Gas cylinder: ಜೂನ್ ನ ಆರಂಭದಲ್ಲಿಯೇ ಶುಭಾರಂಭ- ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ. ಎಷ್ಟಾಗಿದೆ ಗೊತ್ತೇ?? ಕುಣಿದು ಎರಡು ಸ್ಟೆಪ್ ಹಾಕಿ.

Gas Cylinder: ಒಂದೆರಡು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ ತೀವ್ರವಾಗಿ ಹೆಚ್ಚಾಗಿತ್ತು. ಆದರೆ ಈಗ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಒಂದು ಸಮಾಧಾನ ಸಿಕ್ಕಿದೆ. ಈ ವರ್ಷ ಜೂನ್ 1ರಿಂದಲೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಸರ್ಕಾರದ ತೈಲ ಕಂಪನಿಗಳು ಇದೀಗ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈಗ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ಸುಮಾರು 83 ರೂಪಾಯಿ ಕಡಿಮೆ ಆಗಿದೆ. 19 ಕೆಜಿ ವಾಣಿಜ್ಯ ಎಲ್.ಪಿ.ಜಿ ವಾಣಿಜ್ಯ ಸಿಲಿಂಡರ್ ನ ಬೆಲೆ ಈಗ ₹1,773 ರೂಪಾಯಿಗೆ ಇಳಿಕೆ ಆಗಿದೆ. ಈ ಮೊದಲು ಈ ಸಿಲಿಂಡರ್ ನ ಬೆಲೆ ₹1,856.50 ರೂಪಾಯಿ ಆಗಿತ್ತು. ಈ ವಾಣಿಜ್ಯ ಸಿಲಿಂಡರ್ ನ ಬೆಲೆಯಲ್ಲಿ ಮಾತ್ರ ಇಳಿಕೆ ಆಗಿದ್ದು, ಮನೆಯಲ್ಲಿ ಬಳಸುವ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ

ವಾಣಿಜ್ಯ ಸಿಲಿಂಡರ್ ನ ಬೆಲೆ ಮಾತ್ರವಲ್ಲದೆ, ಜೆಟ್ ಇಂಧನದ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ, ಇದರ ಬೆಲೆಯಲ್ಲಿ ಸುಮಾರು ₹6,600 ರೂಪಾಯಿ ಇಳಿಕೆ ಆಗಿದೆ. ಜೂನ್ 1 ರಿಂದಲೇ ಈ ಹೊಸ ಬೆಲೆ ಜಾರಿಗೆ ಬರುತ್ತಿದೆ. ಸಾಮಾನ್ಯ ಜನರಿಗೆ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಗಳನ್ನು ಕೊಂಡುಕೊಳ್ಳುವುದು ಒಂದು ರೀತಿ ಕಷ್ಟವಾಗಿತ್ತು. ಆದರೆ ಈಗ ಬೆಲೆ ಇಳಿಕೆ ಇಂದ ಜನರಿಗೆ ಸಮಾಧಾನ ಆಗಿದೆ.

ನಮ್ಮ ದೇಶದ ಎಲ್ಲಾ ಊರುಗಳಲ್ಲಿ ಜೂನ್ 1ರಿಂದಲೇ ಬೆಲೆ ಇಳಿಕೆ ಜಾರಿಯಾಗಿದೆ. ಇನ್ನುಮುಂದೆ ಸಾಮಾನ್ಯ ಜನರು ಹೆಚ್ಚಿನ ಕಷ್ಟವಿಲ್ಲದೆ, ಎಲ್.ಪಿ.ಜಿ ಸಿಲಿಂಡರ್ ಗಳನ್ನು ಕೊಂಡುಕೊಳ್ಳಬಹುದು. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.