Cooking Recipe: ಮನೆಯಲ್ಲಿಯೇ ಓವೆನ್ ಇಲ್ಲದೆ, ಆರೋಗ್ಯಕರ ಪಿಜ್ಜಾ ಮಾಡುವುದು ಹೇಗೆ ಗೊತ್ತೇ?? ಖರ್ಚು ಕೂಡ ಉಳಿತಾಯ, ರುಚಿ ಕೂಡ ಮಸ್ತ್. ಹೇಗೆ ಗೊತ್ತೆ?

Cooking Recipe: ಇಟಾಲಿಯನ್ ತಿಂಡಿ ಪಿಜ್ಜಾ ನಮ್ಮ ದೇಶದಲ್ಲಿ ಎಲ್ಲರಿಗೂ ಬಹಳ ಇಷ್ಟ ಆಗುವ ತಿಂಡಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರೂ ಕೂಡ ಪಿಜ್ಜಾವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಮೊದಲು ಕೆಲವು ಕಡೆಗಳಲ್ಲಿ ಮಾತ್ರ ಪಿಜ್ಜಾ ಸಿಗುತ್ತಿತ್ತು, ಆದರೆ ಈಗ ಸಣ್ಣ ಬೇಕರಿ, ಕೆಫೆ ಇವುಗಳಲ್ಲಿ ಸಹ ಪಿಜ್ಞಾ ಸಿಗುತ್ತದೆ. ಮೈದಾ ಹಿಟ್ಟಿನಿಂದ ಇದನ್ನು ಮಾಡುವುದರಿಂದ ಆರೋಗ್ಯಕರ ತಿಂಡಿ ಎಂದು ಪರಿಗಣಿಸುವುದಿಲ್ಲ. ಆದರೆ ಚಪಾತಿ ಹಿಟ್ಟನ್ನು ಬಳಸಿ, ನೀವು ಮನೆಯಲ್ಲೇ ಆರೋಗ್ಯಕರವಾದ ಪಿಜ್ಜಾ ತಯಾರಿಸಬಹುದು. ಅದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮೊದಲಿಗೆ ಪಿಜ್ಜಾ ಸಾಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು,
ಟೊಮ್ಯಾಟೋ 2 ರಿಂದ 3, ಆಲಿವ್ ಆಯ್ಲ್ 2 ಟೀಸ್ಪೂನ್, ಸಣ್ಣದಾಗಿ ಹೆಚ್ಚಿದ ಈರುಳ್ಳಿ 1, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ 4, ಲವಂಗ 5, ಉಪ್ಪು ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ 2 ಟೀಸ್ಪೂನ್, ರೆಡ್ ಚಿಲ್ಲಿ ಫ್ಲೇಕ್ಸ್ 1 ಟೀಸ್ಪೂನ್, ಓರೆಗಾನೊ 1 ಟೀಸ್ಪೂನ್. ಒಂದು ಪ್ಯಾನ್ ಅನ್ನು ಸ್ಟವ್ ಮೇಲೆ ಇಟ್ಟು, ನೀರು ಹಾಕಿ, ಬಿಸಿ ಮಾಡಿ, ನಂತರ ಟೊಮ್ಯಾಟೋ ಹಾಕಿ 10 ನಿಮಿಷ ಕುದಿಸಿ. ಬಳಿಕ ನೀವು ಸ್ಟವ್ ಆಫ್ ಮಾಡಿ, ನೀರನ್ನು ಫಿಲ್ಟರ್ ಮಾಡಿ, ಟೊಮ್ಯಾಟೋವನ್ನು ತಣ್ಣೀರಿನಿಂದ ತೊಳೆದು, ಅವುಗಳ ಸಿಪ್ಪೆ ತೆಗೆಯಿರಿ. ಬಳಿಕ ಟೊಮ್ಯಾಟೊವನ್ನು ಪೇಸ್ಟ್ ಮಾಡಿ. ಈಗ ಸ್ಟವ್ ಮೇಲೆ ಮೀಡಿಯಂ ಫ್ಲೇಮ್ ನಲ್ಲಿ ಪ್ಯಾನ್ ಇಟ್ಟು ಬಿಸಿ ಮಾಡಿ, ಇದಕ್ಕೆ 2 ಸ್ಪೂನ್ ಆಲಿವ್ ಆಯ್ಲ್ ಹಾಕಿ, ನಂತರ ಈರುಳ್ಳಿ ಬೆಳ್ಳುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಕಲರ್ ಬರುವ ವರೆಗು ಫ್ರೈ ಮಾಡಿ. ಈ ಪಿಜ್ಜಾ ಸಾಸ್ ಅನ್ನು ಒಂದು ಬಾಣಲೆಗೆ ಹಾಕಿ. ಇದಕ್ಕೆ ಉಪ್ಪು, ಸಕ್ಕರೆ, ರೆಡ್ ಚಿಲ್ಲಿ ಫ್ಲೆಕ್ಸ್, ಮತ್ತು ಓರಗಾನೋ ಹಾಕಿ ಈ ಸಾಸ್ ಥಿಕ್ ಆಗುವವರೆಗು ಬೇಯಿಸಿ. ನಂತರ ಜಾರ್ ಗೆ ಹಾಕಿ ಇಡಿ. ಇದನ್ನು ಓದಿ..Kannada News: ನನಗೆ ಅವಾರ್ಡ್ ಕೊಡಬೇಕು ಯಾರು ಗುರುತಿಸುತ್ತಿಲ್ಲ ಎಂದ ನಿವೇದಿತಾ ಗೌಡ: ಯಾವ ಅವಾರ್ಡ್ ಬೇಕಂತೆ ಗೊತ್ತೇ?? ನೀವು ಯಾವ ಅವಾರ್ಡ್ ಕೊಡುತ್ತೀರಾ??

ವೆಜಿಟೇಬಲ್ ಪಿಜ್ಜಾ ಮಾಡಲು ಬೇಕಾಗುವ ಸಾಮಗ್ರಿಗಳು, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಬೇಯಿಸಿದ ಮೆಕ್ಕೆಜೋಳ, ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ, ಸಣ್ಣದಾಗಿ ಕತ್ತರಿಸಿದ ಮಶ್ರೂಮ್, ಕಪ್ಪು ಆಲಿವ್. ಇದೆಲ್ಲವನ್ನು ಸಣ್ಣದಾಗಿ ಕಟ್ ಮಾಡಿ ಇಟ್ಟುಕೊಳ್ಳಿ. ನಂತರ ಚಪಾತಿ ಹಿಟ್ಟು ತಯಾರಿಸಿ, ಅದನ್ನು ರೌಂಡ್ ಶೇಪ್ ನಲ್ಲಿ ಥಿಕ್ ಆಗಿ ಲಟ್ಟಿಸಿ. ಈಗ ಇದಕ್ಕೆ ಪಿಜ್ಜಾ ಸಾಸ್ ಹಚ್ಚಿ, ಬಳಿಕ ಪುಡಿ ಮಾಡಿರುವ ಚೀಸ್ ಅನ್ನು ಇದರ ಮೇಲೆ ಹರಡಿ, ನಂತರ ಕಟ್ ಮಾಡಿರುವ ತರಕಾರಿಗಳನ್ನು ಇದರ ಮೇಲೆ ಹಾಕಿ, ನಂತರ ಮತ್ತೊಂದು ಸಾರಿ ಚೀಸ್ ಹಾಕಿ. ಈಗ ಸ್ಟವ್ ಮೇಲೆ ಪ್ಯಾನ್ ಇಟ್ಟು, ಬಿಸಿ ಮಾಡಿ. ಇದರ ಮೇಲೆ ಬೆಣ್ಣೆ ಹಚ್ಚಿ. ರೆಡಿ ಮಾಡಿರುವ ಪಿಜ್ಜಾ ಇಡಿ. ಈ ಪ್ಯಾನ್ ಅನ್ನು ಒಂದು ಪಾತ್ರೆಯಿಂದ ಮುಚ್ಚಿ ಚೀಸ್ ಕರಗಲು ಬಿಡಿ. ಅದನ್ನು ಹೊರ ತೆಗೆದು, ಟ್ರೈಯಾಂಗಲ್ ಶೇಪ್ ನಲ್ಲಿ ಕಟ್ ಮಾಡಿ ಮಕ್ಕಳಿಗೆ ತಿನ್ನಲು ಕೊಡಿ. ಆರೋಗ್ಯಕರವಾದ ಪಿಜ್ಜಾ ಇದಾಗಿದೆ. ಇದನ್ನು ಓದಿ..Kannada News: 57 ವರ್ಷದ ಶಾರುಖ್ ಖಾನ್ ಗೆ ಡೇಟಿಂಗ್ ಆಫರ್ ಕೊಟ್ಟ ಯುವತಿ: ಷಾಕಿಂಗ್ ಉತ್ತರ ಕೊಟ್ಟ ಶಾರುಖ್ ಹೇಳಿದ್ದೇನು ಗೊತ್ತೇ??