ಅತಿ ಸುಲಭವಾಗಿ ಮನೆಯ ಮಂದಿಯೆಲ್ಲ ಇಷ್ಟ ಪಡುವೆ ಹಾಗೆ ಪುದೀನಾ ರೈಸ್ ಮಾಡುವುದು ಹೇಗೆ ಗೊತ್ತೇ?? ಒಂದು ಸಲ ಟ್ರೈ ಮಾಡಿ ಎಲ್ಲರೂ ಪ್ಲೇಟ್ ಖಾಲಿ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ ಪುದೀನಾ ಪರಿಮಳ ಕೆಲವರಿಗೆ ಇಷ್ಟ ಕೆಲವರಿಗೆ ಪುದೀನಾ ಪರಿಮಳವೇ ಆಗುವುದಿಲ್ಲ, ಅಮ್ಥವರು ನಾವಿಲ್ಲಿ ಹೇಳುವಂತೆ ಪುದೀನಾ ರೈಸ್ ನ್ನು ಒಮ್ಮೆ ಮಾಡಿ ತಿಂದು ನೋಡಿ, ಖಂಡಿತವಾಗಿ ಇಷ್ಟಪಟ್ಟು ತಿಂತಿರಾ.

ಪುದೀನಾ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ (ನೀವು ಊಟ ಮಾಡುವ ಅಕ್ಕಿ ಬಳಸಬಹುದು) ೨ ಕಪ್ (ಹದಿನೈದು ನಿಮಿಷ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ), ಒಂದು ಕಟ್ ಪುದೀನಾ, ಕೊತ್ತಂಬರಿ ಸೊಪ್ಪು ಒಂದು ಕಪ್, ಹೆಚ್ಚಿಟ್ಟುಕೊಂಡ ಒಂದು ಈರುಳ್ಳಿ, ೨ ಟೊಮ್ಯಾಟೋ, ಒಂದು ಕಪ್ ಹಸಿ ಬಟಾಣಿ, ಶುಂಠಿ ೨ ಇಂಚು, ಹಸಿಮೆಣಸು ೪-೫, ಚಕ್ಕೆ ಲವಂಹ, ಏಲಕ್ಕಿ ತಲಾ ೨, ನಿಂಬುರಸ ೨ ಚಮಚ, ಪಲಾವ್ ಎಲೆ, ೨ ಚಕ್ರ ಮೊಗ್ಗು, ರುಚಿಗೆ ತಕ್ಕಷ್ಟು ಉಪ್ಪು, ಸೋಂಪು ಒಂದು ಚಮಚ, ಜೀರಿಗೆ ಒಂದು ಚಮಚ, ತುಪ್ಪ ಮತ್ತು ಎಣ್ಣೆ ೨ ಚಮಚ.

ಮಾಡುವ ವಿಧಾನ: ಮೊದಲಿಗೆ ಉದುರುಉದುರಾದ ಅನ್ನವನ್ನು ಮಾಡಿಟ್ಟುಕೊಳ್ಳಿ. (ಅನ್ನವನ್ನು ಮಾಡುವಾಗ ಅಕ್ಕಿ ಹಾಗೂ ನೀರಿಗೆ ಒಂದು ಪಲಾವ್ ಎಲೆ, ಚಕ್ಕೆ, ಸ್ವಲ್ಪ ಪುದೀನಾ ಎಲೆ, ಒಂದು ಚಮಚ ತುಪ್ಪ ಹಾಕಿ ಅನ್ನ ಮಾಡಿಕೊಳ್ಳಿ) ಈಗ ಒಂದು ಮಿಕ್ಸರ್ ಜಾರಿಗೆ, ಶುಂಠಿ, ಹಸಿಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಪುದೀನಾ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ವಲ್ವ ನೀರನ್ನು ಹಾಕಿ ಪೇಸ್ಟ್ ರೀತಿಯಲ್ಲಿ ರುಬ್ಬುಕೊಳ್ಳಿ. ಈಗ ಒಂದು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ. ನಂತರ ಸೋಂಪು, ಜೀರಿಗೆ, ಚಕ್ರ, ಮೊಗ್ಗು, ಪಲಾವ್ ಎಲೆ ಹಾಕಿ ಹುರಿಯಿರಿ.

ಈಗ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹಸಿ ಬಟಾಣಿ, ಟೊಮ್ಯಾಟೋ ಹಾಕಿ ಬೇಯಿಸಿಕೊಳ್ಳಿ. ಇದಕ್ಕೆ ಮಾಡಿಟ್ಟುಕೊಂಡ ಪೇಸ್ಟ್ ಹಾಕಿ ಮೊಗಚಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ೨ ನಿಮಿಷ ಬೇಯಿಸಿ. ನಂತರ ಮಾಡಿಟ್ಟುಕೊಂಡ ಅನ್ನವನ್ನು ಇದಕ್ಕೆ ಸೇರಿಸಿ. ಕೊನೆಯಲ್ಲಿ ನಿಂಬೆರಸ, ತುಪ್ಪ, ಪುದೀನಾ ಎಲೆ ಹಾಕಿ ಅಲಂಕರಿಸಿದರೆ ರುಚಿಯಾದ ಪುದೀನಾ ರೈಸ್ ಸವಿಯಲು ಸಿದ್ಧ. ಪುದೀನಾ ರೈಸ್ ರೆಸಿಪಿಯನ್ನು ಕೆಳಗಿನ ವಿಡಿಯೋದಲ್ಲಿಯೂ ನೋಡಬಹುದು.