Gold Rate: ದೀಪಾವಳಿ ಹಬ್ಬುಕ್ಕೂ ಮುನ್ನ ದಿಡೀರ್ ಕುಸಿದ ಚಿನ್ನ- ಅಂಗಡಿಗೆ ಮುಗಿಬಿದ್ದ ಜನ.

Gold Rate Today – Explained in Kannada.

Gold Rate: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಭಾರತ ದೇಶವೇ ಆಚರಿಸುವಂತಹ ದೀಪಾವಳಿ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಜನರು ಹೊಸ ಹೊಸ ವಸ್ತುಗಳನ್ನು ಖರೀದಿಸುವುದು ಸರ್ವೇಸಾಮಾನ್ಯ. ಅದರಲ್ಲೂ ವಿಶೇಷವಾಗಿ ದೀಪಾವಳಿ ಹಬ್ಬದಂತಹ ಅತ್ಯಂತ ಪವಿತ್ರವಾದ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸದೆ ಇರಲು ಸಾಧ್ಯವಿಲ್ಲ. ಬೇಡಿಕೆ ಹೆಚ್ಚಾಗುವ ಕಾರಣದಿಂದಾಗಿ ಚಿನ್ನದ ಬೆಲೆ ಕೂಡ ಈ ಸಂದರ್ಭದಲ್ಲಿ ಏರಿಕೆಯಾಗುತ್ತದೆ ಎನ್ನುವುದನ್ನು ನಾವು ಸಾಕಷ್ಟು ಬಾರಿ ಗಮನಿಸಿದ್ದೇವೆ. ಆದರೆ ಈ ಬಾರಿ ಎಲ್ಲರಿಗೂ ಕೂಡ ಆಶ್ಚರ್ಯ ಕಾದಿದೆ.

ಸ್ನೇಹಿತರೆ, ಈ ಸುದ್ದಿ ಓದುವಾಗ ಮತ್ತೊಂದು ಸುದ್ದಿಯ ಬಗ್ಗೆ ಹೇಳಲೇಬೇಕು, ಎಲ್ಲರೂ ಲೋನ್ ತೆಗೆದುಕೊಂಡು ಇರುತ್ತಾರೆ , ಅಥವಾ ಲೋನ್ ಪಡೆಯಲು ಬ್ಯಾಂಕ್ ಗೆ ಹೋಗಿರುತ್ತೀರಾ- ಆದರೆ ಬ್ಯಾಂಕ್ ಗಳು ಸಾಮಾನ್ಯ ಜನರಿಗೆ ಇಲ್ಲದ ರೂಲ್ಸ್ ಹೇಳಿ ಲೋನ್ ರಿಜೆಕ್ಟ್ ಮಾಡಿರುತ್ತಾರೆ, ಅದಕ್ಕಾಗಿಯೇ RBI ಹೊಸ ರೂಲ್ಸ್. ಈ ರೂಲ್ಸ್ ತಿಳಿದರೆ ಬ್ಯಾಂಕ್ ಗಳು ಕೇಳಿದ ತಕ್ಷಣ ಲೋನ್ ಕೊಡುತ್ತಾರೆ. ಈ ಕುರಿತು ಮಾಹಿತಿ ಕೊನೆಯಲ್ಲಿ ನೀಡಲಾಗಿದ್ದು, ಸದುಪಯೋಗ ಪಡೆಸಿಕೊಳ್ಳಿ.

Gold Rate Today – Explained in Kannada.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಕುಸಿತದ ಕಾರಣದಿಂದಾಗಿ ಭಾರತ ದೇಶದ ದೇಶಿ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಅಗ್ಗವಾಗಿದೆ. ನಮ್ಮ ರಾಜ್ಯದ ರಾಜಧಾನಿ ಆಗಿರುವಂತಹ ಬೆಂಗಳೂರಿನಲ್ಲಿ ಚಿನ್ನದ ಬೆಲೆಯ(Bangalore gold price) ಬಗ್ಗೆ ಮಾತನಾಡುವುದಾದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,190 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 62,390 ರೂಪಾಯಿ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಗೊತ್ತಾ??
ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ 22 ಕ್ಯಾರೆಟ್ ಚಿನ್ನವನ್ನು ಖರೀದಿಸುವ ಕಾರಣದಿಂದಾಗಿ ಬನ್ನಿ 10 ಗ್ರಾಂ 22 ಕ್ಯಾರೆಟ್ ಮೌಲ್ಯದ ಚಿನ್ನದ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ. ಬೆಂಗಳೂರು ಹೈದರಾಬಾದ್ ಕೊಲ್ಕತ್ತಾ ಹಾಗೂ ಕೇರಳದಲ್ಲಿ 10 ಗ್ರಾಂ 22 ಕ್ಯಾರೆಟ್ ಮೌಲ್ಯದ ಚಿನ್ನದ ಬೆಲೆಗೆ 57, 190 ರೂಪಾಯಿ ಆಗಿದೆ. ಚೆನ್ನೈನಲ್ಲಿ 56340 ಹಾಗೂ ದೆಹಲಿಯಲ್ಲಿ 57350 ರೂಪಾಯಿಗಳಾಗಿವೆ.

ದೇಶದ ಪ್ರಮುಖ ನಗರಗಳಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ಎಷ್ಟು ಗೊತ್ತಾ??
ತಿಳಿದು ಬಂದಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂಬುದಾಗಿ ಕೂಡ ತಿಳಿದು ಬಂದಿದ್ದು ಇನ್ನು ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ 100 ಗ್ರಾಂ ಬೆಳ್ಳಿಗೆ ದೆಹಲಿ ಹಾಗೂ ಕೋಲ್ಕತ್ತದಲ್ಲಿ 7560 ಹಾಗೂ ಚೆನ್ನೈ ಹೈದರಾಬಾದ್ ಕೇರಳದಲ್ಲಿ 7850 ಹಾಗೂ ಬೆಂಗಳೂರಿನಲ್ಲಿ 7,400 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏನಾಗಿದೆ??
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಔನ್ಸ್ ಲೆಕ್ಕದಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಗೆ 1955 ಡಾಲರ್ ಇಳಿಕೆಯಾಗಿದ್ದು ಬೆಳ್ಳಿಯ ವಿಚಾರದಲ್ಲಿ 23.06 ಡಾಲರ್ ಆಗಿದೆ ಎನ್ನುವುದಾಗಿ ತಿಳಿದು ಬಂದಿದೆ. ಹಬ್ಬದ ಸಂದರ್ಭದಲ್ಲಿ ಕೂಡ ಚಿನ್ನ ಇಳಿಕೆ ಆಗಿರುವುದು ಖರೀದಿದಾರರಿಗೆ ಸಂತೋಷದ ಸುದ್ದಿಯಾಗಿದೆ.

ಲೋನ್ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ RBI- ಇನ್ನು ಗ್ರಾಹಕರಿಗೆ ಲೋನ್ ಸಿಗುವುದು ಮತ್ತಷ್ಟು ಸುಲಭ. Loan

Comments are closed.