Kannada News: ರೈತರನ್ನು ಮದುವೆಯಾಗಲ್ಲ ಎನ್ನುವ ಹುಡುಗಿಯರು, ಯಾರನ್ನು ಮದುವೆಯಾಗಲು ಇಷ್ಟ ಪಡುತ್ತಾರೆ ಗೊತ್ತೇ? ಈ ಕೆಲಸ ಎಂದರೆ ಹುಡುಗಿಯರು ಎದ್ದು ಬಿದ್ದು ಮದುವೆಯಾಗ್ತಾರೆ

Kannada News: ಮದುವೆ (Marriage) ಎನ್ನುವುದು ಬಹಳ ವಿಶೇಷವಾದ ಅನುಬಂಧ, ಇದು ಇಬ್ಬರು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿರುವುದಿಲ್ಲ, ಎರಡು ಕುಟುಂಬಕ್ಕೆ ಒಂದು ಮಾಡುತ್ತದೆ. ಒಂದು ಮದುವೆ ಎಂದರೆ ಇಡೀ ಕುಟುಂಬಗಳೇ ಸಂತೋಷ, ಸಂಭ್ರಮದಲ್ಲಿದ್ದು ಮದುವೆಯ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. ಮದುವೆ ಆಗುವ ವ್ಯಕ್ತಿಯ ವಿಚಾರಕ್ಕೆ ಬಂದರೆ, ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಆಸೆ ಇರುತ್ತದೆ.

ತಮ್ಮ ಮದುವೆ ಹೀಗೆ ನಡೆಯಬೇಕು, ತಮ್ಮ ಸಂಗಾತಿ (Life Partner) ಹೀಗೆ ಇರಬೇಕು ಎಂದು ಬಹಳ ಆಸೆಗಳಿಂದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಂತೆಯೇ ನಡೆದರೆ ಅವರ ದಾಂಪತ್ಯ ಜೀವನ ಬಹಳ ಚೆನ್ನಾಗಿ ಸಾಗುತ್ತದೆ. ಹುಡುಗ ಹುಡುಗಿ ಇಬ್ಬರು ಕೂಡ ಮದುವೆಯ ವಿಚಾರದಲ್ಲಿ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವುಗಳನ್ನು ಮ್ಯಾಚ್ ಮಾಡುವಂಥ ಸಂಗಾತಿಗಾಗಿ ಹುಡುಕಾಟ ಮಾಡುತ್ತಾರೆ. ಇದನ್ನು ಓದಿ..ಮದುವೆಯಾಯ್ತು, ಆರು ವರ್ಷ ಕೂಡ ಆಯಿತು: ಮಕ್ಕಳು ಕೂಡ ಇದ್ದರೂ, ಆ ಬದುಕಿನಲ್ಲಿ ಕೊನೆಗೆ ಏನಾಗಿ ಹೋಯ್ತು ಗೊತ್ತೇ? ಕೊನೆಯಲ್ಲಿ ನಡೆದ ಟ್ವಿಸ್ಟ್ ಏನು ಗೊತ್ತೇ?

ಅದರಲ್ಲೂ ಹುಡುಗಿಯರಿಗೆ ತಮ್ಮ ಸಂಗಾತಿಯ ವಿಚಾರದಲ್ಲಿ ಬಹಳ ನಿರೀಕ್ಷೆ ಇರುತ್ತದೆ, ಹುಡುಗ ಹೀಗೆ ಇರಬೇಕು, ಇಷ್ಟು ಓದಿರಬೇಕು, ಮನಸ್ಸು ಹೀಗಿರಬೇಕು, ಸ್ವಭಾವಗಳು ಹೀಗಿರಬೇಕು ಎಂದು ಒಂದು ದೊಡ್ಡ ಲಿಸ್ಟ್ ಇಟ್ಟುಕೊಂಡಿರುತ್ತಾರೆ. ಸಿಟಿಯಲ್ಲಿ ಓದಿ ಬೆಳೆದಿರುವ ಹುಡುಗಿಯರು ಸಾಮಾನ್ಯವಾಗಿ ರೈತ (Farmer) ಹುಡುಗರನ್ನು ಮದುವೆಯಾಗಲು ಇಷ್ಟ ಪಡುವುದಿಲ್ಲ. ಹಾಗಿದ್ದರೆ ಹುಡುಗಿಯರಿಗೆ ಎಂಥ ಹುಡುಗರು ಇಷ್ಟ ಆಗ್ತಾರೆ ಗೊತ್ತಾ?

ಸಾಮಾನ್ಯವಾಗಿ ಹುಡುಗಿಯರು ತಮ್ಮ ಹುಡುಗನ ವೃತ್ತಿ ಬಗ್ಗೆ ಯೋಚಿಸುವಾಗ, ತಾವು ಏನು ಕೆಲಸ ಮಾಡುತ್ತಿರುತ್ತಾರೋ, ಹುಡುಗ ಕೂಡ ಅದೇ ಕೆಲಸ ಮಾಡುವವನಾದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. ಡಾಕ್ಟರ್ ಡಾಕ್ಟರ್ ಅನ್ನು ಮದುವೆಯಾಗಲು ಬಯಸುತ್ತಾರೆ, ಟೀಚರ್ ಟೀಚರ್ ಅನ್ನು, ಲಾಯರ್ ಲಾಯರ್ ಅನ್ನು..ಅದಕ್ಕೆ ಕಾರಣ ಏನು ಎಂದರೆ, ಇಬ್ಬರು ಒಂದೇ ವೃತ್ತಿಯಾದರೆ ಒಬ್ಬರ ಕೆಲಸದ ಬಗ್ಗೆ ಮತ್ತೊಬ್ಬರಿಗೆ ಅರ್ಥವಾಗುತ್ತದೆ, ಇಬ್ಬರು ಸರಿಯಾಗಿ ಸಮಯ ಕೊಡಬಹುದು ಎನ್ನುವುದಾಗಿದೆ. ಇನ್ನು ಫ್ಯಾಮಿಲಿ ಬೇಕು ಎಂದು ಬಯಸುವ ಹುಡುಗಿಯರು, ಹೆಚ್ಚು ಕೆಲಸ ಇಲ್ಲದೆ ಫ್ರೀ ಆಗಿರುವ ಹುಡುಗನ ಜೊತೆಗೆ ಮದುವೆಯಾಗಲು ಬಯಸುತ್ತಾರೆ. ಇದನ್ನು ಓದಿ..ಪೂಜೆ ಮಾಡುತ್ತೇನೆ ಎಂದು ಮಹಿಳೆಯರನ್ನು ರೂಮಿನ ಒಳಗಡೆ ಕರೆದುಕೊಂಡು ಹೋಗುತ್ತಿದ್ದ ಬಾಬಾ, ಕೊನೆಗೆ ಏನು ಮಾಡುತ್ತಿದ್ದ ಗೊತ್ತೇ? ಮಹಿಳೆ ಪರಿಸ್ಥಿತಿ ಏನಾಗುತ್ತಿತ್ತು ಗೊತ್ತೇ??

Kannada Newskannada news livelive kannada newslive newsmarriage newstrending news