ಆರೋಗ್ಯಕರವೂ ಹೌದು, ರುಚಿಯೂ ಹೌದು ಈ ನಿಂಬೆ ಸಾರು, ಮಾಡೋದು ಕೂಡ ಅಷ್ಟೇ ಸುಲಭ. ಹೇಗೆ ಮಾಡುವುದು ಗೊತ್ತೇ??

ಆರೋಗ್ಯಕರವೂ ಹೌದು, ರುಚಿಯೂ ಹೌದು ಈ ನಿಂಬೆ ಸಾರು, ಮಾಡೋದು ಕೂಡ ಅಷ್ಟೇ ಸುಲಭ. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹೊಟ್ಟೆಯಲ್ಲಿ ಅಜೀರ್ಣವಾದ್ರೆ, ಹೊಟ್ಟೆ ಸಮಸ್ಯೆಯಾದ್ರೆ ಈ ಒಂದು ಸಾರು ಮಾಡಿಕೊಂಡು ಊಟಕ್ಕೆ ಬಳಸಿದರೆ ಸಾಕು ಈ ಎಲ್ಲಾ ಸಮಸ್ಯೆ ದೂರವಾಗುತ್ತೆ. ಹೌದು ರುಚಿಕರವಾದ ಈ ನಿಂಬೆ ಸಾರು ಕುಡಿಯಲೂ ಬಳಸಬಹುದು. ಅನ್ನದ ಜೊತೆಗೂ ಸೇವಿಸಬಹುದು. ಮಾಡುವುದು ಹೇಗೆ ನೋಡೋಣ ಬನ್ನಿ. ನಿಂಬೆ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: ನಿಂಬೆ ಹಣ್ಣು ೪-೫, ಶುಂಠಿ ಸ್ವಲ್ಪ, ಕಾಳು ಮೆಣಸು ೧೦, ಬೆಲ್ಲ ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು. ಒಗ್ಗರಣೆಗೆ ಎಣ್ಣೆ, ಕರಿಬೇವು, ಒಣಮೆಣಸು, ಸಾಸಿವೆ ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ಕುದಿಯಲು ಇಡಿ. ಇದಕ್ಕೆ ಸ್ವಲ್ಪ ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಕಾಳು ಮೆಣಸು ಹಾಗೂ ಶುಂಠಿಯನ್ನು ಚೆನ್ನಾಗಿ ಕುಟ್ಟಿಕೊಳ್ಳಬೇಕು. (ಕಲ್ಲಿನಲ್ಲಿ ಜಜ್ಜಿಕೊಳ್ಳಲೂ ಬಹುದು). ನಂತರ ಈ ಕುಟ್ಟಿದ ಮಿಶ್ರಣವನ್ನು ಕುದಿಯುತ್ತಿರುವ ನೀರಿಗೆ ಹಾಕಬೇಕು. ಶುಂಠಿ ಹಾಗೂ ಕಾಳುಮೆಣಸಿನ ಸತ್ವ ಸರಿಯಾಗಿ ಬಿಡಬೇಕು ಅದಕ್ಕಾಗಿ ಕುಟ್ಟಿದ ಮಿಶ್ರಣ ಹಾಕಿದ ನಂತರ ಸರಿಯಾಗಿ ಕುದಿಸಿ. ನತರ ನಿಂಬೆ ಹಣ್ಣಿಸ ರಸ ತೆಗೆದು ಸಾರಿಗೆ ಬೆರೆಸಿ ಕೂಡಲೇ ಗ್ಯಾಸ್ ಆಫ್ ಮಾಡಿ. ಕೊನೆಯಲ್ಲಿ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಗೂ ಒಣಮೆಣಸು ಹಾಕಿ ಒಗ್ಗರಣೆ ಮಾಡಿದ್ರೆ ಸಾರು ಸಿದ್ದ.

nimbe saaru

ನಿಂಬೆ ಹಣ್ಣಿಸ ರಸವನ್ನು ಹಾಕಿದ ಮೇಲೆ ಸಾರನ್ನು ಕುದಿಸಬಾರದು. ಅದು ಕಹಿಯಾಗುತ್ತದೆ. ಇನ್ನು ಅತ್ಯಂತ ಆರೋಗ್ಯಕರವಾದ ಈ ಸಾರಿನೊಂದಿಗೆ ಇನ್ನೊಂದು ಟಿಪ್ಸ್ ಎಂದರೆ ನಿಂಬೆಹಣ್ಣಿನ ರಸ ತೆಗೆದ ಮೇಲೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಉಪ್ಪು ಹಾಕಿ ಬಿಸಿಲಿನಲ್ಲಿ ಒಣಗಿಸಿದರೆ ಅಜೀರ್ಣ ಸಮಸ್ಯೆಯಾದಾಗ ಬಾಯಲ್ಲಿಟ್ಟುಕೊಂಡರೆ ಹೊಟ್ಟೆಯ ಸಮಸ್ಯೆ ಮಾಯವಾಗುತ್ತದೆ. ಇನ್ನು ಈ ಆರೋಗ್ಯಕರವಾದ ರೆಸಿಪಿ ಮಾಡೋದು ಹೇಗೆ? ಈ ವಿಡಿಯೋ ನೋಡಿ.

Comments are closed.