ಸುಮ್ಮನಿದ್ದ ಶ್ರುತಿ ಹಾಸನ್- ರಾಮ ಮಂದಿರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??

ಸುಮ್ಮನಿದ್ದ ಶ್ರುತಿ ಹಾಸನ್- ರಾಮ ಮಂದಿರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??

ನಮಸ್ಕಾರ ಸ್ನೇಹಿತರೇ ಜನವರಿ 22ರಂದು ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿರುವಂತಹ ವಿಚಾರ ನಿಮಗೆಲ್ಲರಿಗೂ ಗೊತ್ತಿದ್ದು, ಈ ವಿಚಾರದಲ್ಲಿ ಕೂಡ ರಾಷ್ಟ್ರಮಟ್ಟದಲ್ಲಿ ಕೆಲವೊಂದು ವ್ಯಕ್ತಿಗಳು ವಿರುದ್ಧವಾದ ಅಂತಹ ಹೇಳಿಕೆಯನ್ನು ನೀಡುವುದು ಹಾಗೂ ಇನ್ನಿತರ ಘಟನೆಗಳನ್ನು ಮಾಡುತ್ತಿರುವುದನ್ನು ನೀವು ಸೋಶಿಯಲ್ ಮೀಡಿಯಾ ಹಾಗೂ ಸುದ್ದಿಮಾಧ್ಯಮಗಳಲ್ಲಿ ಗಮನಿಸಬಹುದಾಗಿದೆ.

ಇನ್ನು ರಾಮಮಂದಿರ ನಿರ್ಮಾಣದ ಬಗ್ಗೆ ನಡೆಯುತ್ತಿರುವಂತಹ ರಾಜಕೀಯ ವಿದ್ಯಾಮಾನಗಳ ಬಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ರುತಿ ಹರಿಹರನ್ ರವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಬನ್ನಿ ಶ್ರುತಿ ಹರಿಹರನ್ ರವರು ರಾಮಮಂದಿರ ನಿರ್ಮಾಣದ ಬಗ್ಗೆ ನಡೆಯುತ್ತಿರುವಂತಹ ರಾಜಕೀಯದ ಪ್ರಸ್ತಾವನೆಯ ಬಗ್ಗೆ ಏನೆಲ್ಲ ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಸಂವಿಧಾನದಲ್ಲಿ ಧರ್ಮದ ವಿಚಾರದಲ್ಲಿ ದೇಶ ತಟಸ್ಥವಾಗಿರಬೇಕು ಹಾಗೂ ಯಾವುದೇ ಧರ್ಮದ ಪೋಷಣೆ ಅಥವಾ ವಿರೋಧ ಮಾಡಬಾರದು ಎನ್ನುವಂತಹ ಉಲ್ಲೇಖವಿದೆ ಎಂಬುದಾಗಿ ಶೃತಿ ಹರಿಹರನ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಧರ್ಮವನ್ನು ರಾಜಕೀಯಗೊಳಿಸುತ್ತಿರುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಈ ಸಂದರ್ಭದಲ್ಲಿ ಶ್ರುತಿ ಹರಿಹರನ್ ರವರು ಸಂವಿಧಾನವನ್ನು ಮುಂದಿಟ್ಟುಕೊಂಡು ರಾಮನ ದೇವಸ್ಥಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಯಾರು ತಾನೆ ರಾಮನ ಗುಣಗಳಿಂದ ಪ್ರೇರೇಪಿತರಾಗುವುದಿಲ್ಲ ನೀವೇ ಹೇಳಿ, ರಾಮನು ನಮ್ಮೆಲ್ಲರ ನಡುವೆ ಇದ್ದಾನೆ ಅದನ್ನು ನಾವು ಹುಡುಕಿಕೊಳ್ಳಬೇಕು ಇದನ್ನು ಹನುಮಂತ ಕೂಡ ಎದೆಯನ್ನು ಬಗೆದು ತೋರಿಸಿದ್ದಾನೆ ಎಂಬುದಾಗಿ ಹೇಳಿದ್ದಾರೆ. ಶೃತಿ ಹರಿಹರನ್ ರವರು ಈ ಮೂಲಕ ಇದೇ ಜನವರಿ 22ರಂದು ನಡೆದಿರುವಂತಹ ರಾಮ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

ಸಾಕಷ್ಟು ನಟ ಹಾಗೂ ನಟಿಯರು ಸೇರಿದಂತೆ ರಾಜಕೀಯ ಪಕ್ಷದ ನಾಯಕರು ಕೂಡ ಇತ್ತೀಚಿಗಷ್ಟೇ ನಡೆದಿರುವಂತಹ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಹೋಗದೆ ಆಹ್ವಾನವನ್ನು ತಿರಸ್ಕರಿಸಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ಗಮನಿಸಬಹುದಾಗಿದ್ದು, ಈ ಸಂದರ್ಭದಲ್ಲಿ ಶ್ರುತಿ ಹರಿಹರನ್ ರವರ ಈ ಅಡ್ಡಗೋಡೆಯ ಮೇಲೆ ದೀಪ ಇಟ್ಟಿರುವಂತಹ ಹೇಳಿಕೆಗಳು ಕೂಡ ರಾಮಭಕ್ತರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Comments are closed.