Siddaramaiah: ಮತ್ತೊಂದು ಯು ಟರ್ನ್ ಹೊಡೆದ ಸಿದ್ದರಾಮಯ್ಯ- ಪ್ರವೀಣ್ ನೆಟ್ಟರ್ ಪತ್ನಿ ಕೇಸ್ ನಲ್ಲಿ ಟ್ವಿಸ್ಟ್ ಕೊಟ್ಟ ಸಿದ್ದು- ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್.

Siddaramaiah: ಕರ್ನಾಟಕದಲ್ಲಿ ಈಗ ಸರ್ಕಾರ ಬದಲಾಗಿದೆ, ಲೋಕಸಭಾ ಎಲೆಕ್ಷನ್ ನಂತರ ಕಾಂಗ್ರೆಸ್ ಪಕ್ಷ ಗೆದ್ದು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಸಿಎಂ ಆದ ನಂತರ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ಬಿಜೆಪಿ ಯುವ ಮುಖಂಡ ಪ್ರವೀಣ್ ನಟ್ಟರ್ ಅವರ ಹತ್ಯೆ ಆದ ನಂತರ ಅವರ ಪತ್ನಿ ನೂತನ ಕುಮಾರಿ ಅವರಿಗೆ ಸರ್ಕಾರಿ ಗ್ರೂಪ್ ಸಿ ಹುದ್ದೆ ನೀಡಲಾಗಿತ್ತು.

ಬೊಮ್ಮಾಯಿ ಅವರ ಸರ್ಕಾರ 2022ರ ಸೆಪ್ಟೆಂಬರ್ 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೂತನ ಕುಮಾರಿ ಅವರನ್ನು ತೆಗೆದುಕೊಳ್ಳಲಾಗಿತ್ತು, ನೂತನ ಕುಮಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹೊಸ ಸರ್ಕಾರ ಆಡಳಿತಕ್ಕೆ ಬಂದ ನಂತರ ಹಿಂದಿನ ಸರ್ಕಾರ ನೇಮಿಸಿಕೊಂಡಿದ್ದ ಕೆಲಸಗಾರರನ್ನು ವಜಾ ಮಾಡಲಾಗಿದ್ದು, ಅವರೆಲ್ಲರೂ ಕೆಲಸ ಕಳೆದುಕೊಂಡಿದ್ದಾರೆ. ಇದನ್ನು ಓದಿ..Siddaramaiah: ಕರ್ನಾಟಕದಲ್ಲಿ ಹುಲಿಯಂತೆ ಇದ್ದ ಸಿದ್ದು ರವರಿಗೆ ದೆಹಲಿಗೆ ಹೋದ ತಕ್ಷಣ ಅವಮಾನ ಆಯ್ತಾ? ಸೋನಿಯಾ ಮನೆಯಲ್ಲಿ ಇದೆಂತಹ ಎಡವಟ್ಟು, ಯಾವ ಪರಿಸ್ಥಿತಿ ಗೊತ್ತೇ?

ಆದರೆ ನೂತನ ಕುಮಾರಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು. “ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ.

ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು..” ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ನಿರ್ಧಾರವನ್ನು ಬೆಂಬಲಿಸಿ ಕೆಲವರು ಒಳ್ಳೆಯದನ್ನೇ ಮಾಡುತ್ತಿದ್ದೀರಿ ಎನ್ನುತ್ತಿದ್ದಾರೆ. ಆದರೆ ಇನ್ನೂ ಕೆಲವರು ಸಿದ್ದರಾಮಯ್ಯ ಅವರು ಯೂ ಟರ್ನ್ ಹೊಡೆಯುತ್ತಿದ್ದಾರೆ, ಇದೆಲ್ಲ ಬೇಡ. ಬೇರೆಯವರಿಗೆ ಇಲ್ಲದೆ ಇರುವುದು ಇವರಿಗೆ ಯಾಕೆ, ಇವರ ವಿಚಾರದ ಹಾಗೆ ಇನ್ನು ಸಂತಸ್ತರು ಇದ್ದಾರೆ, ಅವರಿಗೂ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಓದಿ..Dk Shivakumar: ಜನರ ಪರವಾಗಿ ಧ್ವನಿ ಎತ್ತಿದ ಪ್ರತಾಪ್ ಸಿಂಹ ಗೆ ವ್ಯಂಗ್ಯವಾಡಿದ ಡಿಕೆಶಿ. ಹೇಳಿದ್ದೇನು ಗೊತ್ತೇ? DCM ಇವೆಲ್ಲ ಬೇಕಿತ್ತಾ ಎಂದ ನೆಟ್ಟಿಗರು.

Best News in Kannadakannada liveKannada NewsKannada Trending Newslive newslive news kannadalive trending newsNews in Kannadatop news kannada