Election 2023: ಸುದೀಪ್ ಆಯಿತು, ಈಗ ಮತ್ತೊಬ್ಬರು ಖ್ಯಾತ ನಟ ಬಿಜೆಪಿ ಪರ ಪ್ರಚಾರ ಮಾಡ್ತಾರಾ?? ಇದೊಂದು ಆದರೆ, ಬಿಜೆಪಿ ನ ಹಿಡಿಯೋಕೆ ಆಗಲ್ವ??

Election 2023: ಮುಂದಿನ ತಿಂಗಳು ನಮ್ಮ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Vidhanasabha Elections) ನಡೆಯಲಿದ್ದು, ಈಗಾಗಲೇ ದಿನಾಂಕ ನಿಗದಿಯಾಗುವುದು ಮಾತ್ರವಲ್ಲದೆ, ಹಲವು ಪಕ್ಷಗಳು ಅಭ್ಯರ್ಥಿಗಳ ಲಿಸ್ಟ್ ಅನ್ನು ಸಹ ಬಿಡುಗಡೆ ಮಾಡಿದ್ದು ಪ್ರಚಾರ ಕಾರ್ಯಗಳು ಕೂಡ ಜೋರಾಗಿಯೇ ಸಾಗುತ್ತಿದೆ. ಎಲೆಕ್ಷನ್ ಬಂತು ಎಂದರೆ, ಸಿನಿಮಾ ಕಲಾವಿದರನ್ನು ಕ್ಯಾಂಪೇನ್ ಗಾಗಿ ಕರೆಯುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಿಷಯ. ಈಗ ಕೂಡ ಅದು ಮುಂದುವರೆದಿದೆ.

ಇತ್ತೀಚೆಗೆ ನಟ ಕಿಚ್ಚ ಸುದೀಪ್ (Kiccha Sudeep) ಅವರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎನ್ನುವ ವಿಷಯ ಗೊತ್ತಾಗಿದೆ. ಸುದೀಪ್ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ ಎಂದು ಮೊದಲಿಗೆ ಸುದ್ದಿಯಾಗಿತ್ತು, ಆದರೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಸುದೀಪ್ ಅವರು, ತಾವು ಬಂದಿರುವುದು ತಮಗೆ ಬಹಳ ಆಪ್ತರಾಗಿ ಕಷ್ಟಕಾಲದಲ್ಲಿ ಜೊತೆಗಿದ್ದ ಬೊಮ್ಮಾಯಿ ಮಾಮ ಅವರಿಗೋಸ್ಕರ, ವ್ಯಕ್ತಿಯ ಪರವಾಗಿ ಬಂದಿದ್ದೇನೆ, ಪಕ್ಷದ ಪರವಾಗಿ ಅಲ್ಲ ಎಂದು ಕ್ಲಿಯರ್ ಆಗಿ ಹೇಳಿದರು.. ಇದನ್ನು ಓದಿ..IRCTC Package: ಕಡಿಮೆ ಹಣಕ್ಕೆ 12 ದಿನಗಳ ಟ್ರಿಪ್ ಘೋಷಣೆ ಮಾಡಿದ IRCTC ( ರೈಲ್ವೆ) ಇನ್ನು ವಿಶೇಷ ತೀರ್ಥಯಾತ್ರೆಯಲ್ಲಿ ಎಲ್ಲೆಲ್ಲಿ ಟ್ರಿಪ್ ಹೋಗಬಹುದು ಗೊತ್ತಾ??

ಇವರ ನಂತರ ಈಗ ಕನ್ನಡದ ಮತ್ತೊಬ್ಬ ಸ್ಟಾರ್ ನಟ ರಿಷಬ್ ಶೆಟ್ಟಿ (Rishab Shetty) ಅವರು ಬಿಜೆಪಿ (BJP) ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಸುದ್ದಿಗಳು ಕೇಳಿಬರುತ್ತಿದೆ. ಅದಕ್ಕೆ ಕಾರಣ ಏನೆಂದರೆ, ರಿಷಬ್ ಶೆಟ್ಟಿ ಅವರು ಹಾಗೂ ಬಸವರಾಜ್ ಬೊಮ್ಮಾಯಿ ಅವರು ಜೊತೆಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಬೊಮ್ಮಾಯಿ ಅವರ ಕಾಲಿಗೆ ಬಿದ್ದು ರಿಷಬ್ ಅವರು ಆಶೀರ್ವಾದ ಪಡೆದಿದ್ದಾರೆ.. ಇದನ್ನೆಲ್ಲಾ ನೋಡಿ, ರಿಷಬ್ ಅವರು ಕರಾವಳಿ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಬಹುದು ಎನ್ನಲಾಗಿತ್ತು. ಪ್ರಚಾರ ಮಾಡಲು ರಿಷಬ್ ಅವರಿಗೆ ಆಹ್ವಾನ ಕೊಟ್ಟಿದ್ದೀರಾ ಎಂದು ಖುದ್ಧು ಸಿಎಂ ಅವರಿಗೆ ಕೇಳಲಾಯಿತು.

ಅದಕ್ಕೆ ಉತ್ತರ ಕೊಟ್ಟಿರುವ ಅವರು, “ಇಲ್ಲ, ನಾನು ಇಲ್ಲಿ ಬರೋವರೆಗು ರಿಷಬ್ ಅವರು ಕುಂದಾಪುರದಲ್ಲೇ ಇದ್ದಾರೆ ಎಂದು ನನಗೆ ಗೊತ್ತಿರಲಿಲ್ಲ.. ಅವರಿಗೆ ನಾನು ಬರುವ ವಿಷಯ ಗೊತ್ತಾಗಿ ಭೇಟಿ ಮಾಡೋದಕ್ಕೆ ಬಂದಿದ್ದಾರೆ. ಇದು ಅನಿರೀಕ್ಷಿತ ಅಷ್ಟೇ. ನಮ್ಮ ಸಿದ್ಧಾಂತಕ್ಕೆ ಅವರು ತುಂಬಾ ಹತ್ತಿರವಾಗಿದ್ದಾರೆ. ಅದನ್ನ ಅವರು ಬಹಿರಂಗವಾಗಿಯೇ ಪ್ರತಿಪಾದನೆ ಮಾಡಿದ್ದಾರೆ. ಅವರು ತುಂಬಾ ಒಳ್ಳೆಯ ನಟ.. ಬಹಳ ಹಳೆಯ ಪರಿಚಯ. “ಎಂದು ಹೇಳುವ ಮೂಲಕ, ರಿಷಬ್ ಶೆಟ್ಟಿ ಅವರನ್ನು ಪ್ರಚಾರಕ್ಕೆ ಕರೆದಿಲ್ಲ ಎಂದು ಕನ್ಫರ್ಮ್ ಮಾಡಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

basavaraj bommaibest election newsbest news electionBest News in Kannadabjpbjp updatesbjp vs congresscongresscongress updateselection 2023election live newselection live updateselection newselection predictionjdsjds updatesjds vs bjpkannada livekannada live electionKannada NewsKannada Trending NewsKarnataka electionKarnataka Election 2023live newslive news kannadalive trending newsNews in Kannadarishab shettysudeeptop news kannada