Keerthy Suresh: ಇದೇನಪ್ಪ ಇದು ಹೊಸ ಸುದ್ದಿ: ಚಿರಂಜೀವಿ ರವರಿಗೆ ಖ್ಯಾತ ನಟಿ ಕೀರ್ತಿ ಸುರೇಶ ರವರ ತಾಯಿ ಏನಾಗಬೇಕು ಗೊತ್ತೇ? ಏನು ಸಂಬಂಧ ಗೊತ್ತೇ?

Keerthy Suresh: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ತೆಲುಗು ಚಿತ್ರರಂಗದ ಎಂಥ ಶ್ರೇಷ್ಠ ನಟ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಚಿರಂಜೀವಿ ಅವರು 4 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದು ಸ್ಟಾರ್ ಹೀರೋ ಆಗಿದ್ದಾರೆ. ಇಂದಿಗೂ ಕೂಡ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಈ ವರ್ಷ ವಾಲ್ಟರ್ ವೀರಯ್ಯ ಸಿನಿಮಾ ಮೂಲಕ ಸೂಪರ್ ಹಿಟ್ ಪಡೆದುಕೊಂಡಿದ್ದಾರೆ.

ವಾಲ್ಟರ್ ವೀರಯ್ಯ ಸಿನಿಮಾ ನಂತರ ಚಿರು ಅವರು ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಹೆರ್ ರಮೇಶ್ ಅವರು ನಟಿಸಿರುವ ಈ ಸಿನಿಮಾ ತಮಿಳು ನಟ ಅಜಿತ್ ಅವರ ವೇದಾಳಮ್ ಸಿನಿಮಾದ ರಿಮೇಕ್ ಆಗಿದೆ. ಹಾಗೆಯೇ, ಈ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಿ ನಟಿ ತಮನ್ನಾ ಕಾಣಿಸಿಕೊಂಡಿದ್ದಾರೆ. ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ.

ಇದನ್ನು ಓದಿ: Adipurush Sita: ಸೀತಾ ಮಾತೆಯ ಪಾತ್ರದಲ್ಲಿ ಕೃತಿ ಸನೋನ್ ಪೋಸ್ಟರ್ ನೋಡಿ, ನೆಟ್ಟಿಗರು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??

ಚಿರಂಜೀವಿ ಅವರ ಕೆರಿಯರ್ ನಲ್ಲಿ 1980ರಲ್ಲಿ ಎಂ.ರಾಜಶೇಖರ್ ಅವರು ನಿರ್ದೇಶನ ಮಾಡಿದ ಪುನ್ನಮಿ ನಾಗು ಸಿನಿಮಾ ಸೂಪರ್ ಹಿಟ್ ಆಗಿತ್ತು, ಈ ಸಿನಿಮಾದಲ್ಲಿ ನಾಗನ ಪಾತ್ರದಲ್ಲಿ ಚಿರಂಜೀವಿ ಅವರು ನಟಿಸಿದ್ದರು. ಇದರಲ್ಲಿ ಚಿರಂಜೀವಿ ಅವರಿಗೆ ಹೀರೋಯಿನ್ ಆಗಿ ನಟಿಸಿದ್ದಾ ಮೇನಕ ಅವರು ಮತ್ಯಾರು ಅಲ್ಲ, ನಟಿ ಕೀರ್ತಿ ಸುರೇಶ್ ಅವರ ತಾಯಿ. ಮೇನಕ ಅಯ್ಯಂಗಾರ್ ಅವರು ಕನ್ಯಾಕುಮಾರಿಯ ನಾಗರ್ ಕೊಯಿಲ್ ನಲ್ಲಿ ಹುಟ್ಟಿದವರು. ಇವರು 1979ನರಲ್ಲಿ ತಮಿಳು ಸಿನಿಮಾ ಮೂಲಕ ನಟನೆ ಶುರು ಮಾಡಿದರು.

1979 ರಿಂದ 1987ರವರೆಗು ಸುಮಾರು 125 ಸಿನಿಮಾಗಳಲ್ಲಿ ಮೇನಕ ಅವರು ನಟಿಸಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಅವರೊಡನೆ ಪುನ್ನಮಿನಾಗು ಸಿನಿಮಾದಲ್ಲಿ, ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರ ತಂಗಿಯಾಗಿ ಸಮಯದ ಗೊಂಬೆ ಸಿನಿಮಾದಲ್ಲಿ ನಟಿಸಿದ್ದಾರೆ. ಮೇನಕ ಅವರು ಮಲಯಾಳಂ ನಿರ್ಮಾಪಕ ಸುರೇಶ್ ಅವರೊಡನೆ ಮದುವೆಯಾದ ನಂತರ ನಟನೆಯನ್ನು ಕಡಿಮೆ ಮಾಡಿದರು. ಈಗ ನಿರ್ಮಾಪಕಿ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ತಾಯಿ ಚಿರಂಜೀವಿ ಅವರ ಜೊತೆಗೆ ಹೀರೋಯಿನ್ ಆಗಿ ನಟಿಸಿದ್ದು, ಕೀರ್ತಿ ಸುರೇಶ್ ಅವರು ತಂಗಿಯಾಗಿ ನಟಿಸುತ್ತಿದ್ದಾರೆ.

ಇದನ್ನು ಓದಿ: Sugar Cane Juice: ಲಿವರ್ ಅನ್ನು ಕ್ಲೀನ್ ಮಾಡುವ ಕಬ್ಬಿಣ ಜ್ಯೂಸು ಮಹತ್ವ ಗೊತ್ತೇ?? ಏನೆಲ್ಲಾ ಲಾಭ ಎಂದು ತಿಳಿದರೆ, ಗಟ ಗಟ ಅಂತ ದಿನ ಕುಡಿಯುತ್ತಿರಿ

Best News in Kannadachiranjeevifilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsmegastar chiranjeeviNews in Kannadatop news kannadatv news kannada