ಚಪಾತಿ, ದೋಸೆ, ಅನ್ನಕ್ಕೆ ರುಚಿಕರವಾದ ಗ್ರೇವಿ, ಅದೂ ಕೇವಲ ಐದು ನಿಮಿಷಗಳಲ್ಲಿ, ಥಟ್ ಎಂದು ಹೇಗೆ ಮಾಡುವುದು ಗೊತ್ತೇ??

ಚಪಾತಿ, ದೋಸೆ, ಅನ್ನಕ್ಕೆ ರುಚಿಕರವಾದ ಗ್ರೇವಿ, ಅದೂ ಕೇವಲ ಐದು ನಿಮಿಷಗಳಲ್ಲಿ, ಥಟ್ ಎಂದು ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅನ್ನ, ಚಪಾತಿ ದೋಸೆ ಇವುಗಳ ರುಚಿಯನ್ನ ಹೆಚ್ಚಿಸೋದೆ ಗ್ರೇವಿ ಅಥವಾ ಇತರ ಸೈಡ್ ಡಿಶ್ ಗಳು. ಇಂದು ಅತ್ಯಂತ ಸುಲಭವಾಗಿ ಹೇಗೆ ಗ್ರೇವಿಯೊಂದನ್ನ ತಯಾರಿಸಿಕೊಳ್ಳಬಹುದು ಅನ್ನೋದನ್ನ ಹೇಳಿ ಕೊಡ್ತಿವಿ, ಮುಂದೆ ಓದಿ..

ಗ್ರೇವಿ ಮಡಲು ಬೇಕಾಗುವ ಸಾಮಗ್ರಿಗಳು; ಒಂದು ಕಟ್ಟು ಪಾಲಾಕ್ ಸೊಪ್ಪು, ಹೆಚ್ಚಿಟ್ಟುಕೊಂಡ ಎರದು ದೊಡ್ಡ ಈರುಳ್ಳಿ, ಹೆಚ್ಚಿಟ್ಟುಕೊಂಡ ಒಂದು ದೊಡ್ಡ ಟೊಮ್ಯಾಟೊ, ಒಂದೊಂದು ಚಮಚ – ಅರಿಶಿನ, ಅಚ್ಚ ಖಾರದ ಪುಡಿ, ಗರಂ ಮಸಾಲಾ ಪುಡಿ ಹಾಗೂ ಧನಿಯಾ ಪುಡಿ. ಎಣ್ಣೆ. ಒಗ್ಗರಣೆಗೆ; ಎಣ್ಣೆ, ಸಾಸಿವೆ ಮತ್ತು ಜೀರಿಗೆ ಅರ್ಧ ಚಮಚ, ಒಂದು ಒಣ ಮೆಣಸು, ಬೆಳ್ಳುಳ್ಳಿ ೫ ಎಸಳು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಮೊದಲಿಗೆ ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ೨ ದೊಡ್ಡ ಚಮಚ ಎಣ್ಣೆಯನ್ನು ಹಾಕಿ. ನಂತರ ಅದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಕೆಂಪಗಾಗುವ ವರೆಗೆ ಹುರಿದುಕೊಳ್ಳಿ. ನಂತರ ಅದಕ್ಕೆ ಟೊಮ್ಯಾಟೋ ಸೇರಿಸಿ. ಎರಡೂ ಚೆನ್ನಾಗಿ ಬೇಯಬೇಕು. ಬೆಂದ ನಂತರ ಅಲ್ಲಿಯೇ ಸ್ವಲ್ಪ ಮ್ಯಾಶ್ ಮಾಡಿ. ಇದಕ್ಕೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮುಡಿ ಹಾಗೂ ಅರಿಶಿನ ಪುಡಿ ತಲಾ ಒಂದು ಚಮಚ ಸೇರಿಸಿ, ಮತ್ತೆ ಮಿಕ್ಸ್ ಮಾಡಿ. ಇದಕ್ಕೆ ಪಾಲಾಕ್ ಸೊಪ್ಪನ್ನು ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.

ಕೊನೆಯಲ್ಲಿ ಒಂದು ಒಗ್ಗರಣೆ, ಒಂದು ಚಿಕ್ಕ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಬೆಂದ ಮೇಲೆ ಗ್ರೇವಿ ಮಿಶ್ರಣಕ್ಕೆ ಸೇರಿಸಿದರೆ ರುಚಿಕರವಾದ ಗ್ರೇವಿ ಸಮಿಯಲು ಸಿದ್ಧ. ಅತ್ಯಂತ ಸುಲಭವಾಗಿ ಹಾಗೂ ಶೀರ್ಘವಾಗಿ ಮಾಡಬಹುದಾದ ಈ ರೆಸಿಪಿಯನ್ನು ನೀವು ಒಮ್ಮೆ ಟ್ರೈ ಮಾಡಿ.

Comments are closed.