Gold Rate Predictions: ಮುಂದಿನ ವರ್ಷ ಹೇಗಿರಲಿದೆ ಚಿನ್ನದ ಬೆಲೆ? ತಿಳಿಯಿರಿ, ಖರೀದಿ ಮಾಡಬೇಕೆ ಬೇಡವೇ? ತಿಳಿಯಿರಿ.

ನಮಸ್ಕಾರ ಸ್ನೇಹಿತರೆ ಇನ್ನೇನು ಈ ವರ್ಷ ಮುಗಿಯುತ್ತಾ ಬಂದಿದ್ದು 2024 ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ವಸ್ತುಗಳಲ್ಲಿ ಚಿನ್ನ ಕೂಡ ಒಂದು ಆಗಿದ್ದು ಬನ್ನಿ 2024ರಲ್ಲಿ ಇದರ ಬೆಲೆ ಯಾವ ರೀತಿಯಲ್ಲಿ ಇರಬಹುದು ಎನ್ನುವುದರ ಬಗ್ಗೆ ಕೆಲವೊಂದು ಲೆಕ್ಕಾಚಾರಗಳನ್ನು ಇವತ್ತಿನ ಲೇಖನೆಯಲ್ಲಿ ಹಾಕೋಣ. ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುವಂತಹ ಬದಲಾವಣೆಗಳೆ ನಮ್ಮ ಭಾರತ ದೇಶದ ಚಿನ್ನದ ಬೆಲೆಯನ್ನು ಕೂಡ ಪ್ರತಿಫಲಿಸುತ್ತದೆ. ಸದ್ಯದ ಮಟ್ಟಿಗೆ ಅಂದರೆ ಡಿಸೆಂಬರ್ 11ರಂದು 10 ಗ್ರಾಂ ಚಿನ್ನದ ಬೆಲೆ 61, 221 ರೂಪಾಯಿ ಆಗಿತ್ತು. ಬನ್ನಿ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿರುವ ಚಿನ್ನದ ಬೆಲೆಯ ಬಗ್ಗೆ ವಿವರವಾಗಿ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ಚಿನ್ನದ ಬೆಲೆ ಈ ವರ್ಷದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿತ್ತು ಎನ್ನುವುದನ್ನು ನೀವು ಒಬ್ಬ ಗ್ರಾಹಕರಾಗಿ ಈಗಾಗಲೇ ನೋಡಿದ್ದೀರಿ ಎಂಬುದನ್ನು ನಾವು ಭಾವಿಸುತ್ತೇವೆ. ಚಿನ್ನ 1012 ಹಾಗೂ ಬೆಳ್ಳಿ 941 ಪ್ರತಿಶತ ಹೆಚ್ಚಳವನ್ನು ಕಂಡಿದೆ ಎಂಬುದಾಗಿ MCX ಹೇಳಿಕೊಂಡಿದೆ.

2024ರಲ್ಲಿ ಚಿನ್ನದ ಬೆಲೆ ಜಾಗತಿಕವಾಗಿ ಯಾವ ರೀತಿ ಕಾಣಬಹುದು ಎನ್ನುವುದರ ಮೇಲೆ ಪರಿಣಾಮ ಬೀರಿರುವಂತಹ ಅಂಶಗಳನ್ನು ಗಮನಿಸುವುದಾದರೆ ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನವನ್ನು ಕೂಡ ನಾವು ಪ್ರಮುಖವಾಗಿ ಪರಿಗಣಿಸಬಹುದು. ಕೇವಲ ಎಷ್ಟು ಮಾತ್ರವಲ್ಲದೆ ಸಾಕಷ್ಟು ದೇಶಗಳ ನಡುವೆ ಇರುವಂತಹ ರಾಜಕೀಯ ಉದ್ವಿಗ್ನತೆಗಳು ಹಾಗೂ ಬೇರೆ ವಿಚಾರಗಳು ಕೂಡ ಚಿನ್ನದ ಬೆಲೆಯ ಏರಿಕೆಯ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಜಾಗತಿಕ ಮಟ್ಟದಲ್ಲಿ 2024ರಲ್ಲಿ ಚಿನ್ನದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.

ಚಿನ್ನದ ಬೆಲೆ 2024ರಲ್ಲಿ 57,000 ಗಳಿಂದ ಪ್ರಾರಂಭಿಸಿ 67,000 ವರೆಗೂ ಕೂಡ ಹೆಚ್ಚಳ ಆಗುವಂತಹ ಸಾಧ್ಯತೆ ಇದೆ. 2024ರಲ್ಲಿ ಇದನ್ನು ಮೀರಿ ಚಿನ್ನದ ಬೇಡಿಕೆ ಹೆಚ್ಚಾಗುವುದರಿಂದ ದರ ಕೂಡ ಸಾಕಷ್ಟು ಏರಿಕೆಯನ್ನು ಕಾಣಬಹುದು ಎಂಬುದಾಗಿ ಪರಿಣಿತರು ತಮ್ಮ ಭವಿಷ್ಯವನ್ನು ನೋಡಿದಿದ್ದಾರೆ ಮಾತ್ರವಲ್ಲದೆ ಬೆಳ್ಳಿಯ ಬೆಲೆ ಇದಕ್ಕೆ ಸಾಕಷ್ಟು ವಿಪರೀತ ಆಗಿರುವುದಿಲ್ಲ ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ. 2024ರಲ್ಲಿ ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ಬೆಲೆಯಲ್ಲಿ ಕೂಡ ಏರಿಕೆಯಾಗುವುದನ್ನು ಕಾಣಬಹುದಾಗಿದೆ.

2023ರಲ್ಲಿ ಸಿಕ್ಕಿರುವ ಮುನ್ಸೂಚನೆಯ ಪ್ರಕಾರ ಬೆಳ್ಳಿಯ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 65,000 ಆಗಿದ್ದು ಇದು ಮುಂದಿನ ದಿನಗಳಲ್ಲಿ 88,000 ಆಗುವ ಸಾಧ್ಯತೆ ಕೂಡ ಇದೆ. ಡಿಸೆಂಬರ್ 31ರಂದು ಪ್ರತಿ ಕೆಜಿ ಬೆಳ್ಳಿಯ ಬೆಲೆ ಸರಿಸುಮಾರು 71,000 ಆಸು ಪಾಸಿನಲ್ಲಿ ಇರಲಿದೆ ಎಂಬುದಾಗಿ ಅಂದಾಜಿಸಲಾಗಿದೆ. ಹೀಗಾಗಿ ಇದಕ್ಕೆ ಸಿದ್ಧವಾಗಿ ಬೆಳ್ಳಿ ಹಾಗೂ ಚಿನ್ನ ಖರೀದಿಯ ಮೇಲೆ ತಮ್ಮ ಗಮನಹರಿಸುವುದು ಅತ್ಯಂತ ಪ್ರಮುಖವಾಗಿದೆ.

Comments are closed.