Tirupati: ತಿರುಪತಿ ಭಕ್ತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ. ಇನ್ನು ಮುಂದೆ ಅದೆಷ್ಟು ಕಡಿಮೆ ಹಣದಲ್ಲಿ ತಿಮ್ಮಪ್ಪನ ದರ್ಶನ ಮಾಡಬಹುದು ಗೊತ್ತೇ??

Tirupati: ತಿರುಪತಿ (Tirupati) ತಿಮ್ಮಪ್ಪನ ದರ್ಶನ ಪಡೆಯಬೇಕು ಎಂದು ಭಕ್ತಾದಿಗಳು ಕಾದು ಕುಳಿತಿರುತ್ತಾರೆ. ಶ್ರೀವೆಂಕಟರಮಣ ಸ್ವಾಮಿಯ ದರ್ಶನ ಪಡೆಯಲು ಇಡೀ ವರ್ಷ ಭಕ್ತರು ಬರುತ್ತಲೇ ಇರುತ್ತಾರೆ. ಇಡೀ ವರ್ಷದ ಪ್ರತಿದಿನವೂ ಸಹ ಸ್ವಾಮಿಯ ದರ್ಶನ ಪಡೆಯಲು ಜನಜಂಗುಳಿ ಬಂದೇ ಬರುತ್ತದೆ. ದರ್ಶನ ಪಡೆಯಲು ಕೆಲವೊಮ್ಮೆ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇರುತ್ತದೆ. ಹೀಗೆ, ಹೆಚ್ಚು ಸಮಯ ದರ್ಶನಕ್ಕಾಗಿ ಇಡಲು ಸಾಧ್ಯವಿಲ್ಲ ಎಂದು ಅನ್ನಿಸುವಂಥ ಭಕ್ತರಿಗಾಗಿ IRCTC ಒಂದು ಹೊಸ ಪ್ಯಾಕೇಜ್ ನೀಡಿದೆ..

ತಿರುಪತಿ ದೇವಸ್ಥಾನವನ್ನು ಭಕ್ತರು ವೈಕುಂಠ ಎಂದು ಸಹ ಕರೆಯುತ್ತಾರೆ. ಎಲ್ಲಾ ಭಕ್ತರ ಕಷ್ಟಗಳನ್ನು ಪರಿಹಾರ ಮಾಡಲು ತಿಮ್ಮಪ್ಪ ನೆಲೆಸಿದ್ದಾನೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿಗೆ ಹೋಗಿ ಬೇಗ ದೇವರ ದರ್ಶನ ಪಡೆಯಬೇಕು ಎಂದುಕೊಂಡಿರುವವರಿಗೆ IRCTC ಹೊಸ ಪ್ಯಾಕೇಜ್ ನೀಡಿದ್ದು, ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಈ ಪ್ಯಾಕೇಜ್ ಇಂದ ಹೋಗುವವರಿಗೆ ಶ್ರೀ ವೆಂಕಟರಮಣ ಸ್ವಾಮಿಯ ದರ್ಶನ ಮಾತ್ರವಲ್ಲದೆ, ಅವರ ಪತ್ನಿ ಪದ್ಮಾವತಿ ದೇವಿಯ ದರ್ಶನವನ್ನು ಸಹ ಪಡೆಯಬಹುದು. ಇದನ್ನು ಓದಿ..IRCTC Package: ಕಡಿಮೆ ಹಣಕ್ಕೆ 12 ದಿನಗಳ ಟ್ರಿಪ್ ಘೋಷಣೆ ಮಾಡಿದ IRCTC ( ರೈಲ್ವೆ) ಇನ್ನು ವಿಶೇಷ ತೀರ್ಥಯಾತ್ರೆಯಲ್ಲಿ ಎಲ್ಲೆಲ್ಲಿ ಟ್ರಿಪ್ ಹೋಗಬಹುದು ಗೊತ್ತಾ??

ತಿರುಪತಿ ದರ್ಶನವನ್ನು ಭಕ್ತರಿಗೆ, Divine Balaji Darshan SHG07 ದರ್ಶನ ಭಾಗವನ್ನು ಏಪ್ರಿಲ್ 15ರಿಂದ ಶುರುವಾಗುತ್ತಿದೆ..ಈ ದರ್ಶನ ಭಾಗ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು IRCTC ವೆಬ್ಸೈಟ್ ಗೆ ಭೇಟಿ ನೀಡಬಹುದು.. ಬೆಳಗ್ಗೆ 8ಗಂಟೆಗೆ ಎಲ್ಲಾ ಭಕ್ತರನ್ನು ತಿರುಪತಿ ರೈಲ್ವೆ ಸ್ಟೇಶನ್ ಇಂದ ತಿರುಮಲ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತಾರೆ. ಮಧ್ಯಾಹ್ನ 1ಗಂಟೆಗೆ ವಿಶೇಷ ದರ್ಶನ ಸಿಗುತ್ತದೆ. ಅಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದರ ಮೇಲೆ ದರ್ಶನದ ಸಮಯ ನಿಗದಿಯಾಗುತ್ತದೆ..ದರ್ಶನ ಮುಗಿದ ನಂತರ ದೇವರ ಪ್ರಸಾದವನ್ನು ಭಕ್ತರು ಸೇವಿಸಬಹುದು.

ನಂತರ ಪದ್ಮಾವತಿ ದೇವಿಯ ದರ್ಶನಕ್ಕೆ ತಿರುಚಾನೂರಿಗೆ ಕರೆದುಕೊಂಡು ಹೋಗುತ್ತಾರೆ. ಸಂಜೆ ವೇಳೆಗೆ ಮತ್ತೆ ತಿರುಪತಿ ರೈಲ್ವೆ ಸ್ಟೇಶನ್ ಗೆ ಕರೆದುಕೊಂಡು ಬರುತ್ತಾರೆ. ಈ ಪ್ಯಾಕೇಜ್ ಗಾಗಿ ನೀವು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು, ಇದಕ್ಕಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. 1ದಿನದ ಈ ಪ್ಯಾಕೇಜ್ ಗೆ ಈಗಾಗಲೇ ಬೆಲೆ ನಿಗದಿ ಪಡಿಸಲಾಗಿದ್ದು, ಆದರೆ ಸರ್ಕಾರ ಕೆಲವೊಮ್ಮೆ ಬೆಲೆಯಲ್ಲಿ ಬದಲಾವಣೆ ಮಾಡಬಹುದು ಹಾಗಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಪಡೆಯಿರಿ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Best News in Kannadairctckannada liveKannada NewsKannada Trending Newslive newslive news kannadalive trending newsNews in Kannadatirupati packagetop news kannada