ಉತ್ತರ ಕರ್ನಾಟಕದ ಸ್ಪೆಶಲ್.. ಒಂದು ತಿಂಗಳಾದರೂ ಕೆಡದೆ ಇರುವ ಗೊಡ್ಡು ಖಾರ ಮಾಡುವ ಸುಲಭ ವಿಧಾನ ಹೇಗೆ ಗೊತ್ತಾ?

ಹಳ್ಳಿ ಕಡೆ ಮಾಡುವ ಅಡುಗೆಗಳು ಆರೋಗ್ಯಕ್ಕೆ ಒಳ್ಳೆಯದು ಹಾಗೆಯೇ ರುಚಿಕರವಾಗಿರುತ್ತದೆ. ಹಳ್ಳಿ ಕಡೆಗಳಲ್ಲಿ ಮಾಡುವ ಜನಪ್ರಿಯ ತಿಂಡಿಗಳಲ್ಲಿ ಒಂದು ಗೊಡ್ಡು ಖಾರ್, ಇದನ್ನು ಒಂದು ತಿಂಗಳ ತನಕ ಇಟ್ಟರು ಸಹ ಕೆಡುವುದಿಲ್ಲ. ಇದರ ರುಚಿ ಬಗ್ಗೆ ಹೇಳಲು ಮತ್ತೊಂದು ಮಾತಿಲ್ಲ. ಇಂದು ಈ ಗೊಡ್ಡು ಖಾರ ಮಾಡುವ ವಿಧಾನ ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಗೊಡ್ಡು ಖಾರ ಮಾಡಲು ಬೇಕಾಗುವ ಸಾಮಗ್ರಿಗಳು ಹೀಗೆ.. ಮಣ್ ಕಟ್ ಮೆಣಸಿನಕಾಯಿ-15, ಒಣಮೆಣಸಿನಕಾಯಿ-15, ಬ್ಯಾಡಗಿ ಮೆಣಸಿನಕಾಯಿ-10, ಹುಣಸೆ ಹಣ್ಣು-50ಗ್ರಾಮ್, ಈರುಳ್ಳಿ-ಅರ್ಧ, ಕೊತ್ತಂಬರಿ ಸೊಪ್ಪು- ಒಂದು ಹಿಡಿಯಷ್ಟು, ಪುದೀನಾ-ಒಂದು ಹಿಡಿಯಷ್ಟು, ಕರಿಬೇವು-ಸ್ವಲ್ಪ, ಬೆಳ್ಳುಳ್ಳಿ-2 ಗೆಡ್ಡೆ, ಬೆಲ್ಲ-ಒಂದು ಟೀ ಸ್ಪೂನ್, ಜೀರಿಗೆ – ಎರಡು ಟೀ ಸ್ಪೂನ್, ತೆಂಗಿನಕಾಯಿ ತುರಿ- ಒಂದು ಟೀ ಸ್ಪೂನ್, ಎಣ್ಣೆ- 1 ಟೀ ಸ್ಪೂನ್, ಹಾಗೂ ರುಚಿಗೆ ಬೇಕಾದಷ್ಟು ಉಪ್ಪು.

ಮಾಡುವ ವಿಧಾನ :- ಹುಣಸೆಹಣ್ಣನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ನಂತರ ಅದನ್ನು 5 ರಿಂದ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಸ್ಟವ್ ಆನ್ ಮಾಡಿ, ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಅದಕ್ಕೆ ಮೂರು ಬಗೆಯ ಮೆಣಸಿನಕಾಯಿಗಳನ್ನು ಹಾಕಿ 4 ರಿಂದ 5 ನಿಮಿಷಗಳ ಕಾಲ ಹುರಿಯಿರಿ. ನಂತರ ಅದನ್ನು ಒಂದು ತಟ್ಟೆಗೆ ಹಾಕಿಡಿ, ನಂತರ ಅದೇ ಬಾಣಲೆಗೆ ಹೆಚ್ಚಿರುವ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿ. ನಂತರ ತಣ್ಣಗಾಗಲು ಹಾಗೆಯೇ ಬಿಡಿ.

ಇದಾದ ಬಳಿಕ ಮಿಕ್ಸಿ ಜಾರ್ ತೆಗೆದುಕೊಳ್ಳಿ, ಅದಕ್ಕೆ ಹುರಿದಿಟ್ಟ ಮೆಣಸಿನ ಕಾಯಿ ಹಾಕಿ ತರಿತರಿಯಾಗಿ ಗ್ರೈಂಡ್ ಮಾಡಿ, ನಂತರ ಅದೇ ಮೆಣಸಿನಕಾಯಿ ಪೌಡರ್ ಇರುವ ಅದೇ  ಜಾರ್ ಗೆ, ಫ್ರೈ ಮಾಡಿದ ಈರುಳ್ಳಿ, ಜೊತೆಗೆ ಬೆಳ್ಳುಳ್ಳಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಪುದೀನಾ, ಜೀರಿಗೆ, ಕರಿಬೇವುಹುಣಸೆ ಹಣ್ಣಿನ ರಸ, ರುಚಿಗೆ ಬೇಕಾದಷ್ಟು ಉಪ್ಪು, ಇದಿಷ್ಟು ಸೇರಿಸಿ ಚೆನ್ನಾಗಿ ರುಬ್ಬಿ. ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸೇರಿಸಹುದು. ರುಬ್ಬಿದ ನಂತರ, ರುಚಿಯಾದ ಗೊಡ್ಡು ಖಾರ ಸವಿಯಲು ಸಿದ್ಧವಾಗಿದೆ.