Low Cibil score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೊಡುತ್ತಾರೆ ಲೋನ್- ಬಡವರಿಗೂ ಸಿಗುತ್ತೆ ಕಷ್ಟಕ್ಕೆ ಹಣ.

Here is one of the best way to get a loan when your cibil score is low.

Low Cibil score: ನಮಸ್ಕಾರ ಸ್ನೇಹಿತರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಂದ್ರೆ ಸಿಬಿಲ್ ಸ್ಕೋರ್ ಕಡಿಮೆ ಆಗಿದ್ರೆ ಅಥವಾ ಹಾಳಾಗಿದ್ದರೆ ಬ್ಯಾಂಕುಗಳಿಂದ ನಿಮಗೆ ಪರ್ಸನಲ್ ಲೋನ್ ಸಿಗದೇ ಹೋಗಬಹುದು ಆದರೆ NBFC ಕಂಪನಿಗಳ ಮೂಲಕ ಹಾಗೂ ಲೋನ್ ಅಪ್ಲಿಕೇಶನ್ ಗಳ ಮೂಲಕ ನೀವು ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ನಿಮ್ಮ ಲೋನ್ ಪಡೆದುಕೊಳ್ಳುವ ಚಿಂತೆಯನ್ನು ದೂರ ಮಾಡಲು ಬಂದಿದ್ದೇವೆ. ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಯಾವ ರೀತಿಯಲ್ಲಿ ಸಾಲ ಪಡೆದುಕೊಳ್ಳುವುದು ಅನ್ನೋದನ್ನ ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.

ಕಷ್ಟದ ಸಂದರ್ಭದಲ್ಲಿ ನಿಮಗೆ ಆರ್ಥಿಕ ಸಹಾಯವನ್ನು ಮಾಡುವ ನಿಟ್ಟಿನಲ್ಲಿ NBFC ಕಂಪನಿಗಳು ಈ ರೀತಿಯ ಸಾಲವನ್ನು ನೀಡುವುದಕ್ಕೆ ಹೊರಟಿದ್ದು ಇದಕ್ಕಾಗಿ ನೀವು ಹೆಚ್ಚಿನ ಡಾಕ್ಯುಮೆಂಟ್ ಗಳನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ವೇಗವಾಗಿ ನಿಮ್ಮ ಕೈಗೆ ಸಿಗುತ್ತದೆ.

NBFC ಪರ್ಸನಲ್ ಲೋನ್ಗಳ ಲಾಭಗಳು- Personal Loan Benefits.

  1. ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ 12 ತಿಂಗಳ ಮಟ್ಟಿಗೆ 90,000ಗಳವರೆಗೂ ಪರ್ಸನಲ್ ಲೋನ್ ಸಿಗುತ್ತೆ.
  2. ಜಾಯ್ನಿಂಗ್ ಫೀಸ್ ಸೇರಿದಂತೆ ಯಾವುದೇ ರೀತಿ ಹೆಚ್ಚಿನ ಶುಲ್ಕವನ್ನು ಕಟ್ಟಬೇಕಾದ ಅಗತ್ಯ ಇಲ್ಲ.
  3. ಯಾವುದೇ ರೀತಿಯ ಕೋಲಾಟರಲ್ ಹಾಗೂ ಸೆಕ್ಯೂರಿಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  4. ಯಾವುದೇ ರೀತಿಯ ಪೇಪರ್ ವರ್ಕ್ ಇರುವುದಿಲ್ಲ ಹಾಗೂ ಸಂಪೂರ್ಣವಾಗಿ ಆನ್ಲೈನ್ ಡಿಜಿಟಲ್ ರೂಪದಲ್ಲಿ ಪ್ರಕ್ರಿಯೆ ನಡೆಯಲಿದೆ.
  5. ಒಂದು ವೇಳೆ ಸಾಕಷ್ಟು ಸಮಯಗಳಿಂದ ನೀವು ಈ ವಿಧಾನದ ಮೂಲಕ ಲೋನ್ ಪಡೆದುಕೊಳ್ಳುತ್ತಿದ್ದಾರೆ ಮತ್ತೆ ಮತ್ತೆ ಲೋನ್ ಪಡೆದುಕೊಳ್ಳುವಾಗ ಪದೇಪದೇ ಅದೇ ಪ್ರೋಸೆಸ್ ಅನ್ನು ಅನುಸರಿಸಬೇಕಾದ ಅಗತ್ಯ ಇಲ್ಲ.
  6. ಯಾವುದೇ ಸಮಯದಲ್ಲಿ ಅರ್ಜೆಂಟಾಗಿ ಹಣ ಬೇಕಾದಲ್ಲಿ ನೀವು ನಿಮಿಷಗಳಲ್ಲಿ ಇಲ್ಲಿ ಲೋನ್ ಪಡೆದುಕೊಳ್ಳಬಹುದು.
  7. RBI ನಿಂದ ಅಪ್ರೂವ್ ಆಗಿರುವಂತಹ NBFC ಕಂಪನಿಗಳಿಂದ ಲೋನ್ ಪಡೆದುಕೊಳ್ಳುವ ಕಾರಣದಿಂದಾಗಿ ಇದು ಸಂಪೂರ್ಣ ಸುರಕ್ಷಿತವಾಗಿರುತ್ತದೆ.

NBFC ಪರ್ಸನಲ್ ಲೋನ್ – ಉದಾಹರಣೆಯ ಜೊತೆಗೆ ವಿವರಣೆ- What is NDFC personal Loan.

  1. 90 ಸಾವಿರ ರೂಪಾಯಿಗಳವರೆಗೆ ಸಾಲವನ್ನು 12 ತಿಂಗಳ ಸಮಯಾವಧಿಯ ಜೊತೆಗೆ ನೀಡಲಾಗುತ್ತದೆ.
  2. ಇದರ ಮೇಲೆ ಬಡ್ಡಿದರ ಸರಿಸುಮಾರು 33% ಅಂದ್ರೆ 29,700 ಜಿಎಸ್‌ಟಿ ಜೊತೆಗೆ ಸೇರಿರುತ್ತದೆ.
  3. ಪ್ರೊಸೆಸಿಂಗ್ ಫೀಸ್ ರೂಪದಲ್ಲಿ ಕೂಡ 9000ಗಳವರೆಗೆ ನೀಡಬೇಕಾಗಿರುತ್ತದೆ.
  4. ಲೋನ್ ನಿಮ್ಮ ಕೈಗೆ ಬರುವಾಗ 79 ಸಾವಿರ ರೂಪಾಯಿ ನಲ್ಲಿ ಬರುತ್ತದೆ ಹಾಗೂ ನೀವು ಕಟ್ಟುವಾಗ ಲೋನ್ 1.19 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರುತ್ತದೆ.
  5. ಸರಿಯಾದ ಸಮಯದಲ್ಲಿ ಲೋನ್ ಕಟ್ಟದೆ ಹೋದಲ್ಲಿ ಪೆನಾಲ್ಟಿಯನ್ನು ಕೂಡ ಈ ಸಂದರ್ಭದಲ್ಲಿ ನೀವು ಕಟ್ಟಬೇಕಾಗಿ ಬರಬಹುದು.
  6. 18% ಜಿಎಸ್‌ಟಿ ಅನ್ನು ಕೂಡ ಲೋನ್ ಮೇಲೆ ವಿಧಿಸಲಾಗಿರುತ್ತದೆ.

ಇದನ್ನು ಕೂಡ ಓದಿ: Instant Cash: ಪ್ರಶ್ನೆ ಕೇಳಲ್ಲ, ಗಿರವಿ ಗ್ಯಾರಂಟಿ ಎರಡು ಬೇಡ- 6 ನಿಮಿಷಕ್ಕೆ ಕೊಡ್ತಾರೆ ಲೋನ್. ಅರ್ಜಿ ಹಾಕಿ ನೇರವಾಗಿ ಬ್ಯಾಂಕ್ ಖಾತೆಗೆ

NBFC ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಯೋಗ್ಯತೆಗಳು- Eligibility to get Personal Loan

  1. 21ರಿಂದ 59 ವರ್ಷಗಳ ನಡುವಿನ ಭಾರತೀಯರಾಗಿರಬೇಕು ಹಾಗೂ ಪ್ರತಿ ತಿಂಗಳು ಆದಾಯ ಬರುತ್ತಿರಬೇಕು.
  2. ಬ್ಯಾಂಕಿನಲ್ಲಿ ಸೇವಿಂಗ್ ಅಕೌಂಟ್ ಇರಬೇಕು ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  3. NSCH ಅವಶ್ಯಕತೆ ಕೂಡ ಇರುತ್ತದೆ ಹಾಗೂ ನಿಮ್ಮ ಬಳಿ ಉತ್ತಮ ಇಂಟರ್ನೆಟ್ ಇರುವ ಸ್ಮಾರ್ಟ್ ಫೋನ್ ಬೇಕಾಗಿರುತ್ತದೆ.
  4. ಪ್ರಮುಖವಾಗಿ ನಿಮ್ಮ ನಗರದಲ್ಲಿ ಈ ಸೇವೆಯ ಲಭ್ಯತೆ ಇದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಬೇಕು.

NBFC ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಗಳು- Documents required to get Personal Loan.

  1. ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಸೆಲ್ಫಿ ಫೋಟೋ ಬೇಕಾಗಿರುತ್ತದೆ.
  2. ಕೆಲವೊಂದು ಕಡೆಗಳಲ್ಲಿ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ನಿಮ್ಮ ಇನ್ಕಮ್ ಪ್ರೂಫ್ ಅನ್ನು ಸಾಬೀತುಪಡಿಸುವಂತಹ ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ.

NBFC ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ?- How to get Personal Loan

  1. NBFC ಲೋನ್ ಅಪ್ಲಿಕೇಶನ್ ಗಳು ಯಥೇಚ್ಛವಾಗಿ ನಿಮಗೆ ಪ್ಲೇ ಸ್ಟೋರ್ ನಲ್ಲಿ ಸಿಗುತ್ತದೆ. ಅವುಗಳಲ್ಲಿ ನಿಮ್ಮ ನಂಬರ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.
  2. ಈ ಸಂದರ್ಭದಲ್ಲಿ ಪ್ರಮುಖವಾಗಿ KYC ಪ್ರಕ್ರಿಯೆಯನ್ನು ಮುಗಿಸಿಕೊಳ್ಳುವುದಕ್ಕಾಗಿ ಅದಕ್ಕೆ ಬೇಕಾಗಿರುವ ಡಾಕ್ಯುಮೆಂಟ್ ಗಳನ್ನು ಒದಗಿಸಿ ಈ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಿ.
  3. ನಿಮ್ಮ ಅರ್ಹತೆಯನ್ನು ಈ ಸಂದರ್ಭದಲ್ಲಿ ಚೆಕ್ ಮಾಡಿಕೊಳ್ಳಿ ಹಾಗೂ ಅಪ್ಲಿಕೇಶನ್ ನಲ್ಲಿ ನಿಮಗೆ ಎಷ್ಟು ಲೋನ್ ಸಿಗುತ್ತದೆ ಎನ್ನುವಂತಹ ಮಾಹಿತಿ ನೀಡಲಾಗುತ್ತದೆ ಅದಕ್ಕೆ ಅನುಸಾರವಾಗಿ ಓಟಿಪಿ ಜನರೇಟ್ ಮಾಡಿಕೊಂಡು ಅದಕ್ಕೆ ಒಪ್ಪಿಗೆ ನೀಡಿ.
  4. ಈ ಸಂದರ್ಭದಲ್ಲಿ ಎಲ್ಲಾ ಕಂಡೀಶನ್ ಗಳಿಗೆ ಒಪ್ಪಿಗೆ ನೀಡಿ ಹಾಗೂ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕೂಡ ನೀಡಬೇಕಾಗಿರುತ್ತದೆ.
  5. ಕೆಲವೇ ನಿಮಿಷಗಳಲ್ಲಿ ನಿಮ್ಮ ನೀಡಿರುವಂತಹ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

Comments are closed.