Kodimutt Swamiji: ಖಚಿತ ಭವಿಷ್ಯ ನುಡಿಯುವ ಕೋಡಿಮಠ, ಸ್ವಾಮಿಗಳು- ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ?

Kodimutt Swamiji: ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಗೆದ್ದು, ಮೇಲುಗೈ ಸಾಧಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿ, ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರಿಗೆ ನೀಡಿದ ಭರವಸೆಯನ್ನು ನಿಜಗೊಳಿಸಲು, ಕಾಂಗ್ರೆಸ್ ಪಕ್ಷ ಸಭೆ ನಡೆಸಿದೆ.

ಇದರ ನಡುವೆ ಈಗ ಕೋಡಿಮಠದ ಶ್ರೀಗಳು ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. “ಕಾಂಗ್ರೆಸ್ ಪಕ್ಷ ಜನರ ಬೇಡಿಕೆಗಳಿಗೆ ತಕ್ಕ ಹಾಗೆ ಕೆಲಸ ಮಾಡುತ್ತದೆ, ಈ ಮೂಲಕ 5 ವರ್ಷಗಳ ಆಡಳಿತವನ್ನು ಪೂರ್ತಿ ಮಾಡುತ್ತದೆ..”ಎಂದು ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಪೀಠಾಧಿಪತಿ ಡಾ. ಸದಾಶಿವ, ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದ್ದಾರೆ. ಕೋಡಿಮಠದ ಶ್ರೀಗಳು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ..Jobs: ನೀವು SSLC ಮಾಡಿದ್ದೀರಾ ಆಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ, ಸೇನೆಗೆ ಸೇರಿಕೊಳ್ಳಿ- ದೇಶಸೇವೆ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ಆಗ ಮಾತನಾಡಿ, ಈಗ ಉಪಮುಖ್ಯಮಂತ್ರಿಯಾಗಿ ಕಾರ್ಯ ಮಾಡುತ್ತಿರುವ ಡಿಕೆ ಶಿವಕುಮಾರ್ ಅವರಿಗು ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ತಿಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವುದಕ್ಕೆ, ಡಿಕೆ ಶಿವಕುಮಾರ್ ಅವರ ಕೊಡುಗೆ ಸಾಕಷ್ಟಿದೆ, ಮಂತ್ರಿಮಂಡಲ ವಿಸ್ತರಣೆ, ಗುಂಪುಗಾರಿಕೆ ಇದಕ್ಕೆಲ್ಲ ಅವಕಾಶ ಕೊಡದೆ, ಪ್ರಾದೇಶಿಕವಾಗಿ ಹಾಗೂ ಜಿಲ್ಲವಾರು ಸೂಕ್ತ ಪ್ರಾತಿನಿಧ್ಯ ನೀಡಿ, ಸಂಪುಟ ವಿಸ್ತರಣೆ ಮಾಡಲು ಕೋಡಿಮಠದ ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಶ್ರೀಗಳು, ಪ್ರಚಾರಕ್ಕಾಗಿ ಸಿದ್ದರಾಮಯ್ಯ ಅವರು ಅರಸೀಕೆರೆಗೆ ಬಂದಾಗ, ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಭವಿಷ್ಯ ಹೇಳಿದ್ದೆ, ಅದು ಈಗ ನಿಜವಾಗಿದೆ. ಕಾಂಗ್ರೆಸ್ ಪಕ್ಷವು ದೊಡ್ಡ ರೀತಿಯಲ್ಲಿ, ಯಾರ ಹಂಗು ಇಲ್ಲದೆ, ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತದೆ. ರಾಜ್ಯ ಸರ್ಕಾರಕ್ಕೆ ಈಗ ಯಾವ ಕಂಟಕವು ಇಲ್ಲ, ಲೋಕಸಭಾ ಚುನಾವಣೆ ನಡೆದ ಬಳಿಕ ಚಿಕ್ಕದಾಗಿ ಕಂಟಕ ಇರುತ್ತದೆ. ಮುಂದಿನ ದಿನಗಳಲ್ಲಿ ಅವುಗಳ ಬಗ್ಗೆ ತಿಳಿಸುತ್ತೇವೆ.. ಎಂದು ಹೇಳಿದ್ದಾರೆ. ಇದನ್ನು ಓದಿ..Narendra Modi: ಬಿಗ್ ನ್ಯೂಸ್: ನರೇಂದ್ರ ಮೋದಿ ರವರ ಹೆಸರಿನಲ್ಲಿ ಬರುತ್ತಿದೆ ಮಾವು- ಈ ಮಾವಿನ ವಿಶೇಷತೆ ಏನು ಗೊತ್ತೇ??

best election newsbest news electionBest News in Kannadabjpbjp updatesbjp vs congresscongresscongress updateselection 2023election live newselection live updateselection newselection predictionjdsjds updatesjds vs bjpkannada livekannada live electionKannada NewsKannada Trending NewsKarnataka electionKarnataka Election 2023live newslive news kannadalive trending newsNews in Kannadatop news kannada