Kannada News: ನಿಜಕ್ಕೂ ಪ್ರಥಮ್ ನಟನೆ ಮಾಡಿರುವ ನಟ ಭಯಂಕರ ಸಿನಿಮಾ ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಗೊತ್ತೇ?? ಕ್ರಾಂತಿ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡ್ತಾ??

Kannada News: ಬಿಗ್ ಬಾಸ್ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡವರು ಒಳ್ಳೆ ಹುಡುಗ ಪ್ರಥಮ್. ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಬಂದು, ಪ್ರತಿ ವಾರ ನಾಮಿನೇಟ್ ಆಗಿ, ತಮ್ಮದೇ ರೀತಿಯ ಜನಪ್ರಿಯತೆ ಗಳಿಸಿ ವಿನ್ನರ್ ಆದರು ಪ್ರಥಮ್. ಬಿಗ್ ಬಾಸ್ ನಂತರ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ಎಂ.ಎಲ್.ಎ ಮತ್ತು ದೇವ್ರಂಥ ಮನುಷ್ಯ ಹೆಸರಿನ ಎರಡು ಸಿನಿಮಾಗಳಲ್ಲಿ ನಟಿಸಿದರು. ಆದರೆ ಈ ಎರಡು ಸಿನಿಮಾಗಳು ಕೂಡ ಅವರಿಗೆ ಹೇಳಿಕೊಳ್ಳುವಂಥ ಹೆಸರನ್ನಾಗಲಿ, ಗೆಲುವನ್ನಾಗಲಿ ತಂದು ಕೊಡಲಿಲ್ಲ. ಬಳಿಕ ಗ್ಯಾಪ್ ತೆಗೆದುಕೊಂಡ ಪ್ರಥಮ್ ಅವರು ಈಗ ಮೂರನೇ ಸಿನಿಮಾ ಮೂಲಕ ಬಂದಿದ್ದಾರೆ.

ಈ ಸಾರಿ ಸಿನಿಮಾದಲ್ಲಿ ನಟನೆ ಮಾಡುವುದು ಮಾತ್ರವಲ್ಲ, ನಿರ್ದೇಶನ ಕೂಡ ಮಾಡಿದ್ದಾರೆ. ಪ್ರಥಮ್ ಅವರ. ಈ ನಟ ಭಯಂಕರ ಸಿನಿಮಾ ಒಂದು ಕಾಮಿಡಿ ಹಾರರ್ ಸಿನಿಮಾ ಆಗಿದ್ದು, ಫೆಬ್ರವರಿ 3ರಂದು ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ನೋಡಿದ ಕೆಲವರು ಒಳ್ಳೆಯ ಕಾಮಿಡಿ ಹಾರರ್ ಸಿನಿಮಾ ಎಂದು ಹೇಳಿದರೆ, ಇನ್ನು ಕೆಲವರು ಸಿನಿಮಾ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಹೀಗಿರುವಾಗ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ನಟ ಭಯಂಕರ ಸಿನಿಮಾ ಗಳಿಸಿದ್ದೆಷ್ಟು ಎನ್ನುವ ಕುತೂಹಲಕಾರಿ ಪ್ರಶ್ನೆಯೊಂದು ಶುರುವಾಗಿದೆ. ಏಕೆಂದರೆ, ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವು ಫೇಕ್ ಪೋಸ್ಟರ್ ಗಳು ವೈರಲ್ ಆಗಿದೆ. ಇದನ್ನು ಓದಿ..

ಸಧ್ಯಕ್ಕೆ ಸಿಕ್ಕಿರುವ ಬಾಕ್ಸ್ ಆಫೀಸ್ ನ ಮಾಹಿತಿ ಪ್ರಕಾರ, ನಟ ಭಯಂಕರ ಸಿನಿಮಾ ಮೊದಲ ದಿನ 15 ಲಕ್ಷ, ಎರಡನೆಯ ದಿನ 30 ಲಕ್ಷ ಮತ್ತು ಮೂರನೆಯ ದಿನ 45 ಲಕ್ಷ ಕಲೆಕ್ಷನ್ ಮಾಡಿದ್ದು, ಒಟ್ಟಾರೆಯಾಗಿ, 90 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಪ್ರಥಮ್ ಅವರು ತಮ್ಮ ಅಭಿಮಾನಿಗಳ ಎದುರು ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ, ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ, ದಯವಿಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇಂಪ್ರೂವ್ ಆಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಖ್ಯಾತ ನಂಬರ್ 1 ನಿರೂಪಕಿ ಅನುಪಮಾ ರವರ ಮನೆಯಲ್ಲಿ ಅದೆಷ್ಟು ನಾಯಿ ಮರಿಗಳಿವೆ ಗೊತ್ತೇ?? ಯಪ್ಪಾ ಇಷ್ಟೊಂದಾ??