ನೀವು ಭಗವಾನ್ ವಿಷ್ಣು ಕೃಪೆಗೆ ಹಾಗೂ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದರೆ, ಧನುರ್ಮಾಸದಲ್ಲಿ ಈ ಚಿಕ್ಕ ಕೆಲಸ ಮಾಡಿ ಸಾಕು.

ನೀವು ಭಗವಾನ್ ವಿಷ್ಣು ಕೃಪೆಗೆ ಹಾಗೂ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದರೆ, ಧನುರ್ಮಾಸದಲ್ಲಿ ಈ ಚಿಕ್ಕ ಕೆಲಸ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ, 2021 ರ ಡಿಸೆಂಬರ್‌ 16 ರಿಂದ ಧನುರ್ಮಾಸ ಅಥವಾ ಖಾರ್ಮಾಸ ಆರಂಭವಾಗಿದೆ. ಇದು ಜನವರಿ 14 ರವರೆಗೆ ಮುಂದುವರೆಯಲಿದೆ. ಅಂದರೆ ಈ ಒಂದು ತಿಂಗಳು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ಗುರು ಈ ಸಮಯದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಮಂಗಳ ಕಾತ್ಯಗಳನ್ನು ನಡೆಸಲಾಗುವುದಿಲ್ಲ. ಆದರೂ ಈ ತಿಂಗಳು ಮಹಾ ವಿಷ್ಣುವಿನ ಕೃಪೆಗೆ ಪಾತ್ರರಾಗಲು ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಭಗವಾನ್ ವಿಷ್ಣು ಮತ್ತು ಶ್ರೀ ಕೃಷ್ಣನ ವಿಶೇಷ ಕೃಪೆಗೆ ಪಾತ್ರರಾಗಲು ಹೀಗೆ ಮಾಡಿ.

ದಿನವೂ ಸೂರ್ಯೋದಯಕ್ಕೂ ಮೊದಲು ಸ್ನಾನಾದಿಗಳನ್ನು ಮುಗಿಸಿ ಪೂಜೆ ಸಲ್ಲಿಸಬೇಕು. ಪೂಜೆಯ ಸಮಯದಲ್ಲಿ ಮಹಾವಿಷ್ಣುವಿಗೆ ಪಾಯಸ ನೈವೇದ್ಯ ಮತ್ತು ತುಳಸಿಯನ್ನುಅರ್ಪಿಸಬೇಕು. ಇದರಿಂದ ಆರ್ಥಿಕತೆ ಸುಧಾರಿಸುತ್ತದೆ. ಸಂಪತ್ತು ಸಿಗುತ್ತದೆ. ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವರಿಗೆ ಅರ್ಘ್ಯ ಅಂದರೆ ನೀರನ್ನು ಅರ್ಪಿಸುವುದು ಉತ್ತಮ. ಇದರಿಂದ ಸಕಲ ರೋಗಗಳೂ ದೂರವಾಗುತ್ತವೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ.

vishnu gomaatha

ಇನು ಧನುರ್ಮಾಸದಲ್ಲಿ ತಪ್ಪದೇ ಮಾಡಬೇಕಾಗಿರುವ ವಿಷಯ ಗೋಸೇವೆ. ಹೌದು ಈ ತಿಂಗಳು ಗೋವಿಗೆ ಆಹಾರ ಹಾಕುವವರು, ಪೂಜಿಸುವವರು ಗೋಮಾತೆಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗುತ್ತದೆ. ಇನ್ನು ಧನುರ್ಮಾಸ ತಿಂಗಳು ಶೂನ್ಯ ತಿಂಗಳೂ ಎಂದು ಕರೆಸಿಕೊಳ್ಳುತ್ತದೆ. ಹಾಗಾಗಿ ಈ ತಿಂಗಲಿನಲ್ಲಿ ಮಾಡುವ ದಾನಗಳು ನಮ್ಮ ಶ್ರೇಯಸ್ಸಿಗೆ, ಸಂಪತ್ತಿಗೆ ಕಾರಣವಾಗುತ್ತವೆ ಎನ್ನಲಾಗುತ್ತದೆ. ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ. ಧನುರ್ಮಾಸದಲ್ಲಿ ವಿಷ್ಣುವನ್ನು ಹಾಗೂ ಆತನ ಇತರೆ ಅವತಾರಗಳನ್ನು ಪೂಜಿಸಲಾಗುತ್ತದೆ. ಶ್ರೀ ಕೃಷ್ಣನನ್ನೂ ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮಂತ್ರ ಪಠಣ ಕೂಡ ಅತ್ಯಂತ ಫಲಕಾರಿ. ಈ ಮೇಲಿನ ಎಲ್ಲಾ ಕ್ರಮಗಳನ್ನು ಪಾಲಿಸಿದರೆ ಧನುರ್ಮಾಸ ಆಚರಣೆ ಅಡಚಣೆಯಿಲ್ಲದೇ ಸಮಾಪ್ತವಾಗುವುದು.

Comments are closed.