ ಶುರು ಮಾಡಬೇಕು ಎಂದು ಹೆಚ್ಚು ಜನರು ಅಂದುಕೊಳ್ಳುತ್ತಿದ್ದಾರೆ. ಬಹಳ ಜನರು ಕಡಿಮೆ ಹೂಡಿಕೆ ಮಡಿ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಳ್ಳುತ್ತಾರೆ. ಅಂಥವರಿಗಾಗಿ ಇಂದು ಕೆಲವು ಬ್ಯುಸಿನೆಸ್ ಐಡಿಯಾಗಳನ್ನು ನಿಮಗೆ ತಿಳಿಸುತ್ತೇವೆ. ಇದರಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡಿ ತಿಂಗಳಿಗೆ 22 ರಿಂದ 50 ಸಾವಿರ ಗಳಿಸಬಹುದು. ಕಾರ್ ವಾಷಿಂಗ್ ಬ್ಯುಸಿನೆಸ್ ಬಗ್ಗೆ ನೀವು ಕೇಳಿರುತ್ತೀರಿ. ಇದು ರೋಡ್ ಸೈಡ್ ಬ್ಯುಸಿನೆಸ್ ಎಂದು ನಿಮಗೆ ಅನ್ನಿಸಬಹುದು. ಆದರೆ ಇದು ಬಹಳ ಲಾಭ ನೀಡುವ ಕೆಲಸ ಆಗಿದೆ.

ನಿಮ್ಮ ಹತ್ತಿರ ಹಣವಿದ್ದರೆ, ಅಲ್ಲಿಯೇ ನೀವು ಒಬ್ಬ ಮೆಕ್ಯಾನಿಕ್ ಅನ್ನು ನೇಮಿಸಿಕೊಂಡು, ಕಾರ್ ವಾಶಿಂಗ್ ಜೊತೆಗೆ ಕಾರ್ ರಿಪೇರಿ ಸಹ ಮಾಡಬಹುದು. ಈ ಬ್ಯುಸಿನೆಸ್ ಅನ್ನು ಹೇಗೆ ಶುರು ಮಾಡಬಹುದು ಎಂದರೆ, ಅದಕ್ಕಾಗಿ ಪ್ರೊಫೆಷನಲ್ ಆಗಿ ಮಷಿನ್ ಬೇಕಿದ್ದು, ಮಾರ್ಕೆಟ್ ನಲ್ಲಿ ಹಲವು ರೀತಿಯ ಮಷಿನ್ ಗಳು ಲಭ್ಯವಿದೆ. ಅದರ ಬೆಲೆ 12 ಸಾವಿರದಿಂದ ಶುರುವಾಗಿ 1 ಲಕ್ಷದವರೆಗೂ ಇರಬಹುದು. ಸಣ್ಣದಾಗಿ ಬ್ಯುಸಿನೆಸ್ ಶುರು ಮಾಡುವುದಾದರೆ, 14 ಸಾವಿರ ರೂಪಾಯಿಯ ಮಷಿನ್ ಖರೀದಿ ಮಾಡಬಹುದು. ಈ ಬೆಲೆಗೆ ನಿಮಗೆ ಏತದು ಪವರ್ ಸೇವರ್ ಯಂತ್ರ ಸಿಗಿತ್ತದೆ, ಹಾಗೆಯೇ ಇದಕ್ಕಾಗಿ 30 ಲೀಟರ್ ವ್ಯಾಕ್ಯೂಮ್ ಕ್ಲೀನರ್ ಬೇಕಾಗುತ್ತದೆ, ಇದಕ್ಕೆ 9 ರಿಂದ 10 ಸಾವಿರ ಆಗುತ್ತದೆ. ಅಷ್ಟೇ ಅಲ್ಲರೆ, ಶಂಪೂ, ಗ್ಲೌಸ್, ಟೈರ್ ಒಆಲಿಎಚ್, ಡ್ಯಾಶ್ ಬೋರ್ಡ್ ಪಾಲಿಶ್ ಹಾಗೂ ಇನ್ನಿತರ ವಸ್ತುಗಳಿಗೆ 2 ಸಾವಿರ ಆಗುತ್ತದೆ..

ಈ ಬ್ಯುಸಿನೆಸ್ ಅನ್ನು ಜನರು ಹೆಚ್ಚಾಗಿ ಓಡಾಡದ ಕಡೆಯಲ್ಲಿ ಶುರು ಮಾಡುವುದು ಒಳ್ಳೆಯದು, ಇದರಿಂದ ಬೇರೆಯವರಿಗೆ ಏನು ತೊಂದರೆಯಾಗುವುದಿಲ್ಲ. ಯಾವುದಾದರೂ ಕಾರ್ ಮೆಕ್ಯಾನಿಕ್ ಅಂಗಡಿ ಬಳಿ ಶುರು ಮಾಡಿದರೆ, ಇಬ್ಬರಿಗೂ ಲಾಭವಾಗುತ್ತದೆ. ಕಾರ್ ವಾಷಿಂಗ್ ಗೆ ಚಾರ್ಜ್ ಮಾಡುವ ಹಣ, ಊರಿಂದ, ಊರಿಗೆ ಬದಲಾಗುತ್ತದೆ. ಸಣ್ಣ ಊರುಗಳಲ್ಲಿ 150 ರಿಂದ 450 ರೂಪಾಯಿ ತೆಗೆದುಕೊಳ್ಳುತ್ತಾರೆ. ದೊಡ್ಡ ಊರುಗಳಲ್ಲಿ ಹೆಚ್ಚು ತೆಗೆದುಕೊಳ್ಳುತ್ತಾರೆ, ದೊಡ್ಡ ಕಾರುಗಳಿಗೆ ದೊಡ್ಡ ಬೆಲೆ ಇರುತ್ತದೆ.
ದಿನಕ್ಕೆ ನೀವು 8 ಕಾರ್ ಗಳನ್ನು ತೊಳೆದರೆ, ದಿನಕ್ಕೆ 2000 ರೂಪಾಯಿ, ಈ ಮೂಲಕ ತಿಂಗಳಿಗೆ 40 ರಿಂದ 50 ಸಾವಿರ ಸಂಪಾಡನೆ ಮಾಡಬಹುದು.