ಅಪ್ಪು ನಮನ ಕಾರ್ಯಕ್ರಮದ ಸಮಯದಲ್ಲಿ ಒಂದೇ ಒಂದು ಹೇಳಿಕೆಯ ಮೂಲಕ ಕಣ್ಣೀರು ಥಳಿಸಿದ ರಾಘಣ್ಣ, ಹೇಳಿದ್ದೇನು ಗೊತ್ತೇ??

ಅಪ್ಪು ನಮನ ಕಾರ್ಯಕ್ರಮದ ಸಮಯದಲ್ಲಿ ಒಂದೇ ಒಂದು ಹೇಳಿಕೆಯ ಮೂಲಕ ಕಣ್ಣೀರು ಥಳಿಸಿದ ರಾಘಣ್ಣ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ನೆಚ್ಚಿನ ದೃವತಾರೆ ರಾಜರತ್ನ ಅಪ್ಪು ನಮ್ಮನ್ನೆಲ್ಲಾ ಅಗಲಿ ಈಗಾಗಲೇ 20 ದಿನಗಳು ಕಳೆದು ಹೋಗಿದೆ. ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಕೇವಲ ಅವರ ಮನೆಯವರಿಗೆ ಮಾತ್ರವಲ್ಲದೆ ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ. ಹೌದು ಗೆಳೆಯರೇ ನೆನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪುನೀತ್ ನಮನ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬಸ್ಥರು ಹಾಗೂ ಹಲವಾರು ಗಣ್ಯಾತಿಗಣ್ಯರು ನೆರೆದಿದ್ದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ರವರು ಅಪ್ಪು ನಿಧನರಾದ ನಂತರ ಶಿವಣ್ಣನ ಮುಖ ನೋಡಿ ನನಗೆ ನಾಚಿಕೆಯಾಯಿತು ಎಂಬುದಾಗಿ ಹೇಳಿದ್ದಾರೆ. ಯಾಕೆಂದರೆ ನಾವಿಬ್ಬರೂ ಹಿರಿಯರಾಗಿ ನಮಗಿಂತಾ ಕಿರಿಯ ನಾಗಿರುವ ಇವನನ್ನು ಕಳಿಸಿ ಕೊಡಬೇಕಾಯಿತಾ ಎಂಬ ದುಃಖದಿಂದ ಅತ್ತಿದ್ದಾರೆ ಕೂಡ. ಅವನನ್ನು ಕಳುಹಿಸಿಕೊಟ್ಟು ನಮಗೆ ಬದುಕಲು ನಾಚಿಕೆಯಾಗುತ್ತಿದೆ ಎಂಬುದಾಗಿ ಕೊಡಲಿದ್ದಾರೆ. ಒಮ್ಮೆ ಅಪ್ಪು ಅವರಿಗೆ ರಾಘಣ್ಣ ನನ್ನ ಆಯಸ್ಸನ್ನು ನಿನಗೆ ಕೊಡುತ್ತೇನೆ ಎಂಬುದಾಗಿ ಹೇಳಿದ್ದರಂತೆ. ಆದರೆ ಈಗ ಅಪ್ಪು ಅವರು ತಮ್ಮ ಸಂಪೂರ್ಣ ಆಯಸ್ಸನ್ನು ರಾಘಣ್ಣನಿಗೆ ಕೊಟ್ಟು ಹೋಗಿದ್ದಾರೆ.

ವೇದಿಕೆಯಲ್ಲಿ ಇನ್ನೂ ಕೂಡ ಭಾವುಕರಾಗಿ ಮಾತನಾಡುತ್ತಾ ರಾಘಣ್ಣನವರು ನನ್ನನ್ನು ಕಳುಹಿಸಿ ಅವನನ್ನು ಕರೆದುಕೊಂಡು ಬಿಡಿ ಎಂಬುದಾಗಿ ಭಾವನಾತ್ಮಕವಾಗಿ ಅತ್ತಿದ್ದಾರೆ. ಪುನೀತ್ ನನ್ನು ಹೂತಿಲ್ಲ ಬಿತ್ತಿದ್ದೇವೆ ಸಮಾಜದಲ್ಲಿ ಅವನಂತಹ ಇನ್ನೂ ನೂರಾರು ಜನ ಪುನೀತ್ ಹುಟ್ಟಿಬರಬೇಕು ಎಂಬುದಾಗಿ ಹೇಳಿದ್ದಾರೆ. ಹುಟ್ಟುವಾಗ ನಮ್ಮ ತಮ್ಮನಾಗಿ ಬಂದ ಆದರೆ ಕೊನೆ ಉಸಿರು ಎಳೆಯುವಾಗ ನಮ್ಮ ತಂದೆಯಾಗಿ ಹೋದ. ನನಗೂ ಹಾಗೂ ಶಿವಣ್ಣನಿಗೆ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಟ್ಟು ಹೋಗಿದ್ದಾನೆ ವಾಪಾಸು ಬಂದು ಬಿಡು ಕಂದ ಎಂಬುದಾಗಿ ಅತ್ತಿದ್ದಾರೆ. 20 ದಿನಗಳ ಕಾಲ ಅಶ್ವಿನಿ ಹಾಗೂ ಮಕ್ಕಳು ಅಳಬಾರದು ಎಂಬುದಾಗಿ ನಾನು ಅತ್ತಿರಲಿಲ್ಲ ಆದರೆ ಈಗ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅವನನ್ನು ಮರೆತು ಬದುಕುವ ಶಕ್ತಿಯನ್ನು ನಾನು ದೇವರಲ್ಲಿ ಕೇಳುವುದಿಲ್ಲ ಆದರೆ ಈ ನೋ’ವಿನ ಜೊತೆಗೆ ಬದುಕುವ ಶಕ್ತಿಯನ್ನು ಆ ದೇವರಲ್ಲಿ ನಾನು ಕೇಳುತ್ತೇನೆ. ಪುನೀತ ನನ್ನ ಎದೆಯೊಳಗಿರುತ್ತಾನೆ ಎಂಬುದಾಗಿ ಹೇಳಿದ್ದಾರೆ. ಇದಾದನಂತರ ಶಿವಣ್ಣನವರು ಕೂಡ ಪುನೀತ್ ಅವರಿಗೆ ಹಾಡನ್ನು ಹಾಡಿ ಅಷ್ರು ತರ್ಪಣವನ್ನು ನೀಡಿ ಭಾವುಕರಾಗಿದ್ದಾರೆ.

Comments are closed.