Ganesha Mantras: ನೆನಪಿರಲಿ ಜೀವನದಲ್ಲಿ ಈ ಗಣೇಶನ ಮಂತ್ರಗಳು ಬಹಳ ಮುಖ್ಯ- ಇವುಗಳನ್ನು ಪಠಿಸಿ, ನಿಮ್ಮ ಜೀವನ ಹೇಗಿರುತ್ತದೆ ನೋಡಿ.

Ganesha Mantras: chant these four mantras to overcome financial difficulties.

ನಮಸ್ಕಾರ ಸ್ನೇಹಿತರೆ ಗಜಾನನ ಗಣೇಶ ಎಂಬ ಹೆಸರಿನಿಂದ ಪೂಜಿಸಲ್ಪಡುವಂತಹ ಗಜಮುಖನನ್ನು ನಾವು ಹಿಂದೂ ಸಂಸ್ಕೃತಿಯಲ್ಲಿ(Hindu Culture) ವಿಘ್ನ ವಿನಾಶಕ ಅಂದರೆ ಕೆಟ್ಟದ್ದನ್ನು ತೊಡೆದುಹಾಕಿ ಒಳಿತನ್ನು ಕರುಣಿಸುವಂತಹ ಪರಮಾತ್ಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ ಇದಕ್ಕಿಂತಲೂ ವಿಶೇಷವಾಗಿ ಗಜಾನನ ಈ ವಿಶೇಷ ಮಂತ್ರಗಳನ್ನು ಪಠಿಸುವ ಮೂಲಕ ನೀವು ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನು ಕೂಡ ತೊಳೆದು ಹಾಕಬಹುದು ನಿಮಗೆ ಐಶ್ವರ್ಯ ಹಾಗೂ ಶಾಂತಿ ನೆಮ್ಮದಿಯನ್ನು ಕೂಡ ಕರುಣಿಸಲಿದ್ದಾನೆ. ಹಾಗಿದ್ರೆ ಬನ್ನಿ ಆ ಮಂತ್ರಗಳು ಯಾವುವು ಹಾಗೂ ಅವುಗಳ ಮಹತ್ವವನ್ನು ತಿಳಿಯೋಣ.

Ganesha Mantras: chant these four mantras to overcome financial difficulties.

ಮೊದಲನೇ ಮಂತ್ರ ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ. ಇನ್ನು ಈ ಮಂತ್ರದ ಪಠಿಸುವುದರಿಂದ ನಿಮ್ಮ ಕೆಲಸದ ಜೀವನದಲ್ಲಿ ಉನ್ನತವಾದ ಯಶಸ್ಸು ನಿಮಗೆ ದೊರಕಲಿದೆ. ಕೆಲಸ ಮಾಡುವಂತಹ ಆತ್ಮವಿಶ್ವಾಸ ಕೂಡ ನಿಮ್ಮಲ್ಲಿ ಹೆಚ್ಚಾಗುತ್ತದೆ ಹಾಗೂ ಇದರಿಂದಾಗಿ ಜೀವನದಲ್ಲಿ ನೆಮ್ಮದಿ ಕೂಡ ವೃದ್ಧಿಯಾಗುತ್ತದೆ.

ಎರಡನೇ ಮಂತ್ರ ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್. ಗಣಪತಿಯ ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಒತ್ತಡ ಇದ್ದರೂ ಕೂಡ ಅದು ದೂರವಾಗಲಿದ್ದು ಶಾಂತ ಮನಸ್ಥಿತಿ ನಿರ್ಮಾಣವಾಗಲಿದೆ. ಒಂದು ವೇಳೆ ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಮಯಗಳಿಂದ ಬಳಲುತ್ತಾ ಇದ್ದರೆ ಈ ಮಂತ್ರದ ನಿಯಮಿತ ಪಠಿಸುವುದರಿಂದ ನಿಮಗೆ ಆರೋಗ್ಯ ಸಮಸ್ಯೆ ಕೂಡ ದೂರವಾಗುತ್ತದೆ. ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಕೂಡ ಸಾಕಷ್ಟು ವೃದ್ಧಿಯಾಗುತ್ತದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

ಮೂರನೇ ಮಂತ್ರ ಗಜಾನನಂ ಭೂತ ಗಾಣಧಿ ಸೇವಿತಂ ಕಪಿಥ ಜಂಬೋ ಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ ಪಾದ ಪಂಕಜಂ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮನಸ್ಸಿನಲ್ಲಿ ಶಾಂತಿ ಇದ್ದರೆ ಮಾತ್ರ ಜೀವಿಸಲು ಕೂಡ ಆಸಕ್ತಿ ಇರುತ್ತದೆ. ಈ ಮಂತ್ರ ನಿಮಗೆ ಬೇಕಾಗಿರುವಂತಹ ಶಾಂತಿ ನೆಮ್ಮದಿಯನ್ನು ನೀಡುತ್ತದೆ ಹಾಗೂ ಇನ್ನಷ್ಟು ಹೆಚ್ಚಿನ ಉತ್ಸಾಹವನ್ನು ಮೂಡುವಂತೆ ಮಾಡುತ್ತದೆ. ಆಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಧೈರ್ಯ ಹೆಚ್ಚಾಗುತ್ತದೆ ಹಾಗೂ ಆರ್ಥಿಕ ಸಂಪತ್ತು ಕೂಡ ನಿಮ್ಮ ಕೈ ಸೇರುತ್ತದೆ.

ನಾಲ್ಕನೇ ಮಂತ್ರ ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಯಾ ವಶಮಾನಾಯೇ ಸ್ವಾಹಾ ತತ್ಪುರುಷಾಯಾ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್ ಓಂ ಶಾಂತಿಃ ಶಾಂತಿಃ ಶಾಂತಿಃ. ಇದನ್ನು ನೀವು ದೈನಂದಿನ ಜೀವನದಲ್ಲಿ ಬೆಳಗೆ ಎದ್ದ ತಕ್ಷಣ ಹೇಳುವುದರಿಂದ ನಿಮ್ಮ ಜೀವನದಲ್ಲಿ ಪಾಸಿಟಿವ್ ನೆಸ್ ಹೆಚ್ಚಾಗುತ್ತದೆ. ಜೀವನದಲ್ಲಿ ಕಳೆದುಕೊಂಡಿರುವ ನೆಮ್ಮದಿ ನಿಮ್ಮದಾಗಲಿದೆ. ಈ ಮೇಲೆ ಹೇಳಿರುವಂತಹ ನಾಲ್ಕು ಮಂತ್ರಗಳನ್ನು ಪಠಿಸುವಾಗಲು ಕೂಡ ನೀವು ಪ್ರಮುಖವಾಗಿ ಶ್ರದ್ದೆಯಿಂದ ಇವುಗಳನ್ನು ಪರಿಪಾಲಿಸಬೇಕು ಹಾಗೂ ಮನಸ್ಸಿನಲ್ಲಿ ಬೇರೆ ಯಾವುದೇ ಆಲೋಚನೆಗಳನ್ನು ಹೊಂದಿರಬಾರದು.

Comments are closed.